Hindenburg: ಅದಾನಿ ಗ್ರೂಪ್‌ಗೆ ಎಲ್‌ಐಸಿ ಮಾಡಿದ 30,000 ಕೋಟಿ ರೂ. ಹೂಡಿಕೆ ನಷ್ಟದಲ್ಲಿ
ಅದಾನಿ ಗ್ರೂಪ್‌ನ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನಲ್ಲಿ ಎಲ್‌ಐಸಿ 4,81,74,654 ಷೇರುಗಳನ್ನು ಹೊಂದಿದೆ. ಡಿಸೆಂಬರ್ 2022ರ ಪ್ರಕಾರ ಇದು ಸಂಸ್ಥೆಯ ಒಟ್ಟು ಬಂಡವಾಳದ ಶೇಕಡ 4.23ರಷ್ಟಿದೆ.
ಈ ಹಿಂದೆ ಅದಾನಿ ಗ್ರೂಪ್‌ನ ಸ್ಟಾಕ್‌ಗಳು ಭಾರೀ ಲಾಭವನ್ನು ಕಾಣುತ್ತಿದ್ದವು. ಈ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಅದಾನಿ ಗ್ರೂಪ್‌ನಲ್ಲಿ ಬಾರೀ ಹೂಡಿಕೆಯನ್ನು ಮಾಡಿದೆ. ಆದರೆ ಈಗ ಎಲ್‌ಐಸಿ ಅದಾನಿ ಗ್ರೂಪ್‌ನಲ್ಲಿ ಮಾಡಿದ ಹೂಡಿಕೆಯು ನಷ್ಟವನ್ನು ಕಾಣುತ್ತಿದೆ. ಫೆಬ್ರವರಿ 23ರ ಲೆಕ್ಕಾಚಾರದ ಪ್ರಕಾರ ಅದಾನಿ ಗ್ರೂಪ್‌ನಲ್ಲಿನ ಹೂಡಿಕೆ ಮೌಲ್ಯವು 27,000 ಕೋಟಿ ರೂಪಾಯಿಗೆ ತಲುಪಿದೆ. ಈ ಎಲ್ಲ ಬೆಳವಣಿಗೆಯೂ ಅದಾನಿ ಗ್ರೂಪ್ ವಿರುದ್ಧ ಹಿಂಡನ್‌ಬರ್ಗ್ ವರದಿಯ ಬಳಿಕ ಕಂಡುಬಂದಿದೆ.
ಡಿಸೆಂಬರ್ ಅಂತ್ಯದ ವೇಳೆಗೆ ಅದಾನಿ ಗ್ರೂಪ್ ಸ್ಟಾಕ್‌ನಲ್ಲಿ ಈಕ್ವಿಟಿ ಮತ್ತು ಸಾಲದ ಆಧಾರದಲ್ಲಿ ಎಲ್‌ಐಸಿಯ 35,917 ಕೋಟಿ ರೂಪಾಯಿ ಇದೆ ಎಂದು ಎಲ್‌ಐಸಿಯು ಜನವರಿ 30ರಂದು ತಿಳಿಸಿದೆ. ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆ ವಂಚನೆಯಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದ ಹಿಂಡನ್‌ಬರ್ಗ್ ವರದಿಯು ಜನವರಿಯಲ್ಲಿಯೇ ಪ್ರಕಟವಾಗಿದೆ. ಇದಾದ ಬಳಿಕ ಅದಾನಿ ಸ್ಟಾಕ್ ಭಾರೀ ಇಳಿದಿದೆ. ಎಲ್‌ಐಸಿ, ಎಸ್‌ಬಿಐ ಅಪಾಯದಲ್ಲಿದೆ ಎಂಬ ವದಂತಿ ಹಬ್ಬಿದೆ. ಆ ಸಂದರ್ಭದಲ್ಲಿ ಎಲ್‌ಐಸಿ ಸ್ಪಷ್ಟಣೆಯನ್ನು ನೀಡಿತ್ತು.

ಎಲ್ಲ ಅದಾನಿ ಗ್ರೂಪ್ ಸಂಸ್ಥೆಗಳ ಈಕ್ವಿಟಿಯನ್ನು 30,127 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿದೆ ಎಂದು ಎಲ್‌ಐಸಿಯು ಹೇಳಿದೆ. ಇನ್ನು ಜನವರಿ 27, 2023ರ ಪ್ರಕಾರ ಮಾರುಕಟ್ಟೆ ಮೌಲ್ಯವು 56,142 ಕೋಟಿ ರೂಪಾಯಿ ಆಗಿದೆ. ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆ ಮ್ಯಾನುಪಲೇಷನ್ ಮಾಡಿದೆ ಎಂಬ ಹಿಂಡನ್‌ಬರ್ಗ್ ವರದಿಯ ಬಳಿಕ ಅದಾನಿ ಗ್ರೂಪ್‌ನ ಎಲ್ಲ 10 ಸ್ಟಾಕ್‌ಗಳು ಬರೋಬ್ಬರಿ 146 ಬಿಲಿಯನ್ ಡಾಲರ್ ಅಥವಾ ಶೇಕಡ 60ಕ್ಕೂ ಅಧಿಕ ಕುಸಿತ ಕಂಡಿದೆ. ಈ ಆರೋಪವನ್ನು ಅದಾನಿ ಗ್ರೂಪ್ ಅಲ್ಲಗಳೆದಿದೆ.
ಗುರುವಾರ ಅದಾನಿ ಸ್ಟಾಕ್ ಭಾರೀ ಕುಸಿತ ಕಂಡ ಬಳಿಕ ಎಲ್‌ಐಸಿ ಸ್ಟಾಕ್‌ಗಳು ನೆಗೆಟಿವ್ ಆಗಿ ಕಂಡಿದೆ. ದೇಶದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಎಲ್‌ಐಸಿಯು ಅದಾನಿ ಗ್ರೂಪ್ ಸ್ಟಾಕ್ ಮೇಲೆ ಮಾಡಿದ ಹೂಡಿಕೆ ನಷ್ಟದಲ್ಲಿದೆ. ಅದಾನಿ ಗ್ರೂಪ್ ಸಂಸ್ಥೆಯ ಯಾವುದೇ ಸ್ಟಾಕ್‌ಗಳನ್ನು ಜನವರಿ 30ರಿಂದ ಎಲ್‌ಐಸಿ ಮಾರಾಟವಾಗಲಿ ಅಥವಾ ಖರೀದಿಯಾಗಲಿ ಮಾಡಿಲ್ಲ ಎಂಬ ಊಹಾಪೋಹಗಳು ಕೂಡಾ ಇದೆ ಎಂಬುವುದು ಗಮನಾರ್ಹವಾಗಿದೆ.
ಅದಾನಿ ಗ್ರೂಪ್ ಸಂಸ್ಥೆಯಲ್ಲಿ ಎಲ್‌ಐಸಿ ಹೋಲ್ಡಿಂಗ್
ಅದಾನಿ ಗ್ರೂಪ್‌ನ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನಲ್ಲಿ ಎಲ್‌ಐಸಿ 4,81,74,654 ಷೇರುಗಳನ್ನು ಹೊಂದಿದೆ. ಡಿಸೆಂಬರ್ 2022ರ ಪ್ರಕಾರ ಇದು ಸಂಸ್ಥೆಯ ಒಟ್ಟು ಬಂಡವಾಳದ ಶೇಕಡ 4.23ರಷ್ಟಿದೆ. ಅದಾನಿ ಪೋರ್ಟ್‌ನಲ್ಲಿ ವಿಮಾ ಸಂಸ್ಥೆಯು ಶೇಕಡ 9.14ರಷ್ಟು ಸ್ಟೇಕ್ ಹೊಂದಿದೆ. ಅದಾನಿ ಟ್ರಾನ್ಸ್‌ಮಿಷನ್‌ನಲ್ಲಿ ಶೇಕಡ 3.65ರಷ್ಟು ಪಾಲನ್ನು ಹೊಂದಿದೆ. ಅದಾನಿ ಗ್ರೀನ್‌ನಲ್ಲಿ ಶೇಕಡ 1.28, ಅದಾನಿ ಟೋಟಲ್ ಗ್ಯಾಸ್‌ನಲ್ಲಿ ಶೇಕಡ 5.96ರಷ್ಟು ಸ್ಟೇಕ್ ಅನ್ನು ಹೊಂದಿದೆ. ಸೆಪ್ಟೆಂಬರ್ 30, 2022ರ ಪ್ರಕಾರ ಎಲ್‌ಐಸಿಯ ಒಟ್ಟು ಸಂಪತ್ತು 41.66 ಲಕ್ಷ ಕೋಟಿ ರೂಪಾಯಿ ಆಗಿದೆ.
ಅದಾನಿ ಸ್ಟಾಕ್ ನಿರಂತರವಾಗಿ ಕುಸಿದ ಬಳಿಕ ಸಂಸ್ಥೆಯ ಮುಖ್ಯಸ್ಥ ಗೌತಮ್ ಅದಾನಿ ಸಂಪತ್ತು ನಷ್ಟವಾಗಿದ್ದು, ಬ್ಲೂಬರ್ಗ್ ಸೂಚ್ಯಂಕದ ಪ್ರಕಾರ ಪ್ರಸ್ತುತ ಸಂಪತ್ತು 42.7 ಬಿಲಿಯನ್ ಡಾಲರ್ ಆಗಿದೆ. ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಗೌತಮ್ ಅದಾನಿ 29ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದಕ್ಕೂ ಮೊದಲು ಗೌತಮ್ ಅದಾನಿ 2ನೇ ಸ್ಥಾನದಲ್ಲಿದ್ದರು. ಗೌತಮ್ ಅದಾನಿ ಅದಾನಿ ಗ್ರೂಪ್‌ನ ಸಂಸ್ಥಾಪಕರಾಗಿದ್ದಾರೆ. ಸಂಸ್ಥೆಯು ಮೂಲಸೌಕರ್ಯ, ವಸ್ತು, ಶಕ್ತಿ, ರಿಯಲ್ ಎಸ್ಟೇಟ್, ಸಿಮೆಂಟ್ ಸೇರಿದಂತೆ ಹಲವಾರು ವಲಯಗಳಲ್ಲಿ ವಿಸ್ತರಿತವಾಗಿದೆ.
2023ರ ಕ್ಯಾಲೆಂಡರ್ ವರ್ಷದಲ್ಲಿ ಎಲ್‌ಐಸಿ ಅದಾನಿ ಗ್ರೂಪ್ ಸ್ಟಾಕ್‌ನಲ್ಲಿ ಮಾಡಿದ ಹೂಡಿಕೆಯಲ್ಲಿ 50,000 ಕೋಟಿ ರೂಪಾಯಿ ನಷ್ಟವನ್ನು ಕಂಡಿದೆ. ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಷನ್, ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿಯ ಏಳು ಅದಾನಿ ಷೇರುಗಳಲ್ಲಿನ ಹೂಡಿಕೆಯ ಸಂಯೋಜಿತ ಮಾರುಕಟ್ಟೆ ಮೌಲ್ಯವು ಫೆಬ್ರವರಿ 23 ರ ಹೊತ್ತಿಗೆ 82,970 ಕೋಟಿಗಳಿಂದ 33,242 ಕೋಟಿಗೆ ಕುಸಿದಿದೆ.












Click it and Unblock the Notifications