Get Updates
Get notified of breaking news, exclusive insights, and must-see stories!

ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರ ಇಳಿಕೆ ಮಾಡಿದ ಹೆಚ್‌ಡಿಎಫ್‌ಸಿ ಬ್ಯಾಂಕ್

ನವದೆಹಲಿ, ಆಗಸ್ಟ್‌ 27: ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಎಚ್‌ಡಿಎಫ್‌ಸಿ ಬ್ಯಾಂಕ್ ನಿಶ್ಚಿತ ಠೇವಣಿ (ಎಫ್‌ಡಿ) ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ 91 ದಿನಗಳಿಂದ ಆರು ತಿಂಗಳವರೆಗಿನ ಬಡ್ಡಿದರಗಳ ಜೊತೆಗೆ 2 ವರ್ಷದಿಂದ 5 ವರ್ಷಗಳಿಗೆ ಬಡ್ಡಿದರ ಕಡಿತಗೊಳಿಸಿದೆ. ಇತ್ತೀಚಿನ ಪರಿಷ್ಕರಣೆಯ ನಂತರ, ಎಚ್‌ಡಿಎಫ್‌ಸಿ ಬ್ಯಾಂಕ್ 7 ದಿನಗಳಿಂದ 29 ದಿನಗಳ ನಡುವಿನ ಠೇವಣಿಗಳ ಮೇಲೆ ಶೇಕಡಾ 2.50% ಬಡ್ಡಿದರವನ್ನು ನೀಡುತ್ತಿದೆ ಮತ್ತು 30-90 ದಿನಗಳ ಅವಧಿಯಲ್ಲಿ ಠೇವಣಿಗಳ ಮೇಲೆ ಶೇಕಡಾ 3ರಷ್ಟು ನೀಡುತ್ತದೆ.

91 ದಿನಗಳಲ್ಲಿ 6 ತಿಂಗಳವರೆಗೆ ಅವಧಿಯ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಬ್ಯಾಂಕ್ 50 ಬೇಸಿಸ್ ಪಾಯಿಂಟ್‌ಗಳಿಂದ (ಬಿಪಿಎಸ್) ತೀವ್ರವಾಗಿ ಕಡಿತಗೊಳಿಸಿದೆ. ಇವುಗಳು ಈಗ ಶೇಕಡಾ 3.5ರಷ್ಟು ಬಡ್ಡಿದರವನ್ನು ಪಡೆಯುತ್ತವೆ. ನಂತರ ಬ್ಯಾಂಕ್ 9 ತಿಂಗಳ 1 ದಿನದಲ್ಲಿ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರವನ್ನು 10 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿದೆ. ಈ ಠೇವಣಿಗಳು ಈಗ ಶೇಕಡಾ 4.4ರಷ್ಟು ನೀಡುತ್ತದೆ.

HDFC Bank Cuts FD Rates: Know More

ಒಂದು ವರ್ಷದಿಂದ ಎರಡು ವರ್ಷಗಳಲ್ಲಿ ಮುಕ್ತಾಯಗೊಳ್ಳುವ ಅವಧಿಯ ಠೇವಣಿಗಳು ಶೇಕಡಾ 5.10ರಷ್ಟು ಬಡ್ಡಿಯನ್ನು ನೀಡುತ್ತದೆ. 2 ವರ್ಷದಿಂದ 3 ವರ್ಷಗಳ ಅವಧಿಯ ಎಫ್‌ಡಿಗಳು ಶೇಕಡಾ 5.15, 3 ವರ್ಷದಿಂದ 5 ವರ್ಷಗಳವರೆಗೆ ಶೇಕಡಾ 5.30ರಷ್ಟು ನೀಡುತ್ತದೆ. ಈ ದರಗಳು ಆಗಸ್ಟ್ 25 ರಿಂದ ಅನ್ವಯವಾಗುತ್ತವೆ.

ಎರಡು ಕೋಟಿ ರೂಪಾಯಿ ಒಳಗಿನ ನಿಶ್ಚಿಯ ಠೇವಣಿಗಳಿಗೆ ಬಡ್ಡಿ ದರಗಳು ಈ ಕೆಳಗಿನಂತಿದೆ:

7 ರಿಂದ 14 ದಿನಗಳಿಗೆ ಶೇ. 2.50

15 ರಿಂದ 29 ದಿನಗಳಿಗೆ ಶೇ. 2.50

30 ರಿಂದ 45 ದಿನಗಳಿಗೆ ಶೇ. 3

46 ರಿಂದ 60 ದಿನಗಳಿಗೆ ಶೇ. 3

61 ರಿಂದ 90 ದಿನಗಳಿಗೆ ಶೇ. 3

91 ರಿಂದ 6 ತಿಂಗಳಿಗೆ ಶೇ. 3.5

6 ತಿಂಗಳು 1 ದಿನದಿಂದ - 9 ತಿಂಗಳಿಗೆ ಶೇ. 4.4

9 ತಿಂಗಳು 1 ದಿನದಿಂದ 1 ವರ್ಷದೊಳಗೆ ಶೇ. 4.4

1 ವರ್ಷಕ್ಕೆ ಶೇ. 5.10

1 ವರ್ಷ 1 ದಿನದಿಂದ 2 ವರ್ಷದವರೆಗೆ ಶೇ. 5.10

2 ವರ್ಷ 1 ದಿನದಿಂದ 3 ವರ್ಷದವರೆಗೆ ಶೇ. 5.15

3 ವರ್ಷ 1 ದಿನದಿಂದ 5 ವರ್ಷದವರೆಗೆ ಶೇ. 5.30

5 ವರ್ಷ 1 ದಿನದಿಂದ 10 ವರ್ಷದವರೆಗೆ ಶೇ. 5.50

ಹಿರಿಯ ನಾಗರೀಕರಿಗೆ ಹೆಚ್ಚುವರಿ ಶೇ. 0.50 ಬಡ್ಡಿ ದರಗಳನ್ನು ನೀಡಲಾಗುವುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+