ಆನ್‌ಲೈನ್ ಮೆಡಿಕಲ್ ಸ್ಟೋರ್ಸ್ : ಮನೆಬಾಗಿಲಿಗೆ ಔಷಧ

ಬೆಂಗಳೂರು, ನವೆಂಬರ್ 14 : ದೇಶದ ಸ್ಟಾರ್ಟ್‌ಅಪ್‌ಗಳ ರಾಜಧಾನಿ ಎಂದೇ ಖ್ಯಾತವಾಗಿರುವ ಮತ್ತು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ 2ನೇ ಸ್ಟಾರ್ಟ್‌ಅಪ್ ನಗರ ಬೆಂಗಳೂರು ತೀವ್ರಗತಿಯಲ್ಲಿ ವಿಸ್ತರಣೆಗೊಳ್ಳುತ್ತಿರುವ ಆನ್‌ಲೈನ್ ಆರೋಗ್ಯ ಕಾಳಜಿ ಉತ್ಪನ್ನಗಳತ್ತಲೂ ದೃಷ್ಟಿ ನೆಟ್ಟಿದೆ.

ಜೀವ ಎಂದೇ ಜನಪ್ರಿಯವಾಗಿರುವ ಜಿವಿಎ ಕಂಪನಿಯನ್ನು ರಿಂಗ್ ಎ ಬೆಲ್ ಹೆಲ್ತ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದ್ದು, ನಗರದಲ್ಲಿ ನವೆಂಬರ್ 14 ಮಕ್ಕಳ ದಿನಾಚರಣೆಯಂದು ತನ್ನ ಕಾರ್ಯ ಆರಂಭಿಸಿದೆ.

ಸದ್ಯ ಕಂಪನಿ ಮಕ್ಕಳ ಉತ್ಪನ್ನಗಳು, ಪ್ರಸಾಧನ ಸಾಮಗ್ರಿಗಳ (ಕಾಸ್ಮೆಟಿಕ್ಸ್) ಮತ್ತು ಸಾಮಾನ್ಯ ಅಗತ್ಯಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. 2016ರ ಜನವರಿಯಿಂದ ಔಷಧಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಆರಂಭವಾಗಲಿದೆ. ಇದೀಗ ಹೊರತಂದಿರುವ ಆಪ್ ಮತ್ತು ವೆಬ್‌ಸೈಟ್‌ಗಳು ಮುಂದಿನ ಜನವರಿ 1ರಿಂದ ಕಾರ‍್ಯಾರಂಭ ಮಾಡಲಿವೆ. [ಶಿಕ್ಷಣ, ಆರೋಗ್ಯದಿಂದ ವಂಚಿತ ಮಕ್ಕಳು]

GVA to bring medicines to door step in Bengaluru

ಬೆಂಗಳೂರು ಮೂಲದ ಈ ಕಂಪನಿ ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡ ಸಂಪೂರ್ಣ ಹೆಲ್ತ್‌ಕೇರ್ ಪರಿಹಾರ ಕಂಪನಿ. ದೇಶದಾದ್ಯಂತ ತನ್ನ ಸೇವೆ ಒದಗಿಸಲು ಕಂಪನಿ ಸಜ್ಜಾಗಿದೆ. ರಿಂಗ್ ಎ ಬೆಲ್ ಹೆಲ್ತ್ ಪ್ರೈ.ಲಿ. ಮೂವರು ವೃತ್ತಿಪರರಾದ ಅನೂಪ್ ಶ್ರೀಕಂಠಸ್ವಾಮಿ ಅವರು ಕಂಪನಿಯ ಸಹ ಸಂಸ್ಥಾಪಕ ಮತ್ತು ಸಿಇಒ ಆಗಿದ್ದರೆ, ಅಶ್ವಿನ್ ಶ್ರೀಕಂಠಸ್ವಾಮಿ ಅವರು ಸಹ ಸಂಸ್ಥಾಪಕ ಮತ್ತು ಸಿಒಒ ಆಗಿದ್ದಾರೆ. ರಾಮಕೃಷ್ಣ ಎಸ್. ಅವರು ಮತ್ತೊಬ್ಬ ಸಹ ಸಂಸ್ಥಾಪಕರಾಗಿದ್ದಾರೆ.

ದೇಶದಾದ್ಯಂತ ಸೇವೆ : ಕಂಪನಿಯ ಸೇವೆ ದೇಶವ್ಯಾಪಿಯಾಗಿರಲಿದೆ. ಈ ಮಹತ್ವಾಕಾಂಕ್ಷೆ ಈಡೇರುವುದಕ್ಕಾಗಿ 2016ರ ಮೊದಲ ಮೂರು ತಿಂಗಳಲ್ಲಿ 2 ದಶಲಕ್ಷ ಡಾಲರ್‌ನಷ್ಟು ಬಂಡವಾಳ ತೊಡಗಿಸಲಿದ್ದೇವೆ ಎಂದು ಅನೂಪ್ ಶ್ರೀಕಂಠಸ್ವಾಮಿ ಹೇಳುತ್ತಾರೆ. [ಮನಸಿದ್ದರೆ ಮಾರ್ಗವೇ? ಮನಸ್ಸೇ ಮಹಾದೇವನೇ?]

GVA to bring medicines to door step in Bengaluru

ಪ್ರತಿಯೊಂದು ಉತ್ಪನ್ನವನ್ನೂ ಅತ್ಯಂತ ಸುರಕ್ಷಿತವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ವಾಟರ್ ಟೈಟ್ ಮತ್ತು ಫೂಲ್ ಪ್ರೂಫ್ ಸೇವೆಗಾಗಿ ನಾವು ಸಾಕಷ್ಟು ಪ್ರಯೋಗ ನಡೆಸಿ ಅದರಲ್ಲಿ ಸಫಲರಾಗಿದ್ದೇವೆ. ಸುರಕ್ಷತೆಯೇ ನಮ್ಮ ಆದ್ಯತೆ. ಇಡೀ ಆರೋಗ್ಯ ಕಾಳಜಿ ಸೇವೆಯ ಸರಪಣಿಯ ಸರಕ್ಷತೆ ವಿಚಾರದಲ್ಲಿ ನಾವು ಯಾವುದೇ ರಾಜಿಯನ್ನೂ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮುಂಬರುವ ದಿನಗಳಲ್ಲಿ ನಾವು ಇನ್ನಷ್ಟು ಉತ್ಪನ್ನಗಳೊಂದಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದು, ನಮ್ಮ ಸ್ಪರ್ಧಿಗಳಿಂದ ನಾವು ಮುಂದಕ್ಕೆ ಸಾಗುವುದು ನಿಶ್ಚಿತ ಎಂದು ಅವರು ಹೇಳಿದ್ದಾರೆ.

ವೆಬ್ ಸೈಟ್ ವಿಳಾಸ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 98868 13888

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+