ಜಿಎಸ್‌ಟಿ ಲಾಭದ ವಂಚನೆ: ಜಿಲೆಟ್ ಇಂಡಿಯಾ ಹಾಗೂ P&Gಗೆ 241 ಕೋಟಿ ರೂ. ದಂಡ
ನವದೆಹಲಿ, ನವೆಂಬರ್ 26: ಜಿಎಸ್‌ಟಿ ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ 241 ಕೋಟಿ ಲಾಭಗಳಿಸಿರುವ ಜೆಲೆಟ್ ಇಂಡಿಯಾ ಹಾಗೂ ಪ್ರಾಕ್ಟರ್ ಆಂಡ್ ಗ್ಯಾಂಬಲ್ (P&G) ಗೆ ರಾಷ್ಟ್ರೀಯ ಲಾಭೋದ್ದೇಶ ವಿರೋಧಿ ಪ್ರಾಧಿಕಾರ (ಎನ್‌ಎಎ) 241 ಕೋಟಿ ರೂ. ದಂಡ ವಿಧಿಸಿದೆ.
ಉಭಯ ಕಂಪನಿಗಳು 181.51 ಕೋಟಿ ರೂ., 2 ಕೋಟಿ ರೂ ಮತ್ತು 57.99 ಕೋಟಿ ರೂಪಾಯಿಗಳನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ ಎಂದು ನವೆಂಬರ್ 25ರ ಆದೇಶದಲ್ಲಿ ಎನ್‌ಎಎ ಹೇಳಿದೆ.
ಜಿಎಸ್‌ಟಿ ದರವನ್ನು ಕಡಿತಗೊಳಿಸಿದ ಬೆನ್ನಿಗೆ ಕಂಪನಿಯು 1,383 ಉತ್ಪನ್ನಗಳ ದರವನ್ನು ಏರಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಲಾಭ ಪಡೆದುಕೊಂಡ ಮೊತ್ತವನ್ನು ಹಾಗೂ ಬಡ್ಡಿಯ ಹಣವನ್ನು ಕೇಂದ್ರ ಮತ್ತು ರಾಜ್ಯ ಗ್ರಾಹಕ ಕಲ್ಯಾಣ ನಿಧಿಗೆ ಪಾವತಿ ಮಾಡುವಂತೆ ಎನ್‌ಎಎ ಸೂಚನೆ ನೀಡಿತ್ತು.

ಎನ್‌ಎಎ ಅಧ್ಯಕ್ಷ ಬಿ.ಎನ್. ಶರ್ಮಾ ನೇತೃತ್ವದ ಸಮಿತಿಯು ಪಿ & ಜಿ ಹೋಮ್ ಪ್ರಾಡಕ್ಟ್ಸ್, ಪಿ & ಜಿ ಹೈಜೀನ್ ಮತ್ತು ಹೆಲ್ತ್‌ಕೇರ್ ಜೊತೆಗೆ ಜಿಲೆಟ್ ಇಂಡಿಯಾ ಕಂಪನಿಗಳು ಗ್ರಾಹಕರಿಗೆ ರವಾನಿಸದ ತೆರಿಗೆ ಲಾಭದ ಪ್ರಮಾಣವು ರೂ .181.51 ಕೋಟಿ, ರೂ .2 ಕೋಟಿ ಮತ್ತು 57.99 ರೂ. ಕೋಟಿ ರೂ. ಎಂದು ತಿಳಿಸಿದೆ.
ಲಾಭದ ಮೊತ್ತವನ್ನು ಆದೇಶ ನೀಡಿದ ಮೂರು ವಾರದ ಒಳಗೆ ಪಾವತಿ ಮಾಡಬೇಕು ಎಂದು ಎನ್‌ಎಎ ಹೇಳಿದೆ. ಆದರೆ ಎಲ್ಲಾ ಕಾನೂನು ಆಯ್ಕೆಗಳನ್ನು ಪರಿಶೀಲನೆ ಮಾಡುವುದಾಗಿ ಪಿ ಆಂಡ್ ಜಿ ವಕ್ತಾರರು ಹೇಳಿದ್ದಾರೆ.












Click it and Unblock the Notifications