Zoom ಬದಲಿಗೆ ಭಾರತೀಯ App ಅನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರ 10 ಕಂಪನಿಗಳನ್ನು ಪಟ್ಟಿ ಮಾಡಿದೆ

ನವದೆಹಲಿ, ಮೇ 26: ಕೊರೊನಾವೈರಸ್ ನಿಂದಾಗಿ ಲಾಕ್ಡೌನ್ ಜಾರಿಯಲ್ಲಿರುವುದರಿಂದ ವರ್ಕ್ ಫ್ರಾಮ್ ಹೋಮ್(WFH) ಹೊಸ ಕಾರ್ಯ ವಿಧಾನವಾಗಿ ಪರಿಣಮಿಸಿದೆ. WFH ಮಾಡುವ ಉದ್ಯೋಗಿಗಳು, ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳುವ ಶಿಕ್ಷಕರು, ಆನ್ ಲೈನ್ ವೈದ್ಯಕೀಯ ನೆರವು ಹೀಗೆ ಎಲ್ಲರೂ ಜೂಮ್ ಮೀಟಿಂಗ್ ಅಪ್ಲಿಕೇಷನ್ ಗೆ ಮೊರೆ ಹೋಗಿದ್ದಾರೆ.

Recommended Video

      ಮರಿಗಳ ರಕ್ಷಣೆಗೆ ನಿಂತ ಕೋಳಿ, ನಾಗರಹಾವಿನ ವಿರುದ್ಧ ಹೇಗೆ ಫೈಟ್ ಮಾಡ್ತು ನೋಡಿ | Oneindia Kannada

      ಜೂಮ್ ಮೀಟಿಂಗ್ ಆಪ್ ಸರ್ಕಾರಿ ಅಧಿಕಾರಿಗಳಿಗೆ ಮತ್ತು ಸರ್ಕಾರಿ ಸಂಬಂಧ ಚರ್ಚೆಗೆ ಸೂಕ್ತ ಹಾಗೂ ಸುರಕ್ಷಿತ ವೇದಿಕೆಯಲ್ಲ. ಇನ್ನು, ಖಾಸಗಿ ಕಂಪನಿಗಳು ಅಥವಾ ವೈಯಕ್ತಿಕ ಚರ್ಚೆಗೆ ಆಪ್ ಬಳಸುವವರು ಕೇಂದ್ರ ಗೃಹ ಸಚಿವಾಲಯ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ತಿಳಿಸಲಾಗಿದೆ.

      10 ಕಂಪನಿ ಉತ್ಪನ್ನ ಪಟ್ಟಿ ಮಾಡಿದ ಸರ್ಕಾರ: ಜೂಮ್, ಗೂಗಲ್ ಹ್ಯಾಂಗ್ ಔಟ್ಸ್, ಮೈಕ್ರೋಸಾಫ್ಟ್ ಟೀಮ್ಸ್ ಸ್ಕೈಪ್ ಹಾಗೂ ಇನ್ನಿತರ ಜನಪ್ರಿಯ ಉತ್ಪನ್ನಗಳ ಬದಲಿಗೆ ಹೊಸ ವಿಡಿಯೋ ಕಾನ್ಫರೆನ್ಸ್ ಅಪ್ಲಿಕೇಷನ್ ತಯಾರಿಸಲು ಕೇಂದ್ರ ಸರ್ಕಾರವು ಕರೆ ನೀಡಿತ್ತು. ಈಗ 10 ಕಂಪನಿ ಉತ್ಪನ್ನ ಪಟ್ಟಿ ಮಾಡಿದ್ದು, ಎಲ್ಲಾ ಸಂಸ್ಥೆಗಳಿಗೂ 5 ಲಕ್ಷ ರು ನೀಡಲಾಗುತ್ತದೆ.

      5 ಲಕ್ಷ ರು ಪ್ರೋತ್ಸಾಹ ಮೊತ್ತ

      5 ಲಕ್ಷ ರು ಪ್ರೋತ್ಸಾಹ ಮೊತ್ತ

      5 ಲಕ್ಷ ರು ಪ್ರೋತ್ಸಾಹ ಮೊತ್ತ ಪಡೆದ ಎಲ್ಲಾ 10 ಕಂಪನಿಗಳ ಪೈಕಿ 3 ಕಂಪನಿಗಳು ಮಾತ್ರ ಮುಂದಿನ ಹಂತ ತಲುಪಲಿವೆ. ಆ ಸಂಸ್ಥೆಗಳ ಉತ್ಪನ್ನಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಆ 3 ಕಂಪನಿಗಳ ತಂತ್ರಜ್ಞರು ಈ ಉತ್ಪನ್ನ(ವಿಡಿಯೋ ಕಾನ್ಫರೆನ್ಸ್ ವೇದಿಕೆ)ದ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ 20 ಲಕ್ಷ ರು ಗಳನ್ನು ಪಡೆಯಲಿದ್ದಾರೆ.

      ಆಯ್ಕೆಯಾಗಿರುವ 10 ಸಂಸ್ಥೆಗಳು

      ಆಯ್ಕೆಯಾಗಿರುವ 10 ಸಂಸ್ಥೆಗಳು

      ಆಯ್ಕೆಯಾಗಿರುವ ಸಂಸ್ಥೆಗಳು: ಜೋಹೋ, ಎಚ್ ಸಿಎಲ್ ಟೆಕ್ನಾಲಜೀಸ್, ಪೀಪಲ್ ಲಿಂಕ್, ಏರಿಯಾ ಟೆಲಿಕಾಂ, ಸೈಬರ್ ಹಾರಿಜನ್ ಕಾರ್ಪ್, ಇನ್ ಸ್ಟ್ರಿವ್ ಸಾಫ್ಟ್ ಲ್ಯಾಬ್ಸ್, ಪೀಪಲ್ ಯೂನಿಫೈಡ್ ಕಮ್ಯೂನಿಕೇಷನ್ಸ್ ಸರ್ವ್ ವೆಬ್ಸ್, ಸೌಲ್ ಪೇಜ್ ಐಟಿ ಸಲ್ಯೂಷನ್ಸ್, ಟೆಕ್ ಗೆಂಟ್ಸಿಯಾ ಸಾಫ್ಟ್ ವೇರ್ ಟೆಕ್ನಾಲಜೀಸ್ ಅಂಡ್ ಡೇಟಾ ಎಂಜಿನಿಯಸ್.

      ಆಯ್ಕೆಯಾದ ಸಂಸ್ಥೆಗೆ 1 ಕೋಟಿ

      ಆಯ್ಕೆಯಾದ ಸಂಸ್ಥೆಗೆ 1 ಕೋಟಿ

      ಮೂರನೇ ಹಂತದಲ್ಲಿ ಆಯ್ಕೆಯಾದ ಸಂಸ್ಥೆ ಜೊತೆ ಅಂತಿಮ ಹಂತದ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಮೊದಲ ವರ್ಷದಲ್ಲಿ ಸರ್ಕಾರದಿಂದ ಈ ಸಂಸ್ಥೆಗೆ 1 ಕೋಟಿ ರು ಸಿಗಲಿದೆ. ಮುಂದಿನ ಮೂರು ವರ್ಷಕ್ಕೆ ಆಪ್ ನಿರ್ವಹಣೆಗಾಗಿ 10 ಲಕ್ಷ ರು ಕೂಡಾ ನೀಡಲಾಗುತ್ತದೆ. ಇದಲ್ಲದೆ ತನ್ನ ಉತ್ಪನ್ನವನ್ನು ಇತರೆ ಸಂಸ್ಥೆಗೂ ಮಾರಾಟ ಮಾಡಿಕೊಳ್ಳುವ ಹಕ್ಕು ಆ ಸಂಸ್ಥೆಗಿರುತ್ತದೆ.

      C-DoT ಕೂಡಾ ಕೈಜೋಡಿಸಿದೆ

      C-DoT ಕೂಡಾ ಕೈಜೋಡಿಸಿದೆ

      ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಅಂತಿಮ ಹಂತದ ಒಪ್ಪಿಗೆ ಸಿಕ್ಕ ಬಳಿಕ ಮಾರುಕಟ್ಟೆಗೆ ಈ ಉತ್ಪನ್ನ ರಿಲೀಸ್ ಮಾಡಬಹುದಾಗಿದೆ. ದೇಶಿ ನಿರ್ಮಿತ ವಿಡಿಯೋ ಕಾನ್ಫರೆನ್ಸ್ ವೇದಿಕೆ ತಯಾರಿಸಲು ಸರ್ಕಾರ ನೆರವು ನೀಡುತ್ತಿದೆ. ಜೊತೆಗೆ ಸರ್ಕಾರಿ ಸ್ವಾಮ್ಯದ Centre for Development of Telematics (C-DoT) ಕೂಡಾ ವಿಡಿಯೋ ಕಾನ್ಫರೆನ್ಸ್ ಅಪ್ಲಿಕೇಷನ್ ಸಿದ್ಧಪಡಿಸುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+