ದಿನಪತ್ರಿಕೆಗಳ ಮೇಲೆ ಶೇ. 49 ಎಫ್‌ಡಿಐ ಹೂಡಿಕೆಗೆ ಅವಕಾಶ

ನವದೆಹಲಿ, ಜುಲೈ, 09: ನಾಗರಿಕ ವಿಮಾನಯಾನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಶೇ.100 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದ್ದ ಕೇಂದ್ರ ಸರ್ಕಾರ ಇದೀಗ ದಿನಪತ್ರಿಕೆಗಳು ಮತ್ತು ನಿಯತಕಾಳಿಗಳ ವಿಭಾಗದಲ್ಲೂ ಎಫ್ ಡಿಐ ಹೂಡಿಕೆ ಪ್ರಮಾಣವನ್ನು ಹೆಚ್ಚಿಸಿದೆ.

ಶೇ. 26 ಹೂಡಿಕೆಗೆ ಇದ್ದ ಅವಕಾಶವನ್ನು ಶೇ. 49ಕ್ಕೆ ಏರಿಕೆ ಮಾಡಿದೆ. ದಿನದ ಸುದ್ದಿಗಳು ಮತ್ತು ವಿವರಗಳನ್ನು ಒಳಗೊಂಡ ಪತ್ರಿಕೆಯ ಮೇಲೆ ಶೇ. 26 ನೇರ ವಿದೇಶಿ ಬಂಡವಾಳ ಹೂಡಿಕೆ ಮಾಡಲು ಅವಕಾಶವಿತ್ತು.[ಎಫ್ ಡಿಐ ಹೂಡಿಕೆ : ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ]

fdi

ದಿನಪತ್ರಿಕೆ ಕ್ಷೇತ್ರಗಳಲ್ಲಿ ಎಫ್ ಡಿಐ ಹೂಡಿಕೆಗೆ ಅವಕಾಶ ನೀಡಬೇಕು ಎಂದು ಆರ್ಥಿಕ ಇಲಾಖೆ ಬಹಳ ಹಿಂದೆಯೇ ಸಲಹೆ ನೀಡಿತ್ತು. ನಾಗರಿಕ ವಿಮಾನಯಾನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಶೇ.100 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಇತ್ತೀಚೆಗಷ್ಟೆ ಅನುಮತಿ ನೀಡಿತ್ತು.[ವಿದೇಶಿ ಬಂಡವಾಳ ಪಡೆಯೋದ್ರಲ್ಲಿ ನಾವೇ ನಂ. 1]

ನಾಗರಿಕ ವಾಯುಯಾನ, ವಿಮಾನ ನಿಲ್ದಾಣಗಳು, ಔಷಧ ತಯಾರಿ ಮತ್ತು ಪಶು ಸಂಗೋಪನೆ, ಸಿಂಗಲ್‌ ಬ್ರಾಂಡ್‌ ರಿಟೇಲ್‌ ಕ್ಷೇತ್ರದಲ್ಲಿನ ನೇರ ವಿದೇಶಿ ಹೂಡಿಕೆ ಮಿತಿಯನ್ನು ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ದಿನಪತ್ರಿಕೆ ಕ್ಷೇತ್ರದಲ್ಲೂ ಅವಕಾಶ ಕಲ್ಪಿಸಿದ್ದು ಮುಂದಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರದ ಮೇಲೆ ಇದು ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+