Gold Rate Today: ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿ: ದೀಪಾವಳಿಗೂ ಮುನ್ನ ಅಚ್ಚರಿ ಬದಲಾವಣೆ! ಇಂದು ಚಿನ್ನ-ಬೆಳ್ಳಿ ದರ ಕುಸಿತ

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಬಂಗಾರ ಖರೀದಿಸುವ ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ದಸರಾ ಹಬ್ಬಗಳ ದಿನವೇ ಚಿನ್ನ ಮತ್ತು ಬೆಳ್ಳಿ ದರದಲ್ಲಿ ನಿರಂತರವಾಗಿ ಇಳಿಕೆ ಆಗಿದೆ. ಇಂದು ಗುರುವಾರ ಅಕ್ಟೋಬರ್ 22ರಂದು 24 ಮತ್ತು 22 ಕ್ಯಾರಟ್ ಚಿನ್ನ ಮತ್ತು ಬಿಳಿ ಲೋಹದ ಮೌಲ್ಯದ ಮತ್ತಷ್ಟು ಇಳಿಕೆ ಆಗಿದೆ. ದೀಪಾವಳಿಗೆ ನೀವು ಖರೀದಿ ಮಾಡುವವರಿದ್ದರೆ ಇದೊಂದು ಸಕಾಲ ಎನ್ನಬಹುದು.

ರಾಜತಾಂತ್ರಿಕ ಬೆಳವಣಿಗೆ, ಆರ್ಥಿಕತೆ, ವಿದೇಶಿ ನಿಯಮಗಳು ಹಾಗೂ ಯುದ್ಧಗಳು, ಅನಿಶ್ಚಿತತೆಯ ಕಾರಣದಿಂದ ಚಿನ್ನ-ಬೆಳ್ಳಿಯ ದರ ತಿಂಗಳುಗಳಿಂದ ನಿರಂತರವಾಗಿ ಇಳಿಕೆ ಆಗುತ್ತಲೇ ಇದೆ. ಆಗಾಗ ಕೊಂಚ ಚೇತರಿಸಿಕೊಳ್ಳುವ ಮೌಲ್ಯವು ಮತ್ತೆ ದಿಢೀರನೆ ಕುಸಿಯುತ್ತಿದೆ.

Gold Rate Today

ಇಂದಿನ 22k & 24k ಚಿನ್ನದ ಬೆಲೆ?

ಇಂದು ಗುರುವಾರ ಬೆಂಗಳೂರು ಸೇರಿದಂತೆ ದೇಶದ ಮಾರುಕಟ್ಟೆಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 155ರೂಪಾಯಿ ಕುಸಿದಿದೆ. ಈ ಮೂಲಕ 10 ಗ್ರಾಂಗೆ 1240 ರೂಪಾಯಿ ಇಳಿಕೆ ಆಗುವ ಮೂಲಕ ಹತ್ತು ಗ್ರಾಂ ಬಂಗಾರದ ಬೆಲೆ 1, 32,350 ರೂಪಾಯಿ ತಲುಪಿದೆ.

24 ಕ್ಯಾರೆಟ್ ಚಿನ್ನದ ಒಂದು ಗ್ರಾಂ ಬೆಲೆಯು 170 ರೂಪಾಯಿ ಇಳಿಕೆ ಆಗಿದ್ದು, ಹತ್ತು ಗ್ರಾಂಗೆ 1700 ರೂ. ಕುಸಿಯುವ ಮೂಲಕ ಒಂದು ಒಂದೇ ದಿನಕ್ಕೆ ಹತ್ತು ಗ್ರಾಂ ದರ 1,44,380 ರೂಪಾಯಿಗೆ ತಲುಪಿದೆ.

ಅದೇ ರೀತಿ 18 ಗ್ರಾಂ ಚಿನ್ನದ ಮೌಲ್ಯದಲ್ಲೂ ಇಳಿಕೆ ಆಗಿದೆ. ಒಂದು ಗ್ರಾಂಗೆ 127 ರೂ, 10 ಗ್ರಾಂಗೆ 1016 ರೂ.ನಂತೆ ಇಳಿಕೆ ಆಗಿ ಒಟ್ಟು ಬೆಲೆ 1,08,290 ರೂಪಾಯಿ ಕಂಡಿದೆ.

ಇಂದು ಬೆಳ್ಳಿ ದರ ಎಷ್ಟಿದೆ?

ಕೈಗಾರಿಕೆ ಹಾಗೂ ಇತರ ಕಾರಣಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಆಗುವ ಬಿಳಿ ಲೋಹ ಬೆಳ್ಳಿ ಬೆಲೆಯಂತೂ ನಿರಂತರವಾಗಿ ಇಳಿಕೆ ಆಗುತ್ತಲೇ ಇದೆ. ಕಳೆದ ಮೂರು ದಿನಗಳಿಂದ ಇಳಿದ ಬೆಳ್ಳಿ ದರವು ಇಂದು ಕೂಡ ಕಡಿಮೆ ಆಗಿದೆ.

ಒಂದು ಕೆಜಿ ಬೆಳ್ಳಿ ದರ 5000 ರೂಪಾಯಿ ಇಳಿಕೆ ಆಗಿದೆ. ಈ ಮೂಲಕ 2,30,000 ರೂಪಾಯಿ ಇದ್ದ ಬೆಳ್ಳಿಯ ಒಂದು ಕೆಜಿ ಬೆಲೆ ಇದೀಗ 1,25,000 ರೂಪಾಯಿಗೆ ಮುಟ್ಟಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಇದರ ಬೆಲೆ 4,00,000 ರೂಪಾಯಿ ದಾಟಿತ್ತು. ಇದೀಗ ಜಾಗತಿಕ ಕಾರಣಗಳಿಂದಾಗಿ ಬೆಳ್ಳಿ, ಚಿನ್ನ ದರ ಕುಸಿತಗೊಂಡಿದೆ.

ನಗರವಾರು 22k 1 ಗ್ರಾಂ ಚಿನ್ನದ ಬೆಲೆ ಪಟ್ಟಿ

ಚೆನ್ನೈ: 13, 235 ರೂಪಾಯಿ
ಮುಂಬೈ: 13, 235 ರೂಪಾಯಿ
ದೆಹಲಿ: 13, 250 ರೂಪಾಯಿ
ಕೊಲ್ಕತ್ತಾ: 13, 235 ರೂಪಾಯಿ
ಬೆಂಗಳೂರು: 13, 235 ರೂಪಾಯಿ
ಹೈದರಾಬಾದ್; 13, 235 ರೂಪಾಯಿ
ಪುಣೆ: 13, 235 ರೂಪಾಯಿ
ವಡೋದರಾ: 13, 235 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+