ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ , ಬೆಳ್ಳಿಯ ಬೆಲೆ ಕುಸಿತ
ನವದೆಹಲಿ, ನವೆಂಬರ್ 23: ಜಾಗತಿಯವಾಗಿ ಸಕಾರಾತ್ಮಕ ಸೂಚನೆಗಳ ಹೊರತಾಗಿಯೂ, ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಂದು ಕುಸಿದಿದೆ. ಕಳೆದ ವಾರದಲ್ಲಿ ತೀವ್ರ ಇಳಿಮುಖಕ್ಕೆ ಹೋಲಿಸಿದರೆ ಕುಸಿತವು ಅತ್ಯಲ್ಪವಾಗಿದೆ.
Recommended Video
ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ 50,211 ರೂಪಾಯಿಗೆ ಇಳಿದಿದೆ. ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇ. 16ರಷ್ಟು ಕಡಿಮೆಯಾಗಿ 62,060 ರೂಪಾಯಿಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಚಿನ್ನವು ಶೇ. 0.54ರಷ್ಟು ಮತ್ತು ಬೆಳ್ಳಿ ಶೇ. 1.2ರಷ್ಟು ಏರಿಕೆಯಾಗಿತ್ತು.
ಆದರೆ ಜಾಗತಿಕವಾಗಿ ಕೋವಿಡ್-19 ಲಸಿಕೆ ಸಿಗುವ ಆಶಾವಾದವು ಹಳದಿ ಲೋಹದ ಮೇಲೆ ಪರಿಣಾಮ ಬೀರಿದ್ದು, ಚಿನ್ನವು 10 ಗ್ರಾಂಗೆ 700 ರೂಪಾಯಿ ಇಳಿದಿದೆ. ಆಗಸ್ಟ್‌ನಲ್ಲಿ, ಚಿನ್ನವು 10 ಗ್ರಾಂಗೆ 56,200 ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ಬಳಿಕ ತೀವ್ರ ಇಳಿಮುಖವಾಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆಗಳು ಇಂದು ಹೆಚ್ಚಿನ ಮಟ್ಟದಲ್ಲಿವೆ. ಡಾಲರ್ ದುರ್ಬಲಗೊಂಡಿದ್ದರಿಂದ ಬೆಂಬಲಿತವಾಗಿದ್ದು, ಸ್ಪಾಟ್ ಚಿನ್ನವು ಔನ್ಸ್‌ಗೆ ಶೇ. 0.2ರಷ್ಟು ಏರಿಕೆಯಾಗಿ 1,874.25 ಡಾಲರ್‌ಗೆ ಏರಿಕೆಯಾಗಿದೆ. ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ ಶೇ. 0.4ರಷ್ಟು ಏರಿಕೆಗೊಂಡು 24.24 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇ. 0.3ರಷ್ಟು ಕುಸಿದು 943.21 ಡಾಲರ್‌ಗೆ ತಲುಪಿದೆ.












Click it and Unblock the Notifications