Gold Price: ಚಿನ್ನದ ಬೆಲೆ 2ನೇ ದಿನವೂ ದಾಖಲೆಯ ಕುಸಿತ: ಹೂಡಿಕೆದಾರರಿಗೆ ಆಘಾತ, ಗ್ರಾಹಕರಿಗೆ ಹರ್ಷ, ಇಂದಿನ ದರಪಟ್ಟಿ
ಬೆಂಗಳೂರು: ಹಲವಾರು ಕಾರಣಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಚಿನ್ನ -ಬೆಳ್ಳಿ ದರದಲ್ಲಿ ಸತತ ಎರಡನೇ ದಿನ ಶನಿವಾರವೂ ದಾಖಲೆಯ ಇಳಿಕೆ ಕಂಡು ಬಂದಿದೆ. ಈ ದರ ಇಳಿಕೆಯು ಹೂಡಿಕೆದಾರರಿಗೆ ಆಘಾತ ನೀಡಿವೆ. ಮತ್ತೊಂದೆಡೆ ಚಿನ್ನಾಭರಣ ಗ್ರಾಹಕರಿಗೆ ಖರೀದಿಗೆ ಅವಕಾಶ ನೀಡಿದಂತಾಗಿದೆ. 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಏರಿಕೆಗೆ ಬ್ರೇಕ್ ಬಿದ್ದಿದೆ. 2026ರ ಮೊದಲ ತಿಂಗಳ ಕೊನೆಯ ದಿನ ಇಂದು ಶನಿವಾರ (ಜನವರಿ 31)ರಂದು ಚಿನ್ನದ ದರ ಪಟ್ಟಿ ಹಾಗೂ ನಗರವಾರು ಮಾಹಿತಿ ಇಲ್ಲಿದೆ.
ಆರ್ಥಿಕ ತಜ್ಞರ ಮುನ್ಸೂಚನೆಗಳು ಮತ್ತು ಭವಿಷ್ಯ ನಿಜವಾಗಿದೆ. ನಿರಂತರವಾಗಿ ಏರುವ ಚಿನ್ನ, ಬೆಳ್ಳಿ ಮರಳಿ ಮೊದಲಿನ ಸ್ಥಿತಿ ತಲುಪುತ್ತವೆ. ಈ ಏರಿಕೆ ತಾತ್ಕಾಲಿಕ ಎಂದಿದ್ದರು. ಅದರಂತೆ ಯುಎಸ್ ಸುಂಕ ನೀತಿಗಳು, ಡಾಲರ್ ಮೌಲ್ಯ ಕುಸಿತ, ರಾಜತಾಂತ್ರಿಕ ಕಾರಣಗಳು, ಯುದ್ಧಗಳು ಹಾಗೂ ಈ ಲೋಹಗಳ ಕೈಗಾರಿಕೆ ಬಳಕೆ ಹೆಚ್ಚಳ ಮತ್ತು ವಿವಿಧ ರಾಷ್ಟ್ರಗಳ ಕೇಂದ್ರ ಬ್ಯಾಂಕ್‌ಗಳು ಖರೀದಿ ಹೆಚ್ಚಳದಿಂದ ಚಿನ್ನ-ಬೆಳ್ಳಿ ಬೆಲೆ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿ ಸಾರ್ವಕಾಲಿಕ ದಾಖಲೆ ಬರೆದವು. ಅವುಗಳ ದರವು ಇದೀಗ ಮೊದಲಿನಂತೆ ಇಳಿಕೆಯತ್ತ ಸಾಗಿದೆ.

ಈಗಾಗಲೇ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿ ಲಾಭ ಪಡೆದುಕೊಂಡಿದ್ದಾರೆ. ಆದರೆ ಅವರಿಗೆ ಕಳೆದ ಎರಡು ದಿನಗಳಿಂದ ಚಿನ್ನ-ಬೆಳ್ಳಿ ದರ ಇಳಿಕೆ ಆಘಾತ ನೀಡಿದೆ. ನಿರಂತರ ಏರಿಕೆ ಆಗಿದ್ದ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಶುಕ್ರವಾರಕ್ಕೆ 885 ರೂ. ಹಾಗೂ ಶನಿವಾರ ಮತ್ತು 790 ರೂಪಾಯಿ ಇಳಿಕೆ ಆಗಿ 14,790 ರೂಪಾಯಿಗೆ ತಲುಪಿತು.
ಅದೇ ರೀತಿ 24 ಕ್ಯಾರಟ್ ಚಿನ್ನದ ಬೆಲೆ ಶುಕ್ರವಾರಕ್ಕೆ 965 ರೂಪಾಯಿಗೆ ಕುಸಿಯಿತು, ಇಂದು ಶನಿವಾರ ಮತ್ತೆ ಎರಡನೇ ದಿನವು ದಾಖಲೆಯ 862 ರೂಪಾಯಿ ಇಳಿಕೆ ಕಂಡು 16,058 ರೂಪಾಯಿಗೆ ಮುಟ್ಟಿದೆ ಎಂದು ಮಾರುಕಟ್ಟೆ ಮೂಲಗಳು ಅಂಕಿ ಸಂಖ್ಯೆ ನೀಡಿವೆ. ಈ ಸತತ ಎರಡು ದಿನಗಳ ಇಳಿಕೆಯು ಹೂಡಿಕೆದಾರರ ನಿದ್ದೆಗೆಡಿಸಿದೆ. ಅಧಿಕ ಲಾಭದ ಆಸೆಯಲ್ಲಿದ್ದ ಆರಂಭಿಕ ಚಿನ್ನ ಹೂಡಿಕೆದಾರರಿಗೆ ನಿರಾಸೆಯಾಗಿದೆ.
ಬಂಗಾರ ಕೈಗೆಟುಕುವ ಮೊದಲಿನ ದರ ತಲುಪುತ್ತಾ?
ಕಳೆದ ಕೆಲವು ವಾರಗಳಿಂದ ಚಿನ್ನವು ನಿರಂತರ ಏರುಗತಿಯಲ್ಲಿಯೇ ಸಾಗಿತ್ತು. ಜನವರಿ 23ರಂದು 10 ಗ್ರಾಂ 24ಕ್ಯಾರಟ್ ಚಿನ್ನದ ಬೆಲೆ 1,57,150 ರೂಪಾಯಿ ಇತ್ತು. ಅಲ್ಲಿಂದ ನಿರಂತರವಾಗಿ ಏರಿಕೆ ಮಾತ್ರವನ್ನೇ ಕಂಡಿದ್ದ ಬಂಗಾರವು ಶುಕ್ರವಾರ ಮತ್ತು ಶನಿವಾರದ ಎರಡು ಬಾರಿಯ ಕುಸಿತದಿಂದ ಮತ್ತೆ ಇಂದು (ಜ.31) 1,60,580 ರೂ.ಗೆ ತಲುಪಿದೆ. ಈ ಮೂಲಕ ಬಂಗಾರದ ಬೆಲೆಯ ಸ್ಥಿತಿ ಮೊದಲಿನಂತಾಗುವ ಲಕ್ಷಣಗಳು ಕಂಡು ಬಂದಿವೆ.
ಇನ್ನೂ 22 ಕ್ಯಾರಟ್ 10 ಗ್ರಾಂ ಬಂಗಾರವು ಜನವರಿ 23ರಂದು 1,44,050 ರೂಪಾಯಿ ಇತ್ತು. ಎರಡು ಬಾರಿಯ ದಾಖಲೆಯ ಇಳಿಕೆಯಿಂದಾಗಿ ಇದರ ಬೆಲೆಯು ಶನಿವಾರ 1,47,200 ರೂಪಾಯಿಗೆ ಬಂದು ನಿಂತಿದೆ. ಈ ಏರಿಕೆ ಹಾಗೂ ಇಳಿಕೆ ಮಧ್ಯ ಚಿನ್ನವು ಸಾರ್ವಜನಿಕ ದಾಖಲೆಯ ಹೆಚ್ಚಳ ಕಂಡಿತ್ತು. ಈ ಇಳಿಕೆಗೆ ಬೇಡಿಕೆ ಕುಸಿತ, ರಾಜಕೀಯ ಹಾಗೂ ಆರ್ಥಿಕ ಸೇರಿದಂತೆ ಒಂದಷ್ಟು ಜಾಗತಿಕ ಕಾರಣಗಳು ಇವೆ ಎಂದು ತಿಳಿದು ಬಂದಿದೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ
22k 10 ಗ್ರಾಂ ಚಿನ್ನದ ದರ: 1,47,200
24k 10 ಗ್ರಾಂ ಬಂಗಾರದ ಬೆಲೆ:
ಬೆಳ್ಳಿ 100 ಗ್ರಾಂ ದರ: 35,000 ರೂಪಾಯಿ
ಬೆಳ್ಳಿ 1kg ದರ: 3,50,000 ರೂಪಾಯಿ ಇದೆ.
ನಗರವಾರು ಚಿನ್ನದ 1 ಗ್ರಾಂ ದರಪಟ್ಟಿ (24k ಮತ್ತು 22k) ಇಲ್ಲಿದೆ
ಚೆನ್ನೈ: 16,255 ಮತ್ತು 14,900 ರೂಪಾಯಿ
ಮುಂಬೈ: 16,058 ಮತ್ತು 14,720 ರೂಪಾಯಿ
ದೆಹಲಿ: 16,073 ಮತ್ತು 14,735 ರೂಪಾಯಿ
ಕೊಲ್ಕತ್ತಾ: 16,05 ಮತ್ತು 14,720 ರೂಪಾಯಿ
ಹೈದರಾಬಾದ್: 16,058 ಮತ್ತು 14,720 ರೂಪಾಯಿ
ಕೇರಳ: 16,058 ಮತ್ತು 14,720 ರೂಪಾಯಿ
ಪುಣೆ: 16,058 ಮತ್ತು 14,720 ರೂಪಾಯಿ
ಅಹಮದಾಬಾದ್: 16,063 ಮತ್ತು 14,725 ರೂಪಾಯಿ
-
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್












Click it and Unblock the Notifications