Gold Price: ಷೇರು ಮಾರುಕಟ್ಟೆ ಅಲ್ಪ ಕುಸಿತ; ಚಿನ್ನದ ಬೆಲೆ ಒಂದೇ ದಿನ 8,100 ರೂಪಾಯಿ ಹೆಚ್ಚಳ
ಶುಕ್ರವಾರ ಷೇರುಮಾರುಕಟ್ಟೆ ಅಲ್ಪ ಕುಸಿತ ಕಂಡರೆ, ಚಿನ್ನದ ಬೆಲೆ ಭಾರಿ ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲೂ ಕೂಡ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಶುಕ್ರವಾರ ಬಿಎಸ್‌ಇ ಸೆನ್ಸೆಕ್ಸ್ 269 ಅಂಕಗಳಷ್ಟು ಕುಸಿತ ಕಂಡಿದೆ. 77,490 ಸೂಚ್ಯಂಕದೊಂದಿಗೆ ಶುರುವಾರ ಷೇರುಮಾರುಕಟ್ಟೆ 77,209 ಸೂಚ್ಯಂಕಗಳಲ್ಲಿ ಕೊನೆಯಾಗಿದೆ.

ಒಂದು ಕಡೆ ಷೇರು ಮಾರುಕಟ್ಟೆ ಅಲ್ಪ ಕುಸಿತ ಕಂಡರೆ ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಾಗಿದೆ. ಚಿನ್ನದ ಬೆಲೆ ಒಂದೇ ದಿನ 8100 ರೂಪಾಯಿ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಚಿನ್ನದ ಧಾರಣೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಚಿನ್ನದ ಬೆಲೆ ಎಷ್ಟಿದೆ?
ಶುಕ್ರವಾರ ಒಂದೇ ದಿನ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 81 ರೂಪಾಯಿ ಹೆಚ್ಚಾಗಿದೆ. ಗುರುವಾರ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,244 ರೂಪಾಯಿ ಇದ್ದರೆ, ಶುಕ್ರವಾರ 7,325 ರೂಪಾಯಿಗೆ ಮಾರಾಟವಾಗಿದೆ. 100 ಗ್ರಾಂ ಶುದ್ಧ ಚಿನ್ನದ ಬೆಲೆ ಗುರುವಾರ 7,24,400 ರೂಪಾಯಿ ಇದ್ದರೆ, ಇಂದು 7,32,500 ರೂಪಾಯಿ ಆಗಿದೆ.
ಇನ್ನು 1 ಗ್ರಾಂ 22 ಕ್ಯಾರೆಟ್ (ಆಭರಣ) ಚಿನ್ನದ ಬೆಲೆ 1 ಗ್ರಾಂಗೆ 75 ರೂಪಾಯಿ ಹೆಚ್ಚಾಗಿದೆ. ಗುರುವಾರ 6,640 ಇದ್ದ 1 ಗ್ರಾಂ ಆಭರಣ ಚಿನ್ನದ ಬೆಲೆ ಶುಕ್ರವಾರ 6,715 ರೂಪಾಯಿಗೆ ಮಾರಾಟವಾಗಿದೆ. 100 ಗ್ರಾಂ ಚಿನ್ನದ ಬೆಲೆ 7500 ರೂಪಾಯಿ ಹೆಚ್ಚಾಗಿದೆ.
ಬೆಳ್ಳಿ ಧಾರಣೆ ಕೂಡ ಹೆಚ್ಚಳ
ಬೆಳ್ಳಿ ಬೆಲೆಯಲ್ಲಿ ಕೂಡ ಸತತವಾಗಿ ಏರಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ ಗುರುವಾರ 92,500 ಇದ್ದ ಒಂದು ಕೆಜಿ ಬೆಳ್ಳಿ ಬೆಲೆ ಶುಕ್ರವಾರ 94,000 ರೂಪಾಯಿಗೆ ಹೆಚ್ಚಾಗಿದೆ. ಕಳೆದ ವಾರ 90,700 ರೂಪಾಯಿಗೆ ಕುಸಿದಿದ್ದ ಬೆಳ್ಳಿ ಬೆಲೆ ಸತತವಾಗಿ ಏರಿಕೆಯಾಗಿದೆ.
ಶನಿವಾರ ಮತ್ತಷ್ಟು ಹೆಚ್ಚಳ?
ಸತತ ಎರಡನೇ ದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಾಗಿದೆ. ಶನಿವಾರ ಕೂಡ ಬಂಗಾರದ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 73,250 ಇರುವ 24 ಕ್ಯಾರೆಟ್ ಚಿನ್ನದ ಬೆಲೆ ಶೀಘ್ರದಲ್ಲೇ 80,000 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆ ಕೂಡ ಇದೆ.
ಡಾಲರ್ ಮೌಲ್ಯ, ಷೇರುಮಾರುಕಟ್ಟೆ, ಅಮೆರಿಕ ಉದ್ಯೋಗ ಸೇರಿದಂತೆ ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧಾರ ಮಾಡುತ್ತವೆ.












Click it and Unblock the Notifications