ಬೇಡಿಕೆ ಕುಸಿತ, ಚಿನ್ನದ ದರ ಇಳಿಮುಖ
ಬೆಂಗಳೂರು,ನ.24: ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ಕಂಡಿದ್ದರಿಂದ ದಾಸ್ತಾನುದಾರರು ಭಾರಿ ಪ್ರಮಾಣದಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ. ಇದರ ಪರಿಣಾಮ ಚಿನ್ನದ ಬೆಲೆ ಶನಿವಾರ 500 ರು. ಇಳಿಕೆ ಕಂಡು, ಪ್ರತಿ 10 ಗ್ರಾಂ ಬೆಲೆ 31,100 ರೂ.ಗೆ ಕುಸಿದಿತ್ತು. ಭಾನುವಾರದ ಚಿನ್ನದ ಬೆಲೆ ವಿವರ ತೆಗೆದು ನೋಡಿದರೆ ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿ ಪ್ರತಿ 10 ಗ್ರಾಂ ಬೆಲೆ ಚಿನ್ನದ ದರ 30 ಸಾವಿರ ರು ಗಡಿಯ ಆಸುಪಾಸಿನಲ್ಲಿರುವುದು ಕಂಡು ಬಂದಿದೆ.
ಬೆಳ್ಳಿ ಬೆಲೆಯಲ್ಲಿ 570 ರೂ. ಇಳಿದು ಪ್ರತಿ ಕಿಲೋ 45,300 ರೂ.ಗೆ ಇಳಿಕೆಯಾಗಿದೆ. ನಾಣ್ಯ ತಯಾರಕರು ಮತ್ತು ಕೈಗಾರಿಕಾ ಘಟಕಗಳ ಬೇಡಿಕೆ ಕಡಿಮೆಯಾಗಿದ್ದೇ ಬೆಳ್ಳಿ ಬೆಲೆ ತಗ್ಗಲು ಕಾರಣ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ನವದೆಹಲಿ ಮಾರುಕಟ್ಟೆಯಲ್ಲಿ 99.9 ಹಾಗೂ 99.5 ಶುದ್ಧತೆಯ ಬಂಗಾರ ಬೆಲೆ ಕ್ರಮವಾಗಿ 31,100 ಹಾಗೂ 30,900 ರೂ.ಗೆ ಇಳಿದಿತ್ತು. 8 ಗ್ರಾಂ ತೂಕದ ಸವರನ್ ಚಿನ್ನದ ಬೆಲೆಯಲ್ಲಿ 100 ರೂ. ಇಳಿದು 25,200 ರೂ.ಗೆ ತಗ್ಗಿದೆ.
ಬೆಳ್ಳಿ ನಾಣ್ಯಗಳ ಬೆಲೆಯಲ್ಲಿ 1 ಸಾವಿರ ರೂ. ಇಳಿಕೆಯಾಗಿ, ಖರೀದಿಯ 100 ಬೆಳ್ಳಿ ನಾಣ್ಯ 83 ಸಾವಿರ ರೂ. ಮತ್ತು ಮಾರಾಟ 100 ಬೆಳ್ಳಿ ನಾಣ್ಯ 84 ಸಾವಿರ ರೂ.ಗೆ ಕಡಿಮೆಯಾಗಿದೆ. ಭಾನುವಾರ ಪ್ರಮುಖ ನಗರಗಳಲ್ಲಿನ ದರ ಪಟ್ಟಿ ಕೆಳಗಿನಂತಿದೆ:

* ಬೆಂಗಳೂರು :
ಶುದ್ಧ ಚಿನ್ನ (ಪ್ರತಿ 10 ಗ್ರಾಂ) : 30,470 ರು; ಆಭರಣ ಚಿನ್ನ (ಪ್ರತಿ 10 ಗ್ರಾಂ) : 28,780 ರು.
* ಮುಂಬೈ :
ಶುದ್ಧ ಚಿನ್ನ (ಪ್ರತಿ 10 ಗ್ರಾಂ) : 30,390 ರು; ಆಭರಣ ಚಿನ್ನ (ಪ್ರತಿ 10 ಗ್ರಾಂ) : 28,720 ರು.
* ನವದೆಹಲಿ :
ಶುದ್ಧ ಚಿನ್ನ (ಪ್ರತಿ 10 ಗ್ರಾಂ) : 30,440 ರು ; ಆಭರಣ ಚಿನ್ನ (ಪ್ರತಿ 10 ಗ್ರಾಂ) : 28,740 ರು.
* ಚೆನ್ನೈ :
ಶುದ್ಧ ಚಿನ್ನ (ಪ್ರತಿ 10 ಗ್ರಾಂ) : 30,540 ರು; ಆಭರಣ ಚಿನ್ನ (ಪ್ರತಿ 10 ಗ್ರಾಂ) : 28,840 ರು.
* ಕೋಲ್ಕತ್ತಾ :
ಶುದ್ಧ ಚಿನ್ನ (ಪ್ರತಿ 10 ಗ್ರಾಂ) : 30,550 ರು; ಆಭರಣ ಚಿನ್ನ (ಪ್ರತಿ 10 ಗ್ರಾಂ) : 28,850 ರು.
* ಹೈದರಾಬಾದ್ :
ಶುದ್ಧ ಚಿನ್ನ (ಪ್ರತಿ 10 ಗ್ರಾಂ) : 30,500 ರು; ಆಭರಣ ಚಿನ್ನ (ಪ್ರತಿ 10 ಗ್ರಾಂ) :28,800 ರು.
ಹಬ್ಬದ ಸಾಲು ಮತ್ತು ಮದುವೆ ಹಂಗಾಮ ಶುರುವಾಗುತ್ತಿರುವುದರಿಂದ ಗ್ರಾಹಕರು ಚಿನ್ನದ ಖರೀದಿಗೆ ಮುಗಿಬೀಳುತ್ತಿದ್ದಾರೆ. ಹಾಗಾಗಿ ದಾಸ್ತಾನುಗಾರರು ಮತ್ತು ಆಭರಣ ಮಳಿಗೆಯವರು ಚಿನ್ನಕ್ಕೆ ಹೆಚ್ಚು ಬೇಡಿಕೆಯಿಟ್ಟಿರುವ ಪರಿಣಾಮ ಚಿನ್ನದ ದರ ಅಕ್ಟೋಬರ್ ತಿಂಗಳಾಂತ್ಯಕ್ಕೆ ಏರಿತ್ತು
ಇತ್ತೀಚೆಗೆ ಚಿನ್ನ ಹಾಗೂ ಬೆಳ್ಳಿ ಮೇಲಿನ ಆಮದು ಸುಂಕವನ್ನು(ಮೂಲ ದರ) ಸರ್ಕಾರ ತಗ್ಗಿಸಿತ್ತು. ಚಿನ್ನ ಪ್ರತಿ 10 ಗ್ರಾಮ್ ಗೆ 418 ಡಾಲರ್ ಗಳಿಗೆ ತಗ್ಗಿಸಲಾಗಿತ್ತು. ಬೆಳ್ಳಿ ಆಮದು ಸುಂಕವನ್ನು ಪ್ರತಿ ಕೆ.ಜಿಗೆ 699 ಡಾಲರ್ ಗೆ ಇಳಿಸಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆ ದರಗಳಿಗೆ ಅನುಸಾರ ದರವನ್ನು ತಗ್ಗಿಸಲಾಗಿತ್ತು.












Click it and Unblock the Notifications