Gold Price on Aug 25th: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ಬೆಲೆ ಕುಸಿತ! ಇಂದಿನ ದರ ಪಟ್ಟಿ
ಬೆಂಗಳೂರು, ಆಗಸ್ಟ್ 25: ಗೌರಿ ಗಣೇಶ ಹಬ್ಬಕ್ಕೆ ಚಿನ್ನದ ದರ ಗುಡ್‌ನ್ಯೂಸ್ ನೀಡಿದೆ ಎನ್ನಬಹುದು. ದೇಶದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಇದರ ವಿರುದ್ಧವಾಗಿ ನಿರಂತರವಾಗಿ ಚಿನ್ನದ ಬೆಲೆ ಇಳಿಕೆಯತ್ತ ಸಾಗಿದೆ. ಭಾರತದಲ್ಲಿ ಆಗಸ್ಟ್ 16ರಿಂದ ಈವರೆಗೆ ಎರಡು ಬಾರಿ ಮಾತ್ರವೇ ದರ ಹೆಚ್ಚಾಗಿದ್ದು, ಉಳಿದಂತೆ ನಿರಂತರವಾಗಿ ಇಳಿಕೆ ಆಗಿದೆ. ಇಂದು ವಾರದ ಮೊದಲ ದಿನ ಸೋಮವಾರ (ಆಗಸ್ಟ್ 25) ಬೆಲೆ ಎಷ್ಟಿದೆ? ನಿಮ್ಮೂರಲ್ಲಿ ಎಷ್ಟಿದೆ ಎಂಬ ದರಪಟ್ಟಿ ಇಲ್ಲಿದೆ.
ಕರ್ನಾಟಕ ಸೇರಿದಂತೆ ಭಾರತದಲ್ಲಿ ಚಿನ್ನದ ಮೌಲ್ಯ ಇಂದು ಸಹ ಕುಸಿದಿದೆ. ಇದರೊಂದಿಗೆ ಬೆಳ್ಳಿ ದರದಲ್ಲಿ ಸಹ ಇಳಿಕೆ ಕಂಡು ಬಂದಿದೆ. ಇಂದು 22 ಕ್ಯಾರಟ್ ಚಿನ್ನದ ಬೆಲೆಯು 100 ರೂಪಾಯಿ ಇಳಿಕೆ ಆಗಿದೆ. 24 ಕ್ಯಾರಟ್ ಬಂಗಾರದ ದರವು 100 ರೂಪಾಯಿ ಕುಸಿದಿದೆ. ಬೆಳ್ಳಿ ದರವು 100 ರೂಪಾಯಿ ಕುಸಿದಿದೆ. ಗೌರಿ ಗಣೇಶ ಹಬ್ಬ ಎದುರಾಗಿದ್ದು, ಈ ವೇಳೆ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.

24 ಕ್ಯಾರಟ್ ಚಿನ್ನ 10 ಗ್ರಾಂ ದರ 10 ರೂ. ಕುಸಿದಿದ್ದು, ಇಂದು 1,01,610 ರೂಪಾಯಿಯಷ್ಟಿದೆ. 100 ಗ್ರಾಂ ದರವು 10,16,200 ರೂಪಾಯಿಯಿಂದ 10,16,100 ರೂ.ಗೆ (-₹100) ಕುಸಿದಿದೆ. ಅದೇ ರೀತಿ 22 ಕ್ಯಾರಟ್ ಚಿನ್ನ ಸಹ 10 ಗ್ರಾಂ ಗೆ 10 ರೂಪಾಯಿ ಕುಸಿದಿದ್ದು, ಇಂದು ಬೆಲೆ 93,140 ರೂ. ಇದೆ. ಬೆಂಗಳೂರಿನಲ್ಲಿ ಇದೇ ದರಕ್ಕೆ ಚಿನ್ನ ಮಾರಾಟವಾಗುತ್ತಿದೆ.
ಇನ್ನು ಬೆಳ್ಳಿ ದರ ನೋಡುವುದಾದರೆ, 100 ಗ್ರಾಂ ಬೆಳ್ಳಿಗೆ ರೂ.10 ಇಳಿಕೆ ಆಗಿದ್ದು, ಇಂದು 11,990 ರೂಪಾಯಿ ಇದೆ. ಬೆಳ್ಳಿ ಒಂದು ಕೆಜಿಗೆ 100 ರೂಪಾಯಿ ಇಳಿಕೆ ಆಗಿದ್ದು, 1,19,900 ರೂ.ಗೆ ಮಾರಾಟವಾಗುತ್ತಿದೆ. ನಗರವಾರು ಚಿನ್ನದ ದರ ಪಟ್ಟಿ ಇಲ್ಲಿದೆ.
ನಗರವಾರು 22k ಚಿನ್ನದ ಬೆಲೆ ಪಟ್ಟಿ
* ದೆಹಲಿ: 93,323 ರೂಪಾಯಿ
* ಮುಂಬೈ: 93,177 ರೂಪಾಯಿ
* ಕೋಲ್ಕತ್ತಾ: 93,175 ರೂಪಾಯಿ
* ಚೆನ್ನೈ: 93,171ರೂಪಾಯಿ
* ಬೆಂಗಳೂರು: 93,165 ರೂಪಾಯಿ
* ಪುಣೆ: 93,183 ರೂಪಾಯಿ
* ಹೈದರಾಬಾದ್: 93,179 ರೂಪಾಯಿ
* ಅಹಮದಾಬಾದ್: 93,231 ರೂಪಾಯಿ
* ವಡೋದರಾ: 93,190 ರೂಪಾಯಿ
ನಗರವಾರು 24 k ಚಿನ್ನದ ಬೆಲೆ ಪಟ್ಟಿ
* ದೆಹಲಿ ₹1,01,793
* ಮುಂಬೈ ₹1,01,647
* ಬೆಂಗಳೂರು ₹1,01,635
* ಚೆನ್ನೈ ₹1,01,641
* ಕೋಲ್ಕತಾ ₹1,01,645
* ಹೈದರಾಬಾದ್ ₹1,01,610
* ಪುಣೆ ₹1,01,653
* ಅಹಮದಾಬಾದ್ ₹1,01,701












Click it and Unblock the Notifications