Gold Price on September 3: ಸೆಪ್ಟೆಂಬರ್ ಆರಂಭದಲ್ಲೇ ಬಂಗಾರ ಬೆಲೆ ಭಾರಿ ಕುಸಿತ?
ಚಿನ್ನ... ಬಂಗಾರ... ಅಂತಾ ಹೆಂಡತಿಯನ್ನು ಮುದ್ದಿಸುವುದಕ್ಕೂ ಈಗ ಗಂಡಸರು ಯೋಚಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, 1,00,000 ರೂಪಾಯಿ ಗಡಿ ದಾಟಿ ನುಗ್ಗಿ ಹೋಗಿದೆ ಬಂಗಾರದ ಬೆಲೆ. ಅದರಲ್ಲೂ ಕೆಲವೇ ತಿಂಗಳ ಅಂತರದಲ್ಲಿ ಬಂಗಾರ ಬೆಲೆಯು ಆಕಾಶ ಮುಟ್ಟಿದ್ದು ಚಿನ್ನ ಖರೀದಿ ಮಾಡಲು ಚಿಂತೆ ಮಾಡುವಂತೆ ಆಗಿದೆ. ಇಂತಹ ಸಮಯದಲ್ಲೇ ಭಾರಿ ಭರ್ಜರಿ ಗುಡ್ ನ್ಯೂಸ್ ಒಂದು ಸಿಕ್ಕಿದೆ! ಹಾಗಾದ್ರೆ, ಸೆಪ್ಟೆಂಬರ್ ಆರಂಭದಲ್ಲೇ ಬಂಗಾರ ಬೆಲೆ ಭಾರಿ ಕುಸಿತ?
ಚಿನ್ನ & ಬೆಳ್ಳಿ ಬೆಲೆ ಏರಿಕೆ ಕಾರಣಕ್ಕೆ ಶುಭಕಾರ್ಯ ಮಾಡುವವರು ಕೂಡ ಚಿಂತೆ ಮಾಡುವಂತೆ ಆಗಿದೆ. ಈ ಹಿನ್ನೆಲೆ ಚಿನ್ನದ ಬೆಲೆ ಕುಸಿತ ಕಾಣಲಿ ಅಂತಾ ಕಾಯುತ್ತಿರುವ ಜನರ ಸಂಖ್ಯೆಯೇ ಜಾಸ್ತಿ ಆಗಿದ್ದು, ಎಷ್ಟೋ ಜನರು ಮದುವೆ ಸೇರಿದಂತೆ ಸಾಕಷ್ಟು ಶುಭಕಾರ್ಯ ಮುಂದೆ ಹಾಕುತ್ತಿರುವ ಉದಾಹರಣೆಗಳು ಕೂಡ ಈಗ ಕೇಳಿ ಬರುತ್ತಿವೆ. ಇಂತಹ ಸಮಯದಲ್ಲೇ ಚಿನ್ನ ಮಾರುಕಟ್ಟೆ ತಜ್ಞರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಅಂದಹಾಗೆ 2025 ಸೆಪ್ಟೆಂಬರ್ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತವಾಗುವ ನಿರೀಕ್ಷೆ ಕೂಡ ಈಗ ಮೂಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ?

ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ?
ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 97,260 ರೂಪಾಯಿ ತಲುಪಿದ್ದು, ಆಭರಣ ಮಾಡಿಸುವವರಿಗೆ ಚಿನ್ನ ಬೆಲೆ ಇಷ್ಟು ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಚಿಂತೆ ತರಿಸಿದೆ. 10 ಗ್ರಾಂ 24 ಕ್ಯಾರೆಟ್ ಅಂದ್ರೆ ಶುದ್ಧ ಚಿನ್ನ ಬೆಲೆ 1,06,100 ರೂಪಾಯಿಗೆ ಈಗ ಎಂಟ್ರಿ ಕೊಟ್ಟಿದೆ. ಹಾಗಾದರೆ ಕರ್ನಾಟಕ ರಾಜ್ಯದ ವಿವಿಧ ನಗರಗಳು ಸೇರಿದಂತೆ ದೇಶದ ಪ್ರಮುಖ ಸಿಟಿಗಳಲ್ಲಿ ಇಂದಿನ ಬಂಗಾರ ಹಾಗೂ ಬೆಳ್ಳಿ ದರ ಪಟ್ಟಿ ಎಷ್ಟಿದೆ?












Click it and Unblock the Notifications