Gold Price: ಚಿನ್ನದ ಬೆಲೆ 70,000 ರೂಪಾಯಿಗೆ ಕುಸಿತ? ಬೆಳ್ಳಿಯ ಬೆಲೆ...
ಚಿನ್ನ & ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ದಾಖಲಾಗುತ್ತಿದೆ, ಕಳೆದ ನವೆಂಬರ್ ತಿಂಗಳಲ್ಲಿ & ಅಕ್ಟೋಬರ್ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತ ಉಂಟಾಗಿತ್ತು. ಅಲ್ಲದೆ ಹಬ್ಬ & ಮದುವೆ ಸೀಸನ್ ಸಮಯದಲ್ಲಿ ಚಿನ್ನದ ಬೆಲೆ ಇನ್ನೇನು 1,00,000 ರೂಪಾಯಿ ಪ್ರತಿ 10 ಗ್ರಾಂಗೆ ತಲುಪುವ ಆತಂಕ ಆಭರಣ ಪ್ರಿಯರಲ್ಲಿ ಆವರಿಸಿತ್ತು. ಆದರೆ ಚಿನ್ನದ ಬೆಲೆ ಸಾಕಷ್ಟು ಕುಸಿತ ಕಂಡು ಒಂದಷ್ಟು ಖುಷಿ ಚಿನ್ನ ಖರೀದಿ ಮಾಡುವವರಿಗೆ ನೀಡಿತ್ತು. ಹೀಗಿದ್ದಾಗ ಮತ್ತಷ್ಟು ಕುಸಿಯುತ್ತಾ ಚಿನ್ನ?
ಹೌದು, ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿರುವುದಕ್ಕೆ ಹಲವು ಕಾರಣಗಳು ಇವೆ. ಇದರಲ್ಲಿ ಪ್ರಮುಖ ಕಾರಣ ಮಧ್ಯಪ್ರಾಚ್ಯ ಭಾಗದಲ್ಲಿ ನಡೆಯುತ್ತಿರುವ ಯುದ್ಧಗಳು ಒಂದೊಂದಾಗಿ ಈಗ ತಣ್ಣಗಾಗುತ್ತಿವೆ. ಯುದ್ಧಕ್ಕೂ & ಚಿನ್ನಕ್ಕೂ ಏನು ಸಂಬಂಧ ಅಂದ್ರೆ, ಯುದ್ಧಗಳು ಆರಂಭ ಆದ ಸಮಯದಲ್ಲಿ ಚಿನ್ನದ ಬೆಲೆ ಆಕಾಶ ಮುಟ್ಟುತ್ತದೆ. ಹಾಗೇ ಯುದ್ಧಗಳು ನಿಂತು ಶಾಂತಿ ಮರುಸ್ಥಾಪನೆ ಮಾಡಿದ ಸಮಯದಲ್ಲಿ ಚಿನ್ನದ ಬೆಲೆ ಇಳಿಕೆ ಕಾಣುತ್ತದೆ. ಇದರ ಜೊತೆ ಮದುವೆ ಸೀಸನ್ & ಹಬ್ಬಗಳು ಭಾರತದಲ್ಲಿ ಸದ್ಯಕ್ಕೆ ಮುಗಿದ ಕಾರಣ ಚಿನ್ನದ ಬೆಲೆ 70,000 ರೂಪಾಯಿಗೆ ಕುಸಿತ?

ಚಿನ್ನದ ಬೆಲೆ 70,000 ಆಗುತ್ತಾ?
ಚಿನ್ನದ ಬೆಲೆ ನಿನ್ನೆ ಕುಸಿತ ಕಂಡಿತ್ತು, ಹೀಗಾಗಿಯೇ ಆಭರಣ ಪ್ರಿಯರಿಗೆ ಸಖತ್ ಖುಷಿ ಸಿಕ್ಕಿತ್ತು. ಆಭರಣ ಚಿನ್ನ ಬೆಲೆ ಅಂದ್ರೆ 22 ಕ್ಯಾರೆಟ್ ಚಿನ್ನ ಬೆಲೆ ನಿನ್ನೆ ಕುಸಿತ ಕಂಡ ಹಿನ್ನೆಲೆ ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ 4000 ರೂಪಾಯಿ ಇಳಿಕೆ ಆಗಿತ್ತು. ಹಾಗೇ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ನಿನ್ನೆ 400 ರೂಪಾಯಿ ಕಡಿತವಾಗಿ, 10 ಗ್ರಾಂಗೆ 71,100 ರೂಪಾಯಿಗೆ ಮಾರಾಟ ಆಗಿತ್ತು.
24 ಕ್ಯಾರೆಟ್ ಚಿನ್ನ ಬೆಲೆ ಕೂಡ ಕುಸಿದು ಬಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 4,400 ರೂಪಾಯಿ ಕುಸಿತ ಕಂಡಿತ್ತು. ಹೀಗಾಗಿ, ಚಿನ್ನದ ಬೆಲೆ 70,000 ರೂಪಾಯಿಗೆ ಕುಸಿತ ಕಾಣುತ್ತಾ? ಎಂಬ ಕುತೂಹಲ ಮೂಡಿದೆ. ಮುಂದಿನ ಕೆಲವು ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಇಳಿಕೆ ಕಾಣುವ ನಿರೀಕ್ಷೆ ಕೂಡ ಇದೆ. ಮತ್ತೊಂದು ಕಡೆ ಬೆಳ್ಳಿ ಬೆಲೆ ಕೂಡ ನಿನ್ನೆ 1,900 ರೂಪಾಯಿ ಕುಸಿತ ಕಂಡಿದ್ದು ಪ್ರತಿ 1 ಕೆ.ಜಿ.ಗೆ ಬರೋಬ್ಬರಿ 1,900 ರೂಪಾಯಿ ಕುಸಿತ ಕಂಡು 90,500 ರೂಪಾಯಿ ತಲುಪಿತ್ತು.
ಏರಿಕೆ ಆಗುತ್ತಾ? ಇಳಿಕೆ ಕಾಣುತ್ತಾ?
ಒಟ್ನಲ್ಲಿ ಚಿನ್ನ ಮಾರುಕಟ್ಟೆಯಲ್ಲಿ ಚಿನ್ನ ಕುಸಿತ ಕಾಣುತ್ತಿದ್ದು, ಹೂಡಿಕೆದಾರರಿಗೆ ಸ್ವಲ್ಪ ಆತಂಕ ಶುರುವಾಗಿದೆ. ಯಾಕಂದ್ರೆ ಚಿನ್ನ ಕೂಡ ಆರ್ಥಿಕತೆ ಒಂದು ಭಾಗ ಆಗಿದೆ. ಹೀಗಿದ್ದಾಗಲೆ, ಚಿನ್ನದ ಬೆಲೆಯಲ್ಲಿ ಸತತ ಕುಸಿತ ದಾಖಲಾಗುತ್ತಿದೆ ಎಂಬುದು ಚಿಂತೆಗೆ ದೂಡುತ್ತಿದೆ. ಅದರಲ್ಲೂ, ಕಳೆದ ಒಂದು ತಿಂಗಳಲ್ಲಿ ಚಿನ್ನ ದೊಡ್ಡ ಪ್ರಮಾಣದಲ್ಲಿ ತನ್ನ ಬೆಲೆ ಕಳೆದುಕೊಂಡಿದೆ. ಇದರ ಜೊತೆಗೆ, ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಏರಿಕೆ ಕಾಣುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ಚಿನ್ನದ ಜೊತೆ ಬೆಳ್ಳಿ ಬೆಲೆ ಕುಸಿತ?
ಚಿನ್ನ ಬಹು ಬೇಡಿಕೆ ವಸ್ತು, ಹೀಗಾಗಿ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಇದೆ. ಹೀಗೆ ಚಿನ್ನ ಕೊಳ್ಳಲು ಜನ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗಿದ್ದಾಗಲೇ ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿತ್ತು. ನೋಡ ನೋಡುತ್ತಲೇ ಬೆಳ್ಳಿ ಬೆಲೆ 1 ಲಕ್ಷ ರೂಪಾಯಿಗೆ ತಲುಪಿತ್ತು. ಆದರೆ ಕಳೆದ ಕೆಲ ದಿನಗಳಿಂದ ಕುಸಿತ ಕಂಡ ಚಿನ್ನ & ಬೆಳ್ಳಿ ಬೆಲೆ ಇನ್ನಷ್ಟು ಕುಸಿತ ಕಾಣುವ ನಿರೀಕ್ಷೆ ಇದೆ. ಹೀಗಿದ್ದಾಗಲೇ ಚಿನ್ನ 70,000ಕ್ಕೆ ಮತ್ತೆ ಕುಸಿತ ಕಾಣುತ್ತಾ? ಎಂಬ ಕುತೂಹಲ ಇದೀಗ ಮೂಡಿದೆ. ಹಾಗೇ ಆಭರಣ ಪ್ರಿಯರು ಕೂಡ ಚಿನ್ನ & ಬೆಳ್ಳಿ ಕುಸಿತ ಕಾಣುವ ನಿರೀಕ್ಷೆಯನ್ನ ಇಟ್ಟುಕೊಂಡು ಇದೀಗ ಕಾಯ್ತಾ ಇದ್ದಾರೆ.












Click it and Unblock the Notifications