Gold Price: ಚಿನ್ನದ ಬೆಲೆ ಇಳಿಕೆ, ಬಂಗಾರ ಮತ್ತಷ್ಟು ಕಡಿಮೆ ಆಗುವುದು ಗ್ಯಾರಂಟಿ!
ಚಿನ್ನದ ಬೆಲೆ ದಿಢೀರ್ ಇಳಿಕೆಯ ಹಾದಿಗೆ ಸಾಗಿದೆ. ಅದ್ರಲ್ಲೂ ಕಳೆದ ಕೆಲ ದಿನಗಳ ಹಿಂದೆ ಚಿನ್ನದ ಬೆಲೆ ಮುಗಿಲು ಮುಟ್ಟಿತ್ತು. ಹೀಗಾಗಿ ಜನರು ಕೂಡ ಚಿನ್ನ ಖರೀದಿ ಮಾಡಲು ಹಿಂದೆ & ಮುಂದೆ ನೋಡುತ್ತಿದ್ದರು. ಆದ್ರೆ ಈಗ ಚಿನ್ನದ ಬೆಲೆ ದಿಢೀರ್ ಕುಸಿತದ ಹಾದಿ ತುಳಿದು ಆಭರಣ ಪ್ರಿಯರಿಗೆ ಕೂಡ ಖುಷಿ ಕೊಟ್ಟಿದೆ. ಹಾಗಾದರೆ ಇಂದು ಎಷ್ಟಿದೆ ಚಿನ್ನದ ಬೆಲೆ? ಹಾಗೇ, ಬೆಳ್ಳಿಯ ಬೆಲೆಯು ಎಷ್ಟಾಗಿದೆ? ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.
ಚಿನ್ನ.. ಚಿನ್ನ.. ಚಿನ್ನ.. ಹೀಗೆ ಬಂಗಾರ ಅನ್ನೋದು ಎಲ್ಲಾ ವಯಸ್ಸಿನವರಿಗು ಇಷ್ಟವಾಗುತ್ತೆ. ಒಂದು ಕಡೆ ಹೂಡಿಕೆ ಮಾಡುವವರಿಗೆ ಚಿನ್ನದ ಬೆಲೆ ಹೆಚ್ಚಾದರೆ ಖುಷಿ. ಆದರೆ ಸಾಮಾನ್ಯವಾಗಿ ಆಭರಣ ಹೆಚ್ಚಾಗಿ ಇಷ್ಟಪಡುವ ಮಹಿಳೆಯರಿಗೆ ಚಿನ್ನದ ಬೆಲೆ ಕುಸಿದರೆ ಮಾತ್ರ ಸಂತಸ. ಹೀಗಾಗಿ ಚಿನ್ನದ ಬೆಲೆ ಕಳೆದ ಕೆಲವು ತಿಂಗಳಿಂದ ಭಾರಿ ಏರಿಳಿತವನ್ನು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಕುಸಿತ ಕಂಡು, ಆ ನಂತರದಲ್ಲಿ ಮತ್ತೆ ಏರಿಕೆ ಹಾದಿಗೆ ಮರಳುತ್ತೆ ಎಂದು ಹೇಳಲಾಗಿತ್ತು.

ಈ ಮೂಲಕ ಆಭರಣವನ್ನು ಕೊಳ್ಳುವವರಿಗೆ ಈ ತಿಂಗಳು ಮತ್ತಷ್ಟು ಸಿಹಿ ಸುದ್ದಿ ಸಿಗುವ ಸಾಧ್ಯತೆ ದಟ್ಟವಾಗಿತ್ತು. ಆದ್ರೆ ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದೆ. ಹೀಗಿದ್ದಾಗಲೇ ಇಂದು ದಿಢೀರ್ ಚಿನ್ನದ ಬೆಲೆಯಲ್ಲಿ ಕುಸಿತ ದಾಖಲಾಗಿದೆ. ಹಾಗಾದರೆ ಈಗ ಚಿನ್ನದ ಬೆಲೆ ಇಳಿಕೆಯ ನಂತರ, ಎಷ್ಟಾಗಿದೆ ಗೊತ್ತಾ ಗೋಲ್ಡ್ ರೇಟ್? ಹಾಗೇ ಬೆಳ್ಳಿಯ ಬೆಲೆ ಎಷ್ಟು ಈಗ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಬಂಗಾರದ ಬೆಲೆ ಎಷ್ಟಿದೆ ಈಗ?
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 100 ಗ್ರಾಂಗೆ 1000 ರೂಪಾಯಿ ಕುಸಿತ ಕಂಡಿದೆ. ಹಾಗೇ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ 100 ರೂಪಾಯಿ ಕಡಿತವಾಗಿದೆ. ಆಭರಣ ಚಿನ್ನದ ಬೆಲೆ ಕುಸಿತದ ಬಳಿಕ ಪ್ರತಿ 10 ಗ್ರಾಂಗೆ 65,550 ರೂಪಾಯಿ ಇದ್ದು. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದಿದೆ. ಕುಸಿತ ಕಂಡ ಬಳಿಕ 24 ಕ್ಯಾರೆಟ್ ಚಿನ್ನ ಬೆಲೆ, 100 ಗ್ರಾಂಗೆ 1,100 ರೂಪಾಯಿ ಇಳಿಕೆ ಕಂಡಿದೆ. ಹಾಗಾದರೆ ಬೆಳ್ಳಿಯ ಬೆಲೆ ಇದೀಗ ಎಷ್ಟಿದೆ ಮಾಹಿತಿ ಗೊತ್ತೆ? ಆ ಮಾಹಿತಿಗಾಗಿ ಮುಂದೆ ಓದಿ.
ಬೆಳ್ಳಿ ಬೆಲೆ ಕಥೆ ಏನು?
10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,100 ರೂಪಾಯಿ ಇಳಿಕೆ ಕಂಡು, ಇಳಿಕೆ ನಂತರ ಪ್ರತಿ 10 ಗ್ರಾಂಗೆ 71,510 ರೂಪಾಯಿಗೆ ಮಾರಾಟ ಆಗುತ್ತಿದೆ. ರಾಜಧಾನಿ ಬೆಂಗಳೂರಲ್ಲಿ ಬೆಳ್ಳಿ ಪ್ರತಿ ಕೆಜಿಗೆ 80,000 ರೂಪಾಯಿ ಲೆಕ್ಕದಲ್ಲಿ ಮಾರಾಟ ಆಗುತ್ತಿದೆ. ಶೀಘ್ರದಲ್ಲೇ ಆಭರಣ ಚಿನ್ನವು 10 ಗ್ರಾಂಗೆ 50000 ರೂಪಾಯಿಗೆ ಕುಸಿತ ಕಾಣುತ್ತಾ? ಎಂಬ ಕುತೂಹಲದಲ್ಲಿ ಚಿನ್ನ ಪ್ರಿಯರು ಕಾಯ್ತಿದ್ದಾರೆ. ಹಾಗೇ ಬೆಳ್ಳಿ ಬೆಲೆ ಕೂಡ ಮತ್ತಷ್ಟು ಇಳಿಕೆ ಕಾಣುವ ನಿರೀಕ್ಷೆ ಮನೆಮಾಡಿದೆ.












Click it and Unblock the Notifications