Gold Price: 70,000 ಕುಸಿದ ಚಿನ್ನದ ಬೆಲೆ, ಬೆಳ್ಳಿ ಬೆಲೆ ಢಮಾರ್!
ಚಿನ್ನ.. ಚಿನ್ನ.. ಅಂತಾ ದೀಪಾವಳಿ ಹಬ್ಬದ ದಿನ ಆಭರಣ ಪ್ರಿಯ ಮಹಿಳೆಯರು ಚಿನ್ನದ ಖರೀದಿಗೆ ಕಾಯುತ್ತಿದ್ದರು. ಆದರೆ ಚಿನ್ನದ ಬೆಲೆ ಭಾರಿ ಏರಿಕೆ ಕಂಡು ಆಘಾತ ನೀಡಿತ್ತು. ಈ ರೀತಿ ಚಿನ್ನದ ಬೆಲೆ ದೀಪಾವಳಿ ಹಬ್ಬದ ದಿನ ಏರಿಕೆ ಕಂಡಿದ್ದರೆ, ದೀಪಾವಳಿ ಹಬ್ಬ ಮುಕ್ತಾಯ ಆಗುವ ಸಮಯದಲ್ಲೇ ದಿಢೀರ್ ಕುಸಿತ ಕಾಣುತ್ತಿದೆ. ಅದು ಭಾರಿ ಪ್ರಮಾಣದಲ್ಲಿ ಇಂದು ಚಿನ್ನ ಕುಸಿತ ಕಂಡಿದೆ.
ಒಂದಲ್ಲ.. ಎರಡಲ್ಲ.. ಚಿನ್ನದ ಬೆಲೆ ಬರೋಬ್ಬರಿ 70,000 ಕುಸಿದು ಬಿದ್ದಿದೆ, ಇದರ ಜೊತೆಗೆ ಬೆಳ್ಳಿ ಬೆಲೆ ಕೂಡ ಢಮಾರ್ ಆಗಿದೆ. ಹಾಗಾದರೆ, ಬಂಗಾರದ ಬೆಲೆ & ಬೆಳ್ಳಿ ಬೆಲೆ ಈಗ ಎಷ್ಟಿದೆ? ಚಿನ್ನದ ಬೆಲೆ ಬೆಂಗಳೂರಿನಲ್ಲಿ ಎಷ್ಟು? ಕರ್ನಾಟಕದಲ್ಲಿ ಚಿನ್ನ ಖರೀದಿಗೆ ಸೂಕ್ತ ಸಮಯವೇ? ಬನ್ನಿ ಚಿನ್ನ & ಬೆಳ್ಳಿ ಖರೀದಿಗೆ ಮೊದಲು ಈಗ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.

ಚಿನ್ನದ ಬೆಲೆ ದಿಢೀರ್ ಕುಸಿದು ಬಿದ್ದಿದೆ, ಒಂದು ಕಡೆ ಹಬ್ಬದ ಸಮಯದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ ಕಂಡ ಹಿನ್ನೆಲೆ ಜನರು ಕೂಡ ಬೇಸರ ಮಾಡಿಕೊಂಡರು. ಆದರೆ ಈಗ ಚಿನ್ನದ ಬೆಲೆ ಕುಸಿದು ಬಿದ್ದಿದೆ. ಅಂದಹಾಗೆ ಬಂಗಾರದ ಬೆಲೆ ಇಂದು ಒಂದೇ ದಿನ ಪ್ರತಿ ಕೆ.ಜಿ.ಗೆ 70 ಸಾವಿರ ರೂಪಾಯಿ ಕುಸಿತ ಕಂಡಿದೆ. ಹಾಗಾದ್ರೆ ಇಂದು ಕುಸಿತ ಕಂಡ ನಂತರ ಚಿನ್ನದ ಬೆಲೆ ಎಷ್ಟಿದೆ? ಮುಂದೆ ಓದಿ.
ಚಿನ್ನ 70,000 ರೂಪಾಯಿ ಕುಸಿತ...
24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ಪ್ರತಿ 1 ಕೆ.ಜಿ.ಗೆ 70,000 ರೂಪಾಯಿ ಕುಸಿತ ಕಂಡಿದೆ. ಹಾಗೇ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 73,850 ರೂಪಾಯಿಗೆ ತಲುಪಿದೆ. ಈ ಮೂಲಕ ಸತತ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಅದರಲ್ಲೂ, ದೀಪಾವಳಿ ಹಬ್ಬ ಮುಕ್ತಾಯದ ಸಮಯಕ್ಕೆ ಚಿನ್ನದ ಬೆಲೆ ಇಳಿಕೆ ಕಂಡಿದ್ದು, ಹಬ್ಬದಲ್ಲಿ ಈ ರೀತಿ ಚಿನ್ನದ ಬೆಲೆ ಕುಸಿತ ಕಂಡಿದ್ದರೆ ಚನ್ನಾಗಿ ಇತ್ತು ಅನ್ನೋ ಮಾತನ್ನ ಆಭರಣ ಪ್ರಿಯರು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಬೆಳ್ಳಿ ಬೆಲೆ ಕೂಡ ಪ್ರತಿ ಕೆಜಿಗೆ 3,000 ಸಾವಿರ ರೂಪಾಯಿ ಕುಸಿದು ಬಿದ್ದಿದೆ.
ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ಪ್ರಾಣ, ಅದರಲ್ಲೂ ಆಭರಣ ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡ್ತಾರೆ. ಹೀಗೆ ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇದೆ. ಇದೆಲ್ಲವನ್ನ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ. ಹೀಗಿದ್ದಾಗ ಹಬ್ಬಗಳ ಸಮಯದಲ್ಲಿ ಚಿನ್ನದ ಬೆಲೆ ಸಾಮಾನ್ಯವಾಗಿ ಏರಿಕೆ ಕಾಣುತ್ತದೆ, ಈ ಬಾರಿ ಕೂಡ ಅದೇ ರೀತಿ ದೀಪಾವಳಿ ಹಬ್ಬಕ್ಕೆ ಮೊದಲು ಬಂಗಾರದ ಬೆಲೆ ಏರಿಕೆ ಕಂಡಿತ್ತು. ಇದೀಗ ಚಿನ್ನ ಇಳಿಕೆ ಕಾಣುತ್ತಿದೆ.












Click it and Unblock the Notifications