Gold Price Today: ಶುಭ ಸೋಮವಾರ ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ, ಇಂದಿನ ಬೆಲೆ ಅಪ್ಡೇಟ್ಸ್
ಬೆಂಗಳೂರು, ಜೂನ್ 09: ಚಿನ್ನಪ್ರಿಯರಿಗೆ ಈ ವಾರದ ಆರಂಭದಲ್ಲಿ ಗುಡ್ ನ್ಯೂಸ್ ಸಿಕ್ಕಿದೆ. ಹಬ್ಬ ಹರಿದಿನಗಳು ಮುಗಿದ ಬಳಿಕ ಇಲ್ಲವೇ ಕೊಂಚ ಚಿನ್ನದ ಬೆಲೆ ತಗ್ಗಿದ ಬಳಿಕ ಖರೀದಿಸಿದರಾಯಿತು ಎಂದಕೊಂಡವರಿಗೆ ಉತ್ತಮ ಅವಕಾಶ ಲಭಿಸಿದೆ. ನೀವು ಕೂಡಲೇ ಚಿನ್ನ ಖರೀದಿಸಬಹುದು. ಒಂದು ಲಕ್ಷ ರೂಪಾಯಿಗೆ ಹೆಚ್ಚಾದ ಬಳಿಕ ಆಗಾಗ ಸರಣಿ ರೂಪದಲ್ಲಿ ಚಿನ್ನದ ಬೆಲೆ ಇಳಿಕೆ ಆಗುತ್ತಿದೆ. ಇಂದು ಜೂನ್ 09ರ ಚಿನ್ನ ಬೆಳ್ಳಿ ದರ, ನಿಮ್ಮೂರಿನಲ್ಲಿ ಎಷ್ಟಿದೆ ತಿಳಿಯಿರಿ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ 22 ಕ್ಯಾರಟ್ನ 10 ಗ್ರಾಂಗೆ 89,550 ರೂಪಾಯಿ ಹಾಗೂ 24 ಕ್ಯಾರಟ್ನ 10 ಗ್ರಾಂ ಬಂಗಾರದ ದರ 97,690 ರೂಪಾಯಿಗೆ ಕುಸಿದಿದೆ. ಬೆಳ್ಳಿ ಬೆಲೆ 10 ಗ್ರಾಂಗೆ 1,070 ರೂಪಾಯಿಯಷ್ಟಿದೆ. ಸದ್ಯ ಯಾವುದೇ ಹಬ್ಬಗಳು ಇಲ್ಲದ ಕಾರಣ ಗ್ರಾಹಕರು ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಎನ್ನಬಹುದು.

22 ಕ್ಯಾರೆಟ್ ಚಿನ್ನ ಬೆಲೆ ಒಟ್ಟು 2500 ರೂಪಾಯಿಯಷ್ಟು ಇಳಿಕೆ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ನೆನ್ನೆ 89,800 ರೂಪಾಯಿ ಇತ್ತು, ಇಂದು 89,550 ರೂಪಾಯಿಗೆ ಇಳಿಕೆ ಕಂಡಿದೆ. ಇದರಿಂದ ಚಿನ್ನದ ಬೆಲೆ 250 ರೂಪಾಯಿ ಇಳಿಕೆ ಆದಂತಾಗಿದೆ. ಇನ್ನೂ 100 ಗ್ರಾಂ ಚಿನ್ನಕ್ಕೆ ನೆನ್ನೆ 8,98,000ರೂಪಾಯಿ ಇದ್ದದ್ದು ಒಂದೇ ದಿನಕ್ಕೆ 8,95,500 ರೂಪಾಯಿಗೆ ಇಳಿದಿದೆ. ಇದರಿಂದ 2500 ರೂ.ನಷ್ಟು ಇಳಿಕೆ ಆಗಿದೆ.
24 ಕ್ಯಾರಟ್ ಚಿನ್ನ ದರದಲ್ಲೂ ಬದಲಾವಣೆ ಆಗಿದ್ದು, ಒಟ್ಟು 2800 ರೂಪಾಯಿ ಇಳಿಕೆ ಆಗಿದೆ. 24 ಗಂಟೆ ಹಿಂದೆ 97,970 ರೂಪಾಯಿ ಇತ್ತು, ಇಂದು ಆ ಬೆಲೆ 97,690 ರೂಪಾಯಿಗೆ ಇಳಿದಿದ್ದು, ಒಟ್ಟು 280 ರೂಪಾಯಿ ಕಡಿಮೆ ಆಗಿದೆ. ಇದೇ ಚಿನ್ನ 100 ಗ್ರಾಂ ನೆನ್ನೆ 9,79,700 ರೂಪಾಯಿ ಇತ್ತು. ಇಂದು ಅದರ ಬೆಲೆ 9,76,900 ರೂಪಾಯಿಗೆ ತಗ್ಗಿದ್ದು, ಒಟ್ಟು ಬರೋಬ್ಬರಿ 2,800 ರೂಪಾಯಿ ಇಳಿಕೆ ಆದಂತಾಗಿದೆ ಎಂದು ಮಾರುಕಟ್ಟೆಯ ಅಂಕಿ ಸಂಖ್ಯೆಗಳು ತಿಳಿಸಿವೆ.
ಬೇರೆ ಬೇರೆ ಪ್ರಮುಖ ನಗರಗಳ ಚಿನ್ನದ ದರಪಟ್ಟಿ
ಆಭರಣ ಬಳಕೆಯ 22 ಕ್ಯಾರಟ್ ಚಿನ್ನವು ಕರ್ನಾಟಕದ ಬೆಂಗಳೂರಿನಲ್ಲಿ 10 ಗ್ರಾಂಗೆ 89,550 ರೂಪಾಯಿ, ತಮಿಳುನಾಡಿನ ಚೆನ್ನೈ ನಲ್ಲಿ 89,550 ರೂಪಾಯಿ, ಮಹಾರಾಷ್ಟ್ರದ ಮುಂಬೈನಲ್ಲಿ 89,550 ರೂಪಾಯಿ, ದೆಹಲಿಯಲ್ಲಿ 89,700 ರೂಪಾಯಿ, ಕೊಲ್ಕತ್ತಾ 89,550 ರೂಪಾಯಿ, ಕೇರಳ 89,550 ರೂಪಾಯಿ, ಅಹಮದಾಬಾದ್ 89,600 ರೂಪಾಯಿ, ಜೈಪುರ 89,700 ರೂಪಾಯಿ, ಲಕ್ನೋ 89,700 ರೂ ಹಾಗೂ ಭುವನೇಶ್ವರ್ 89,550 ರೂಪಾಯಿ ಇದೆ.
ಬೆಂಗಳೂರು 1 ಗ್ರಾಂ ಚಿನ್ನದ ಏರಿಳಿತ ಪಟ್ಟಿ
June 9 - 24 ಕ್ಯಾರಟ್ ಚಿನ್ನ ದರ: 9,769 ರೂಪಾಯಿ (₹28 ಇಳಿಕೆ), 22 ಕ್ಯಾರಟ್ ಚಿನ್ನ 8,955 (-25) ರೂಪಾಯಿ
June 8 - 24 ಕ್ಯಾರಟ್ ಚಿನ್ನ ಬೆಲೆ: 9,797 ರೂಪಾಯಿ, 22 ಕ್ಯಾರಟ್ ಚಿನ್ನ ದರ 8,980 ರೂಪಾಯಿ
June 7 - 24 ಕ್ಯಾರಟ್ ಚಿನ್ನ ಬೆಲೆ: 9,797 ರೂಪಾಯಿ (₹163 ಇಳಿಕೆ) 22 ಕ್ಯಾರಟ್ ಚಿನ್ನದ ದರ 8,980 (₹150)












Click it and Unblock the Notifications