Gold Rate: ಚಿನ್ನದ ಬೆಲೆ ಭಾರಿ ಕುಸಿತದ ಮುನ್ಸೂಚನೆ!
2025-2026ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಲಾಗಿದೆ. ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡುವ ಮೂಲಕ ಮಧ್ಯಮ ವರ್ಗಕ್ಕೆ ದೊಡ್ಡ ರಿಲೀಫ್ ಸಿಕ್ಕಿದೆ. ಇದರ ಜೊತೆಗೆ ಹಲವು ವಸ್ತುಗಳನ್ನು ಕಡಿಮೆ ಮಾಡಲು ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಚಿನ್ನದ ಬೆಲೆ ಕಡಿಮೆ ಮಾಡಲು ಕೂಡ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಕಡಿಮೆಯಾಗುವ ನಿರೀಕ್ಷೆ ಇದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಐಟಮ್ ಕೋಡ್ - 7113 ರ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಿದ್ದಾರೆ, ಇದು ಆಭರಣಗಳು ಮತ್ತು ಬಿಡಿಭಾಗಗಳನ್ನು ಒಳಗೊಂಡಿದೆ. ಈವರೆಗೆ ಆಭರಣಗಳು ಮತ್ತು ಅದರ ಭಾಗಗಳ ಮೇಲಿನ ಹಳೆಯ ಕಸ್ಟಮ್ಸ್ ಸುಂಕವು 25% ಆಗಿದ್ದರೆ ಬಜೆಟ್‌ನಲ್ಲಿ ಅದನ್ನು 20% ಕ್ಕೆ ಕಡಿಮೆ ಮಾಡಲಾಗಿದೆ.

ಫೆಬ್ರವರಿ 2, 2025 ರಿಂದಲೇ ಪರಿಷ್ಕೃತ ಕಸ್ಟಮ್ಸ್ ಜಾರಿಗೆ ಬರಲಿದೆ. ಪ್ಲಾಟಿನಂ ಫೈಂಡಿಂಗ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕೂಡ 25% ರಿಂದ 5% ಕ್ಕೆ ಕಡಿಮೆ ಮಾಡಲಾಗಿದ್ದು ಪ್ಲಾಟಿನಂ ಬೆಲೆ ಕೂಡ ಕಡಿಮೆಯಾಗಲಿದೆ.
ಭಾರತದಲ್ಲಿ ಆಭರಣದ ಬೇಡಿಕೆ ಹೆಚ್ಚಳ
ಆಭರಣಗಳ ಮೇಲಿನ ಸುಂಕವನ್ನು 25% ರಿಂದ 20% ಕ್ಕೆ ಕಡಿಮೆ ಮಾಡಿರುವುದು ಸ್ವಾಗತಾರ್ಹ ಕ್ರಮ. ಭಾರತದಲ್ಲಿ ಆಭರಣ ಬಳಕೆ ಹೆಚ್ಚಾಗಿದ್ದು, ಕಸ್ಟಮ್ಸ್ ಸುಂಕ ಕಡಿಮೆ ಮಾಡುವುದರಿಂದ ದೇಶದಲ್ಲಿ ಆಭರಣಗಳ ಬೆಲೆಯನ್ನು ಕಡಿಮೆ ಮಾಡಲಿದ್ದು ಬೇಡಿಕೆಯನ್ನು ಹೆಚ್ಚಿಸುತ್ತದೆ. ಪ್ಲಾಟಿನಂ ಮೇಲಿನ ಸುಂಕವನ್ನು ಕೂಡ 25% ರಿಂದ 5% ಕ್ಕೆ ಕಡಿಮೆ ಮಾಡಿದ್ದರಿಂದ ರತ್ನಗಳು ಮತ್ತು ಆಭರಣ ಉದ್ಯಮಕ್ಕೆ ಪ್ರಯೋಜನಕಾರಿಯಾಗಿದೆ ಎಂದು ಕಾಮ ಜ್ಯುವೆಲರಿ ಎಂಡಿ ಕಾಲಿನ್ ಷಾ ತಿಳಿಸಿದ್ದಾರೆ ಎಂದು ಇಟಿ ವರದಿ ಮಾಡಿದೆ.
ಒಂದು ಕಡೆ ಚಿನ್ನದ ಆಭರಣಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದ್ದರೂ, ವಾರ್ಷಿಕ 12 ಲಕ್ಷ ರೂಪಾಯಿಗಳವರೆಗೆ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು ಚಿನ್ನದ ಮೇಲಿನ ಹೂಡಿಕೆಗೆ ಹೆಚ್ಚಿನ ಪ್ರಯೋಜನಕಾರಿಯಾಗಲಿದೆ.
ಬಜೆಟ್ ದಿನ ಚಿನ್ನದ ಬೆಲೆ ಅಲ್ಪ ಏರಿಕೆ ಕಂಡಿದ್ದು, ಫೆಬ್ರವರಿ 2ರಿಂದ ಹೊಸ ಆಮದು ಸುಂಕ ಜಾರಿಯಾಗಿರುವುದರಿಂದ ಸೋಮವಾರ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications