April 2 Gold Silver Price: ಯುಗಾದಿ ಬಳಿಕ ನಿಲ್ಲದ ಚಿನ್ನ ಬೆಳ್ಳಿ ಬೆಲೆ ಏರಿಕೆ- ಇಂದಿನ ದರ ತಿಳಿಯಿರಿ

ಭಾರತದಲ್ಲಿ ಇಂದೂ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು ಗ್ರಾಹಕರಿಗೆ ಚಿನ್ನ ಗಗನಕುಸುಮವಾಗಿದೆ. ಹಬ್ಬ, ಶುಭ ಕಾರ್ಯಗಳು ನಡೆಯುವ ಈ ಸಮಯದಲ್ಲಿ ನಿತ್ಯ ಹೆಚ್ಚಾಗುತ್ತಿರುವ ಚಿನ್ನದ ಬೆಲೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಯುಗಾದಿ ಬಳಿಕ ಚಿನ್ನದ ಬೆಲೆ ಹೆಚ್ಚಾಗುತ್ತಲೇ ಇದೆ. ಹಾಗಾದರೆ ಭಾರತದಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಎಂದು ಈಗ ತಿಳಿಯೋಣ.

ಭಾರತದಲ್ಲಿ ಬುಧವಾರ (ಏಪ್ರಿಲ್ 2) ಆರಂಭಿಕ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 92,850 ರೂಪಾಯಿ ಇದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 85,110 ರೂಪಾಯಿ ಇದೆ. ಬೆಳ್ಳಿಯ ಬೆಲೆ ಒಂದು ಕಿಲೋಗ್ರಾಂಗೆ 1,05,100 ರೂಪಾಯಿ ಇದೆ. ಮಂಗಳವಾರ (ಏಪ್ರಿಲ್ 1)ರಂದು ಭಾರತದಲ್ಲಿ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ 91,920 ರೂಪಾಯಿ ಇದೆ. 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ 84,260 ರೂಪಾಯಿ ಇತ್ತು. ಜೊತೆಗೆ 1 ಕೆಜಿ ಬೆಳ್ಳಿಯ ದರ ಕಳೆದ ದಿನ 1,03,900 ರೂಪಾಯಿ ಇತ್ತು.

Gold and silver prices increased across India including Bengaluru on April 2

ಇನ್ನೂ ಬೆಂಗಳೂರಿನಲ್ಲಿ ಇಂದು(ಏಪ್ರಿಲ್ 2) 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 92,850 ರೂಪಾಯಿ ಇದೆ. ಕಳೆದ ದಿನ (ಏಪ್ರಿಲ್ 1) 92,840 ರೂಪಾಯಿ ಇತ್ತು. ಇನ್ನೂ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು(ಏಪ್ರಿಲ್ 2) 85,110 ರೂಪಾಯಿ ಇದ್ದರೆ, ಕಳೆದ ದಿನ (ಏಪ್ರಿಲ್ 1) 85,100 ರೂಪಾಯಿ ಇತ್ತು. ಹಾಗಾದರೆ ಇಂದು ಭಾರತದಾದ್ಯಂತ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹೇಗಿದೆ ಎಂದು ಈಗ ತಿಳಿಯೋಣ.

ಇಂದು ದೇಶದ ಪ್ರಮುಖ ರಾಜ್ಯಗಳ ಚಿನ್ನದ ಬೆಲೆ (ಏಪ್ರಿಲ್ 2) :-

*ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಹತ್ತು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 92,850ಕ್ಕೆ ತಲುಪಿದೆ.

*ದೆಹಲಿಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 93,000ಕ್ಕೆ ತಲುಪಿದೆ.

*ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 85,260 ರೂಪಾಯಿ ಇದೆ.

*ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 85,110 ಇದೆ

*ಕೋಲ್ಕತ್ತಾ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 85,110 ತಲುಪಿದೆ.

* ಬೆಂಗಳೂರು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 85,110 ಇದೆ.

* ಚೆನ್ನೈ ಮತ್ತು ಹೈದರಾಬಾದ್ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 85,110 ತಲುಪಿದೆ.

Gold and silver prices increased across India including Bengaluru on April 2

ಇಂದು ದೇಶದ ಪ್ರಮುಖ ರಾಜ್ಯಗಳ ಬೆಳ್ಳಿ ಬೆಲೆ (ಏಪ್ರಿಲ್ 2) :-

* ದೆಹಲಿ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ ₹1,05,100 ಇದೆ.

* ಕೋಲ್ಕತ್ತಾ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ ₹1,05,100 ತಲುಪಿದೆ.

* ಮುಂಬೈನಲ್ಲಿ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ ₹1,05,100 ಇದೆ.

* ಚೆನ್ನೈನಲ್ಲಿ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ ₹1,14,100 ತಲುಪಿದೆ.

Take a Poll

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+