ಇಳಿಮುಖಗೊಂಡ ಪೆಟ್ರೋಲ್ ದರ, ಪ್ರಮುಖ ನಗರಗಳಲ್ಲಿ ಎಷ್ಟು?
ನವದೆಹಲಿ, ನವೆಂಬರ್ 12: ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸತತ 21ನೇ ದಿನವೂ ಇಳಿಕೆ ಕಂಡು ಬಂದಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸೋಮವಾರ (ನವೆಂಬರ್ 12) ಬೆಳಗ್ಗೆ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್ ಬೆಲೆ 71 ಡಾಲರ್ ನಷ್ಟಿದೆ. ಇತ್ತೀಚೆಗೆ 86 ಡಾಲರ್ ಪ್ರತಿ ಬ್ಯಾರೆಲ್ ನಂತೆ ಏರಿಕೆಯಾಗಿತ್ತು.
ಇದಲ್ಲದೆ, ಡಾಲರ್ ಎದುರು ರೂಪಾಯಿ ಮೌಲ್ಯ ಸುಧಾರಿಸಿದೆ. ಹೀಗಾಗಿ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಇಳಿಕೆಯಾಗುತ್ತಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 17 ಪೈಸೆ ಹಾಗೂ ಡೀಸೆಲ್ ಬೆಲೆ 15 ಪೈಸೆ ಇಳಿಕೆಯಾಗಿದೆ.
ತೈಲ ಬೆಲೆ ಮೇಲೆ ನಿಯಂತ್ರಣ ಸಿಗದ ಕಾರಣ ಜನಸಾಮಾನ್ಯರ ಮೇಲೆ ತೀವ್ರ ಆರ್ಥಿಕ ಹೊರೆಯಾಗುತ್ತಿದೆ ಎಂದು ವಿರೋಧಪಕ್ಷಗಳ ಪ್ರತಿಭಟನೆ ನಡೆಸಿ, ತೀವ್ರ ಒತ್ತಡ ಹೇರಿದ್ದವು. ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಅಕ್ಟೋಬರ್ 4ರಂದು 2.50 ರೂ. ಇಳಿಕೆ ಮಾಡಿತ್ತು. ಆದರೆ, ಕಡಿಮೆ ಮಾಡಿದ ಮೊತ್ತವನ್ನು ಮೀರಿ ಹತ್ತೇ ದಿನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಬೆಲೆ ಸತತವಾಗಿ ಕುಸಿಯುತ್ತಿದೆ.

ದೆಹಲಿಯಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ
ನವದೆಹಲಿಯಲ್ಲಿ ಕಳೆದ ಮೂರು ದಿನಗಳಲ್ಲಿ ತೈಲದರ ಹೀಗಿದೆ:
ಸೋಮವಾರದಂದು ಪೆಟ್ರೋಲ್ 77.56 ರು(17ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 77.73ರು (16 ಪೈಸೆ ಕಡಿತ)
ಶನಿವಾರದಂದು ಪೆಟ್ರೋಲ್ 77.89ರು(17 ಪೈಸೆ ಇಳಿಕೆ)
***
ಡೀಸೆಲ್ ಬೆಲೆ
ಸೋಮವಾರದಂದು ಡೀಸೆಲ್ 72.31 ರು (15ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 72.46ರು (12 ಪೈಸೆ ಕಡಿತ)
ಶನಿವಾರದಂದು ಪೆಟ್ರೋಲ್ 72.58 ರು(16 ಪೈಸೆ ಇಳಿಕೆ)

ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ
ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ
ನ. 12 ಸೋಮವಾರದಂದು ಪೆಟ್ರೋಲ್ 78.21 ರು(14ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 77.35ರು (16 ಪೈಸೆ ಕಡಿತ)
ಶನಿವಾರದಂದು ಪೆಟ್ರೋಲ್ 77.51ರು(18 ಪೈಸೆ ಇಳಿಕೆ)
***
ಡೀಸೆಲ್ ಬೆಲೆ ಇಳಿಕೆ
ಸೋಮವಾರದಂದು ಡೀಸೆಲ್ 72.72 ರು (13ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 72.85ರು (12 ಪೈಸೆ ಕಡಿತ)
ಶನಿವಾರದಂದು ಪೆಟ್ರೋಲ್ 72.97 ರು(16 ಪೈಸೆ ಇಳಿಕೆ)

ಮುಂಬೈ ನಗರದಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ
ಮುಂಬೈ ನಗರದಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ
ನ. 12 ಸೋಮವಾರದಂದು ಪೆಟ್ರೋಲ್ 83.07ರು(17ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 83.24ರು (16 ಪೈಸೆ ಕಡಿತ)
ಶನಿವಾರದಂದು ಪೆಟ್ರೋಲ್ 83.40ರು(17 ಪೈಸೆ ಇಳಿಕೆ)
***
ಡೀಸೆಲ್ ಬೆಲೆ ಇಳಿಕೆ
ಸೋಮವಾರದಂದು ಡೀಸೆಲ್ 75.76 ರು (16 ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 75.92ರು (13 ಪೈಸೆ ಕಡಿತ)
ಶನಿವಾರದಂದು ಪೆಟ್ರೋಲ್ 76.05ರು (17 ಪೈಸೆ ಇಳಿಕೆ)

ಚೆನ್ನೈ ನಗರದಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ
ಚೆನ್ನೈ ನಗರದಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ದರ
ನ. 12 ಸೋಮವಾರದಂದು ಪೆಟ್ರೋಲ್ 80.56ರು(17ಪೈಸೆ ಇಳಿಕೆ)
ಭಾನುವಾರದಂದು ಪೆಟ್ರೋಲ್ 80.73 ರು (17 ಪೈಸೆ ಕಡಿತ)
ಶನಿವಾರದಂದು ಪೆಟ್ರೋಲ್ 80.90 ರು (18 ಪೈಸೆ ಇಳಿಕೆ)
***
ಡೀಸೆಲ್ ಬೆಲೆ ಇಳಿಕೆ
ಸೋಮವಾರದಂದು ಡೀಸೆಲ್ 76.43 ರು (16 ಪೈಸೆ ಇಳಿಕೆ)
ಭಾನುವಾರದಂದು ಡೀಸೆಲ್ 76.59ರು (13 ಪೈಸೆ ಕಡಿತ)
ಶನಿವಾರದಂದು ಪೆಟ್ರೋಲ್ 76.72ರು (17 ಪೈಸೆ ಇಳಿಕೆ)












Click it and Unblock the Notifications