ಸವರನ್ ಗೋಲ್ಡ್ ಬಾಂಡ್ ಖರೀದಿಗೆ ಇಂದೇ ಕೊನೆಯ ದಿನ: ಬಿಟ್ಟರೆ ಸಿಗದು
ನವದೆಹಲಿ, ಸೆಪ್ಟೆಂಬರ್ 04: 2021ರ ಆರ್ಥಿಕ ವರ್ಷದ ಸವರನ್ ಚಿನ್ನದ ಬಾಂಡ್ ಯೋಜನೆಯ ಆರನೇ ಮತ್ತು ಅಂತಿಮ ಹಂತದ ಯೋಜನೆ ಚಂದಾದಾರಿಕೆಯು ಇಂದು ಮುಕ್ತಾಯವಾಗಲಿದೆ. ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಚಿನ್ನವನ್ನು ಖರೀದಿಸಲು ಅವಕಾಶವಿದೆ.
ಸದ್ಯ ಷೇರುಪೇಟೆಯಲ್ಲಿ ಭಾರೀ ತಲ್ಲಣವೇ ಉಂಟಾಗುತ್ತಿದೆ. ಶುಕ್ರವಾರ ಭಾರತೀಯ ಷೇರುಪೇಟೆಯು ನೆಲಕಚ್ಚಿದೆ. ಇಂತಹ ಕಷ್ಟದ ಸಮಯದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಅನೇಕರು ಮುಂದಾಗಿದ್ದಾರೆ. ಏಕೆಂದರೆ ಚಿನ್ನದ ಮೇಲಿನ ಹೂಡಿಕೆ ಯಾವತ್ತಿದ್ರೂ ಸೇಫ್ ಅನ್ನೋದು ಹಲವರ ನಂಬಿಕೆ.
ಆಗಸ್ಟ್ 31ರಿಂದ ಆರಂಭಗೊಂಡ ಸವರನ್ ಗೋಲ್ಡ್ ಬಾಂಡ್ ಯೋಜನೆಯು ಇಂದು ಅಂದರೆ ಸೆಪ್ಟೆಂಬರ್ 4ಕ್ಕೆ ಕೊನೆಗೊಳ್ಳುತ್ತಿದೆ. ಹಾಗಿದ್ರೆ ಈ ಗೋಲ್ಡ್ ಬಾಂಡ್ ಯೋಜನೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ಕೆಳಗೆ ಓದಿ

ಒಂದು ಗ್ರಾಂ ಚಿನ್ನಕ್ಕೆ ಎಷ್ಟು ರೂಪಾಯಿ?
ಈ ಬಾಂಡ್ ಯೋಜನೆಯಲ್ಲಿ ಸರ್ಕಾರವು ಚಿನ್ನದ ಬೆಲೆಯನ್ನು ಪ್ರತಿ ಗ್ರಾಂಗೆ 5,117 ರೂ. ಅಂದರೆ 10 ಗ್ರಾಂಗೆ 51,170 ರೂ. ಎಂದು ನಿಗದಿಪಡಿಸಿದೆ. ಆದರೆ ನೀವು ಅದನ್ನು ಆನ್‌ಲೈನ್‌ನಲ್ಲಿ ಖರೀದಿಸಿದರೆ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಚಿನ್ನದ ಬಾಂಡ್‌ಗಳನ್ನು ಖರೀದಿಸುವಾಗ 10 ಗ್ರಾಂ ಬೆಲೆ 50,670 ರೂ.

ಎಷ್ಟು ಗ್ರಾಂ.ವರೆಗೆ ಹೂಡಿಕೆ ಮಾಡಬಹುದು?
ಕನಿಷ್ಠ ಅನುಮತಿಸುವ ಹೂಡಿಕೆ 1 ಗ್ರಾಂ ಚಿನ್ನ. ಆರ್ಥಿಕ ವರ್ಷದಲ್ಲಿ ಅರ್ಹ ವ್ಯಕ್ತಿಗಳು ಮತ್ತು ಎಚ್‌ಯುಎಫ್‌ಗಳು ಕನಿಷ್ಠ ಒಂದು ಗ್ರಾಂ ಮತ್ತು ಗರಿಷ್ಠ ನಾಲ್ಕು ಕೆಜಿವರೆಗೆ ಚಿನ್ನವನ್ನು ಪಡೆಯಬಹುದು. ಟ್ರಸ್ಟ್‌ಗಳು ಮತ್ತು ಅಂತಹುದೇ ಘಟಕಗಳು ಹಣಕಾಸು ವರ್ಷದಲ್ಲಿ 20 ಕಿ.ಗ್ರಾಂ ವರೆಗೆ ಖರೀದಿಸಬಹುದು. ಯೋಜನೆಯ ಮುಕ್ತಾಯ ಅವಧಿ 8 ವರ್ಷಗಳು.

ಬಾಂಡ್ ಹೂಡಿಕೆಯ ಮೇಲೆ ಬಡ್ಡಿ ಎಷ್ಟು ಸಿಗುತ್ತೆ?
ನೀವು ಈ ಬಾಂಡ್‌ಗಳನ್ನು ಮಾರಾಟ ಮಾಡಲು ಬಯಸಿದರೆ ನೀವು ಕನಿಷ್ಠ 5 ವರ್ಷಗಳವರೆಗೆ ಕಾಯಬೇಕಾಗುತ್ತದೆ ಮತ್ತು ಈ ಯೋಜನೆಯಡಿಯಲ್ಲಿ ನೀವು ಹೂಡಿಕೆಯ ಮೇಲೆ ಶೇಕಡಾ 2.5 ರಷ್ಟು ವಾರ್ಷಿಕ ಬಡ್ಡಿಯನ್ನು ಪಡೆಯುತ್ತೀರಿ.

ಬಾಂಡ್ ಎಲ್ಲೆಲ್ಲಿ ಖರೀದಿಸಬಹುದು?
ಜನರು ನಿಗದಿತ ವಾಣಿಜ್ಯ ಬ್ಯಾಂಕುಗಳಿಂದ (ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಪಾವತಿ ಬ್ಯಾಂಕುಗಳು) ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಷೇರು ವಿನಿಮಯ ಕೇಂದ್ರಗಳಿಂದ ಬಾಂಡ್‌ಗಳನ್ನು ಖರೀದಿಸಬಹುದು.












Click it and Unblock the Notifications