ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಫ್ ಡಿಐ : ಭಾರತಕ್ಕೆ ವಿಶ್ವದ ನಂ. 1 ಪಟ್ಟ

By Vanitha
|
Google Oneindia Kannada News

ನವದೆಹಲಿ, ಅಕ್ಟೋಬರ್, 01: ವಿದೇಶ ನೇರ ಬಂಡವಾಳ ಹೂಡಿಕೆಯಲ್ಲಿ ಮೊದಲೆರಡು ಸ್ಥಾನಗಳನ್ನು ಗಳಿಸಿದ್ದ ಚೀನಾ ಮತ್ತು ಅಮೆರಿಕಾವನ್ನು ಹಿಂದಿಕ್ಕಿದ ಭಾರತ ವಿಶ್ವದಲ್ಲೇ ನಂಬರ್ 1ಸ್ಥಾನ ಪಡೆದುಕೊಂಡಿದೆ.

ವಾಣಿಜ್ಯ ಆಂಗ್ಲಕ ದೈನಿಕ ಫೈನಾನ್ಷಿಯಲ್ ಟೈಮ್ಸ್ ಪ್ರಕಾರ, '2015ನೇ ಸಾಲಿನ ಮೊದಲ ಆರು (ಜನವರಿಯಿಂದ ಜೂನ್) ತಿಂಗಳ ಅವಧಿಯಲ್ಲಿ ಭಾರತಕ್ಕೆ ಬರೋಬ್ಬರಿ 2 ಲಕ್ಷ ಕೋಟಿ ರೂ ಬಂಡವಾಳ ಹರಿದು ಬಂದಿದೆ. ಇದು ಚೀನಾ ಗಳಿಸಿರುವ ಒಟ್ಟು ಬಂಡಾವಳಕ್ಕಿಂತ 19,000 ಕೋಟಿ ಹಾಗೂ ಅಮೆರಿಕಕ್ಕಿಂತ 26,000 ಕೋಟಿ ಗಿಂತ ಅಧಿಕವಾಗಿದೆ.[981 ಕೋಟಿ ಎಫ್ ಡಿಐ ಹೂಡಿಕೆಗೆ ಕೇಂದ್ರ ಸರ್ಕಾರ ಅಸ್ತು]

FDI : India gain first rank in the world ranking

2014ರಲ್ಲಿ ಭಾರತಕ್ಕೆ 28,000 ಕೋಟಿ ವಿದೇಶ ನೇರ ಬಂಡವಾಳ ಹರಿದು ಬಂದಿದ್ದು, ಭಾರತ ಐದನೇ ಸ್ಥಾನಕ್ಕೆ ಸಮಾಧಾನ ಮಾಡಿಕೊಳ್ಳಬೇಕಿತ್ತು. ಮೊದಲ ನಾಲ್ಕು ಸ್ಥಾನಗಳನ್ನು ಚೀನಾ, ಅಮೆರಿಕಾ, ಬ್ರಿಟನ್ ಹಾಗೂ ಮೆಕ್ಸಿಕೋ ಗಳಿಸಿಕೊಂಡಿದ್ದವು.

ಜಾಗತಿಕ ಸ್ಪರ್ಧಾ ಸೂಚ್ಯಂಕದ ಪಟ್ಟಿಯಲ್ಲಿ ಭಾರತ ೫೫ ನೇ ಸ್ಥಾನ ಪಡೆದುಕೊಂಡಿದ್ದು, ಕಳೆದ ಬಾರಿಗಿಂತ 16 ಸ್ಥಾನಗಳನ್ನು ಹಿಂದಿಕ್ಕಿದೆ. ಕಳೆದ ವರ್ಷದಂತೆಯೇ ಈ ಸಲವೂ ಸ್ವಿಟ್ಜರ್ಲೆಂಡ್ ಪ್ರಥಮ, ಸಿಂಗಾಪುರ, ಅಮೆರಿಕಾ, ಜರ್ಮನಿ, ನೆದರ್ಲೆಂಡ್ ನಂತರದ ಐದು ಸ್ಥಾನ ಪಡೆದುಕೊಂಡಿದೆ.

ವಿದೇಶ ನೇರ ಬಂಡವಾಳ ಹೂಡಿಕೆಯಲ್ಲಿ ಮೊದಲ 10 ಸ್ಥಾನ ಪಡೆದ ದೇಶಗಳು :

ಭಾರತ - 31 ಬಿಲಿಯನ್ ಡಾಲರ್, ಚೀನಾ -28 , ಅಮೆರಿಕಾ - 27 , ಯುಕೆ - 16, ಮೆಕ್ಸಿಕೋ - 14, ಇಂಡೋನೇಷಿಯಾ - 14, ವಿಯೆಟ್ನಾಂ - 8, ಸ್ಪೇನ್ - 7, ಮಲೇಷಿಯಾ - 7, ಆಸ್ಟ್ರೇಲಿಯಾ -7 ಬಿಲಿಯನ್ ಡಾಲರ್

English summary
Business daily Financial Times released Forien investment data on september 2015. According to data India is take first rank compare to first half (January- June) investment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X