Fact Check: ವಾಟ್ಸಾಪ್ ಟಿಕ್ ಮಾರ್ಕ್ ಕುರಿತಂತೆ ಹೀಗೊಂದು ಸುಳ್ಸುದ್ದಿ

ಬೆಂಗಳೂರು, ಏಪ್ರಿಲ್ 7: ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲ ತಾಣ, ಚಾಟಿಂಗ್ ಆಪ್ ಮೂಲಕ ಹಬ್ಬುತ್ತಿರುವ ಸುಳ್ಸುದ್ದಿ ವಿರುದ್ಧ ಸರ್ಕಾರ ಅಗತ್ಯ ಕ್ರಮಗಳನ್ನು ಜರುಗಿಸುತ್ತಿದೆ. ವಾಟ್ಸಾಪ್ ಕೂಡಾ ಫಾರ್ವರ್ಡ್ ಸಂದೇಶಗಳನ್ನೆಲ್ಲ ಬೇಕಾಬಿಟ್ಟಿ ಹಂಚಿಕೆ ಮಾಡುವುದಕ್ಕೆ ಕಡಿವಾಣ ಹಾಕುತ್ತಿದೆ. ಆದರೆ, ಈ ನಡುವೆ ವಾಟ್ಸಾಪ್ ನಲ್ಲಿ ಸಂದೇಶ ಓದಿದ್ದಕ್ಕೆ ಬರುವ ಟಿಕ್ ಮಾರ್ಕ್ ಕುರಿತಂತೆ ಸುಳ್ಳು ಸುದ್ದಿಯೊಂದು ಹಬ್ಬುತ್ತಿದೆ.

ಹಲವು ಗುಂಪುಗಳಲ್ಲಿ ಹರಿದಾಡುತ್ತಿರುವ ವೈರಲ್ ಸಂದೇಶ ಹೀಗಿದೆ:
ಸಿಂಗಲ್ ಟಿಕ್: ಸಂದೇಶ ಕಳಿಸಲಾಗಿದೆ
ಡಬ್ಬಲ್ ಟಿಕ್: ಸಂದೇಶ ತಲುಪಿದೆ
2 ನೀಲಿ ಟಿಕ್ಸ್: ಸಂದೇಶ ಓದಲಾಗಿದೆ
3 ನೀಲಿ ಟಿಕ್ಸ್: ಸರ್ಕಾರದ ಗಮನಕ್ಕೆ ತಿಳಿದು ಬಂದಿದೆ
2 ನೀಲಿ, 1 ಕೆಂಪು ಟಿಕ್: ಸರ್ಕಾರ ನಿಮ್ಮ ವಿರುದ್ಧ ಕ್ರಮ ಜರುಗಿಸಲಿದೆ
1 ನೀಲಿ, 2 ಕೆಂಪು ಟಿಕ್ಸ್: ಸರ್ಕಾರ ನಿಮ್ಮ ಡೇಟಾ ಪರೀಕ್ಷಿಸುತ್ತಿದೆ.
3 ಕೆಂಪು ಟಿಕ್ಸ್: ಸರ್ಕಾರ ನಿಮ್ಮ ವಿರುದ್ಧ ಕ್ರಮ ಜರುಗಿಸಿದ್ದು, ಕೋರ್ಟಿನಿಂದ ನಿಮಗೆ ಸಮನ್ಸ್ ಬರಲಿದೆ.

Fake: Govt has not issued any order regarding the ticks below your WhatsApp message

ಸತ್ಯಾಸತ್ಯತೆ: ಸರ್ಕಾರ ಈ ರೀತಿ ಯಾವುದೇ ಸಾಮಾಜಿಕ ಜಾಲ ತಾಣದ ಮೇಲೆ ನಿಗಾವಹಿಸಿಲ್ಲ. ವೈಯಕ್ತಿಕ ಡೇಟಾ ಪರೀಕ್ಷಿಸುತ್ತಿಲ್ಲ. ಈ ರೀತಿ ನೀಲಿ, ಕೆಂಪು, ಎರಡು ಮೂರು ಟಿಕ್ಸ್ ಪರಿಚಯಿಸುವಂತೆ ವಾಟ್ಸಾಪ್ ಬಳಿ ಸರ್ಕಾರ ಕೇಳಿಕೊಂಡಿಲ್ಲ.

ಇದೇ ರೀತಿ ವಾಟ್ಸಾಪ್ ಅಥವಾ ಟ್ವಿಟ್ಟರಲ್ಲಿ ಕೊರೊನಾ ವಿರುದ್ಧ ಟ್ರಾಲ್, ಮೀಮ್ಸ್, ಜೋಕ್, ಕಾರ್ಟೂನ್ ಹಂಚಿಕೊಳ್ಳಲು ಯಾವುದೇ ನಿರ್ಬಂಧ ವಿಧಿಸಿಲ್ಲ. ವಾಟ್ಸಾಪ್ ಸಂದೇಶ ಕುರಿತಂತೆ ಸರ್ಕಾರ ಆದೇಶ ನೀಡಿದೆ ಎಂಬುದು ಸುಳ್ಳು ಸುದ್ದಿ ಎಂದು ಪಿಐಬಿ ಸ್ಪಷ್ಟಪಡಿಸಿದೆ.

ಕೊರೊನಾ ಕುರಿತಂತೆ ಮಾಹಿತಿ ನೀಡುತ್ತಾ ಬಂದಿರುವ ಸರ್ಕಾರವು, fact check ಅಪ್ಡೇಟ್ಸ್ ಗಳನ್ನು ಟ್ವಿಟ್ಟರ್, ಫೇಸ್ಬುಕ್ ನಲ್ಲಿ ನೀಡುತ್ತಿದೆ. ಯಾವುದೇ ಮಾಧ್ಯಮವಾದರೂ ಕೊರೊನಾವೈರಸ್ ಕುರಿತ ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಿ ನಂತರ ಪ್ರಕಟಿಸುವಂತೆ ಸೂಚಿಸಲಾಗಿದೆ ಎಂದು ಸುಪ್ರೀಂಕೋರ್ಟಿಗೆ ಇತ್ತೀಚೆಗೆ ಸರ್ಕಾರ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+