ನಿಮ್ಮ ಪಿಎಫ್ ಖಾತೆಗೂ ಕನ್ನ ಬಿದ್ದಿರಬಹುದು ಈಗ್ಲೇ ನೋಡ್ಕೊಳ್ಳಿ

ನವದೆಹಲಿ, ಅ.19: ಹುಷಾರು, ವಂಚಕರು ಯಾವ ರೂಪದಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ಜೀವನದುದ್ದಕ್ಕೂ ಕಷ್ಟಪಟ್ಟು ದುಡಿದು ಕೂಡಿಟ್ಟ ಗಂಟಿಗೇ ಕನ್ನ ಹಾಕುವವರಿದ್ದಾರೆ. ಅದೂ, ಸುರಕ್ಷಿತವಾಗಿರಲೆಂದು ಸರಕಾರಿ ಸಂಸ್ಥೆಯಲ್ಲಿ ಇಟ್ಟಿದ್ದರೂ ಖದೀಮರು ಅದಕ್ಕೇ ಕನ್ನ ಹಾಕಿದ್ದಾರೆ.

ಏಕೆಂದರೆ ನಕಲಿ ದಾಖಲೆ ಬಳಸಿಕೊಂಡು ಭವಿಷ್ಯ ನಿಧಿಯ ಶೇ. 30ರಷ್ಟು ಖಾತೆಗಳಿಂದ ಹಣ ಪಡೆದಿರುವ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬಂದಿವೆ. ಭವಿಷ್ಯ ನಿಧಿಯ 2.5 ಕೋಟಿಯಷ್ಟು ಖಾತೆಗಳಲ್ಲಿ ಈ ವಂಚನೆ ನಡೆದಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಭವಿಷ್ಯನಿಧಿ ಇಲಾಖೆಯೇ ಬಹಿರಂಗಪಡಿಸಿದೆ.

Employees' Provident Fund Organisation (EPFO) ಮುಖ್ಯ ವಿಚಕ್ಷಣಾ ಅಧಿಕಾರಿ ಸಂಜಯ್ ಕುಮಾರ್ ನಡೆಸಿರುವ ಆಂತರಿಕ ತನಿಖೆಯಿಂದ ಈ ವಂಚನೆ ಬೆಳಕಿಗೆ ಬಂದಿದೆ. ದುರಂತವೆಂದರೆ ಈ ವಂಚನೆಯಲ್ಲಿ ಪಿಎಫ್ ಕಚೇರಿಯ ಸಿಬ್ಬಂದಿಯೇ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬ್ಯಾಂಕುಗಳು Know Your Customer ನಿಯಮಾವಳಿಗಳನ್ನೂ ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳದೇ ಇರುವುದು ಇಂತಹ ವಂಚನೆಗೆ ಸೋಪಾನವಾಗಿದೆ.

Employees' Provident Fund Organisation fraud Scamsters drain out PF accounts

ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪಿಎಫ್ ಇಲಾಖೆ, ಈಗ ತಪ್ಪನನ್ನು ಸರಿಪಡಿಸುವ ಕ್ರಮಕ್ಕೆ ಕೈಹಾಕಿದೆ. ಈ ಲೋಪಕ್ಕೆ ಸಂಬಂಧಿಸಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ರೀತಿಯ ನಕಲಿ ದಾಖಲೆಗಳ ಕುರಿತು ಎಚ್ಚರದಿಂದಿರುವಂತೆಯೂ ಸಿಬ್ಬಂದಿಗೆ ಸೂಚಿಸಿದೆ.

ನಿಷ್ಕ್ರಿಯ ಖಾತೆಗಳೇ ಖದೀಮರಿಗೆ ಅಕ್ಷಯಪಾತ್ರೆ:
ಗಮನಾರ್ಹವೆಂದರೆ ಅನೇಕ ವರ್ಷಗಳಿಂದ ಹಣ ಸಂದಾಯ ಮಾಡದ, ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳದ ಹಾಗೂ ಕಡ್ಡಾಯವಾಗಿ ರಿಟರ್ನ್ಸ್ ಸಲ್ಲಿಸದ ಸಂಸ್ಥೆಗಳಿಗೆ ಸಂಬಂಧಿಸಿ ಈ ವಂಚನೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆದಿವೆ. ಇದಲ್ಲದೆ ಪೋಸ್ಟ್ ಕವರೇಜ್, ಪ್ರೀ ಕವರೇಜ್ ಪರಿಶೀಲನೆಗೊಳಪಡದ ಸಂಸ್ಥೆಗಳಿಗೆ ಸಂಬಂಧಿಸಿದ ಖಾತೆಗಳಲ್ಲೂ ಈ ರೀತಿ ವಂಚನೆ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಅಂದರೆ ಮೊದಲು ನಿಮಗೆ ಉದ್ಯೋಗ ನೀಡಿರುವ ಕಂಪನಿ ಭವಿಷ್ಯನಿಧಿ ಖಾತೆಯನ್ನು ಸಮರ್ಪಕವಾಗಿ ಪಾಲಿಸುತ್ತಿರಬೇಕು. ಜತೆಗೆ ನಿಮ್ಮ ಮೇಲೂ ಜವಾಬ್ದಾರಿಯಿರುತ್ತದೆ. ನೀವು ಉದ್ಯೋಗ ಬದಲಾವಣೆ ಮಾಡಿದ್ದರೆ ಮೊದಲು ನೀವು ಮಾಡಬೇಕಾದ ಕೆಲಸವೆಂದರೆ ಹಿಂದಿನ ಕಂಪನಿಯಲ್ಲಿದ್ದ ಭವಿಷ್ಯನಿಧಿ ಖಾತೆಯನ್ನು (ಪಿಎಫ್) ಹೊಸ ಕಂಪನಿಗೆ ವರ್ಗಾವಣೆಯಾಗುವಂತೆ ನೋಡಿಕೊಳ್ಳಬೇಕು.

ಇದಕ್ಕಾಗಿ ಹೊಸ ಕಂಪನಿ ಮಾನವ ಸಂಪನ್ಮೂಲ ವಿಭಾಗ/ ಫೈನಾನ್ಸ್ ವಿಭಾಗದ ಬೆನ್ನುಹತ್ತಬೇಕು. ಒಟ್ಟಿನಲ್ಲಿ ಹಳೆಯ ಕಂಪನಿಯಲ್ಲಿದ್ದ ನಿಮ್ಮ ಪಿಎಫ್ ಖಾತೆಯು ನಿಷ್ಕ್ರಿಯ ಖಾತೆಯಾಗಿ ಮಾರ್ಪಡದಂತೆ ಜಾಗ್ರತೆ ವಹಿಸಿರಬೇಕು. ಏಕೆಂದರೆ ಇಂತಹ ನಿಷ್ಕ್ರಿಯ ಖಾತೆಗಳೇ ಖದೀಮರಿಗೆ ಅಕ್ಷಯಪಾತ್ರೆಯಾಗಿರುವುದು.

ಇನ್ನು ಕಂಪನಿಗಳೇ ಮುಚ್ಚಿ ಹೋಗಿದ್ದರೆ ಆ ಕಂಪನಿಗಳಲ್ಲಿನ ಕಾರ್ಮಿಕರ ಭವಿಷ್ಯನಿಧಿ ಖಾತೆಗಳಿಂದಲೂ ಹಣವನ್ನು ದೋಚುತ್ತಿರುವುದು ಬೆಳಕಿಗೆ ಬಂದಿದೆ.

ಹಾಗೆಯೇ, 36 ತಿಂಗಳಿಗಿಂತ ಹೆಚ್ಚು ಅವಧಿಗೆ ನಿಮ್ಮ ಪಿಎಫ್ ಖಾತೆಗೆ ನೀವು ಉದ್ಯೋಗ ಮಾಡುತ್ತಿರುವ ಕಂಪನಿಯು ಹಣ ಕಟ್ಟದಿದ್ದರೆ ಅದೂ ನಿಷ್ಕ್ರಿಯ ಖಾತೆಯಾಗುತ್ತದೆ. ಇಂತಹ ಖಾತೆಗಳಿಗೆ ಭವಿಷ್ಯನಿಧಿ ಇಲಾಖೆ ಬಡ್ಡಿ ಸೇರಿಸುವುದಿಲ್ಲ. ಆದರೂ ಇಂತಹ ಖಾತೆಗಳಲ್ಲಿರುವ ಮೊತ್ತವೇ 16,000 ಕೋಟಿ ರೂ. ದಾಟಿದೆ! (ಚಿತ್ರ: www.usatoday.com)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+