ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಲ್ ಎಫ್ ಗೆ ಒಂದೇ ದಿನ ಕೋಟಿಗಟ್ಟಲೆ ನಷ್ಟ

By Mahesh
|
Google Oneindia Kannada News

ಮುಂಬೈ, ಅ.15: ರಿಯಲ್ ಎಸ್ಟೇಟ್ ಸಂಸ್ಥೆ ಡಿಎಲ್ ಎಫ್ ನ ಪ್ರಮುಖ ಅಧಿಕಾರಿಗಳಿಗೆ ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸಲು ಸೆಬಿ ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ ಸಂಸ್ಥೆಗೆ ಭಾರಿ ನಷ್ಟ ಉಂಟಾಗಿದೆ. ಸತತ ಎರಡು ದಿನಗಳಿಂದ ಕಂಪನಿಯ ಷೇರುಗಳು ನೆಲಕಚ್ಚುತ್ತಿವೆ.

ಮಂಗಳವಾರ ಒಂದೇ ದಿನ ಕಂಪನಿಯ ಷೇರುಗಳು ಶೇ 30 ರಷ್ಟು ಕುಸಿತ ಕಂಡ ಪರಿಣಾಮ ಒಟ್ಟಾರೆ 7,126 ಕೋಟಿ ರು ನಷ್ಟ ಅನುಭವಿಸಿ ಮಾರುಕಟ್ಟೆ ಮೌಲ್ಯ ಕಳೆದುಕೊಳ್ಳುತ್ತಿದೆ. 2007ರಲ್ಲಿ ದಾಖಲೆ ಮೊತ್ತದ ಐಪಿಒ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಡಿಎಲ್ ಎಫ್ ಈಗ ಕಾನೂನು ಸಮರ, ಸೆಬಿ ದಂಡ, ಷೇರು ಮಾರುಕಟ್ಟೆಯಲ್ಲಿ ವ್ಯವಹಾರಕ್ಕೆ ನಿರ್ಬಂಧ ಮುಂತಾದ ತೊಂದರೆ ಅನುಭವಿಸುತ್ತಿದೆ.

ಕೆಪಿ ಸಿಂಗ್ ಕುಟುಂಬ ಸೇರಿದಂತೆ ಡಿಎಲ್‌ ಎಫ್ ಮ್ಯಾನೆಜಿಂಗ್ ಡೈರೆಕ್ಟರ್ ಟಿಸಿ ಘೋಯಲ್, ಕಾಮೇಶ್ವರ ಸ್ವರೂಪ್ ಮತ್ತು ರಮೇಶ್ ಸಾಕಾ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಸೆಬಿ ಡಿಎಲ್ ಎಫ್ ಸಂಸ್ಥೆಯ ಉಪಾಧ್ಯಕ್ಷ ಕೆಪಿ ಸಿಂಗ್‌ ಪುತ್ರ ರಾಜೀವ್ ಸಿಂಗ್ ಮತ್ತು ಪುತ್ರಿ ಪಿಯಾ ಸಿಂಗ್ ಅವರಿಗೂ ನಿಷೇಧ ಹೇರಿದೆ.

ಸುಮಾರು 10,000 ಕೋಟಿ ವಾರ್ಷಿಕ ಆದಾಯ ಹೊಂದಿರುವ ರಿಯಲ್ ಎಸ್ಟೇಟ್ ಸಂಸ್ಥೆ ಡಿಎಲ್ ಎಫ್ ಮಾರುಕಟ್ಟೆ ಮೌಲ್ಯ 26,000 ಕೋಟಿ ರು ಮೀರುತ್ತದೆ. 20007ರಲ್ಲಿ ಐಪಿಒ ಮೂಲಕ 9,187 ಕೋಟಿ ರು ಗಳಿಸಿ ದಾಖಲೆ ಬರೆದ ಬೆನ್ನಲ್ಲೇ ಮಾರುಕಟ್ಟೆ ಮೌಲ್ಯವನ್ನು 1 ಲಕ್ಷ ಕೋಟಿ ರುಗೆ ಹೆಚ್ಚಿಸಿಕೊಂಡಿತು. [ನೆಲ ಕಚ್ಚಿದ ಡಿಎಲ್ಎಫ್ ಷೇರು]

DLF

ಡಿಎಲ್ ಎಫ್ ಕಥೆ ಏನು?: ಸೆಬಿ ನಿರ್ಬಂಧವಿರುವುದರಿಂದ ಸಂಸ್ಥೆ ಮೇಲಿರುವ 19,100 ಕೋಟಿ(3.13 ಯುಎಸ್ ಡಾಲರ್) ರು ಗೂ ಅಧಿಕ ಸಾಲದ ಹೊರೆಯನ್ನು ತಗ್ಗಿಸಲು ಆಸ್ತಿ ಮಾರಾಟವೊಂದೇ ದಾರಿ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಿಯಲ್ ಎಸ್ಟೇಟ್ ಬಂಡವಾಳ ಹೂಡಿಕೆ ಟ್ರಸ್ಟ್(REIT) ಮೂಲಕ ನಿಧಿ ಸಂಗ್ರಹಿಸಲು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಲಿಸ್ಟೆಟ್ ಕಂಪನಿಗಳ ನೆರವು ಸಿಗುವುದಿಲ್ಲ. ದೆಹಲಿ ಮೂಲದ ಡಿಎಲ್ ಎಫ್ ಸಂಸ್ಥೆ ಮನೆ, ಕಚೇರಿ, ಶಾಪಿಂಗ್ ಸೆಂಟರ್ ನಿರ್ಮಾಣದಲ್ಲಿ ಜನಪ್ರಿಯತೆ ಗಳಿಸಿದೆ. ಸದ್ಯ 1.9 ಮಿಲಿಯನ್ ಚದರ ಅಡಿ ರೀಟೈಲ್ ಮಾಲ್ ನಿರ್ಮಾಣದಲ್ಲಿ ಡಿಎಲ್ ಎಫ್ ತೊಡಗಿದೆ. [ಮೂರು ವರ್ಷ ನಿಷೇಧದ ಸುದ್ದಿ ]

ಪ್ರಸಕ್ತ ವರ್ಷದ ಆಗಸ್ಟ್ ತಿಂಗಳಿನಲ್ಲಿ ಕಾಂಪಿಟೀಷನ್ ಕಮಿಷನ್ ಅಫ್ ಇಂಡಿಯಾ ವರದಿ ಆಧಾರಿಸಿ ಡಿಎಲ್ ಎಫ್ ಮೇಲೆ ಸುಮಾರು 630 ಕೋಟಿ ರು ಅಥವಾ 103.3 ಮಿಲಿಯನ್ ಡಾಲರ್ ದಂಡವನ್ನು ಸುಪ್ರೀಂಕೋರ್ಟ್ ವಿಧಿಸಿತ್ತು. ಇದೆಲ್ಲದರ ಜೊತೆಗೆ ಹರ್ಯಾಣದಲ್ಲಿ ಭೂ ಹಗರಣದಲ್ಲಿ ಡಿಎಲ್ ಎಫ್ ಸಂಸ್ಥೆ ಆರೋಪಿ ಸ್ಥಾನದಲ್ಲಿದೆ. ಒಟ್ಟಾರೆ ಡಿಎಲ್ ಎಫ್ ಸದ್ಯ ಸಂಕಷ್ಟಗಳ ಸರಮಾಲೆ ಹಾಕಿಕೊಂಡಿದೆ.

English summary
Shares of DLF, India's largest listed property developer, fell to a record low today, crashing by 30 per cent and wiping out Rs. 7,126 crore in market value after market regulator SEBI banned the company from tapping capital markets for three years in one of the watchdog's toughest punishments to date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X