ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರಿತು ಏರಿತು ಆಕಾಶದೆತ್ತರಕ್ಕೆ ಏರಿತು ಪೆಟ್ರೋಲ್, ಡೀಸೆಲ್

|
Google Oneindia Kannada News

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ ಆದ ಹಿನ್ನೆಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸೋಮವಾರ ಕೂಡ ಏರಿಕೆ ಆಗುವ ಮೂಲಕ ಇನ್ನಷ್ಟು ಎತ್ತರಕ್ಕೆ ಏರಿದೆ. ಅಂದಹಾಗೆ ತೈಲ ಮಾರಾಟ ಕಂಪೆನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಪ್ರತಿ ದಿನ ಬದಲಾಯಿಸುತ್ತವೆ. ಆಯಾ ದಿನದ ಬೆಳಗ್ಗೆ ಆರು ಗಂಟೆಗೆ ದರ ಗೊತ್ತಾಗುತ್ತದೆ.

ಅಂದ ಹಾಗೆ ದೆಹಲಿಯಲ್ಲಿ ಪೆಟ್ರೋಲ್ ಚಿಲ್ಲರೆ ಮಾರಾಟ ದರವು ನಾಲ್ಕು ವರ್ಷದ ಹಿಂದಿನ ಎತ್ತರಕ್ಕೆ ಬಂದು ನಿಂತಿದೆ. ಬ್ರ್ಯಾಂಡ್ ರಹಿತ ಪೆಟ್ರೋಲ್ ಪ್ರತಿ ಲೀಟರ್ ಗೆ ಹತ್ತರಿಂದ ಹನ್ನೊಂದು ಪೈಸೆ ಹಾಗೂ ಡೀಸೆಲ್ ಹನ್ನೊಂದರಿಂದ ಹನ್ನೆರಡು ಪೈಸೆ ಹೆಚ್ಚಳವಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರು.73.83 ಇದೆ. ಸೆಪ್ಟೆಂಬರ್ 14, 2013ರಲ್ಲಿ ಬೆಲೆ 76 ರುಪಾಯಿ ಇತ್ತು ಎಂಬುದನ್ನು ಇಂಡಿಯನ್ ಆಯಿಲ್ ಕಂಪೆನಿಯ ವೆಬ್ ಸೈಟ್ ತೋರಿಸುತ್ತಿದೆ. ಇನ್ನು ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ ರು. 76.54 ಇದ್ದರೆ, ಕೋಲ್ಕತ್ತಾದಲ್ಲಿ ರು. 81.69, ಚೆನ್ನೈನಲ್ಲಿ ರು. 76.59 ಇದೆ.

Diesel At Record High, Petrol At 4 Year High

ಇನ್ನು ಡೀಸೆಲ್ ಬೆಲೆಯ ವಿಚಾರಕ್ಕೆ ಬಂದರೆ ದೆಹಲಿಯಲ್ಲಿ ಪ್ರತಿ ಲೀಟರ್ ನ ಬೆಲೆ ರು. 64.69 ಇದ್ದರೆ, ಕೋಲ್ಕತ್ತಾದಲ್ಲಿ ರು. 67.38, ಮುಂಬೈನಲ್ಲಿ ರು. 68.89 ಹಾಗೂ ಚೆನ್ನೈ ನಗರದಲ್ಲಿ ರು. 68.24 ಇದೆ. ಜಾಗತಿಕ ಮಟ್ಟದಲ್ಲಿ ಬ್ಯಾರಲ್ ಕಚ್ಚಾ ತೈಲ ಬೆಲೆಯು 70 ಅಮೆರಿಕನ್ ಡಾಲರ್ ಗೆ ಏರಿಕೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಪೆಟ್ರೋಲ್- ಡೀಸೆಲ್ ಬೆಲೆ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.

English summary
Petrol and diesel prices went up further on Monday as oil marketing companies raised rates amid firming global crude prices. In Delhi, petrol retailed at over 4-year high level while diesel prices were at record high.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X