ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಎಫೆಕ್ಟ್‌: ನಿಮ್ಮ ನೆಚ್ಚಿನ ರೆಸ್ಟೋರೆಂಟ್‌ಗಳು ಶಾಶ್ವತವಾಗಿ ಬಾಗಿಲು ಮುಚ್ಚಬಹುದು

|
Google Oneindia Kannada News

ನವದೆಹಲಿ, ಜುಲೈ 15: ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಜಗತ್ತಿನಲ್ಲಿ ಮಾಡಿರುವ ಅವಾಂತರ ಅಷ್ಟಿಷ್ಟಲ್ಲ. ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡಿರುವುದರ ಜೊತೆಗೆ ಕೋಟ್ಯಾಂತರ ಉದ್ಯೋಗಗಳನ್ನು ಕಸಿದುಕೊಂಡಿದೆ. ಇದರ ಜೊತೆಗೆ ನಿಮ್ಮ ನೆಚ್ಚಿನ ರೆಸ್ಟೋರೆಂಟ್‌ಗಳು ಕೂಡ ಇದೇ ಕೊರೊನಾದಿಂದ ಶಾಶ್ವತವಾಗಿ ಮುಚ್ಚುವ ಪರಿಸ್ಥಿತಿಯಲ್ಲಿವೆ.

Recommended Video

China ಸೈನಿಕರಿಗೆ ಅವಮಾನ | Oneindia Kannada

ಮೆಟ್ರೋ ನಗರಗಳಲ್ಲಿ ಕೊರೊನಾವೈರಸ್ ಹಾವಳಿ ಹೆಚ್ಚಿರುವುದರಿಂದ ನಿಯಮಗಳು ಬಿಗಿಗೊಳ್ಳುತ್ತಿದ್ದು, ಜನರು ಕೂಡ ತಮ್ಮ ತಮ್ಮ ಸ್ವಂತ ಊರುಗಳಿಗೆ ವಾಪಸ್ ತೆರಳುತ್ತಿದ್ದಾರೆ. ಹೀಗಾಗಿ ರೆಸ್ಟೋರೆಂಟ್‌ಗಳು ಒಂದೊಮ್ಮೆ ಬಾಗಿಲು ತೆರೆದರೂ ಗ್ರಾಹಕರೇ ಇಲ್ಲದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ದೆಹಲಿಯ ಹೋಟೆಲ್‌ಗಳಿಗೆ ಚೀನಾ ಪ್ರವಾಸಿಗರ ಪ್ರವೇಶ ನಿಷೇಧದೆಹಲಿಯ ಹೋಟೆಲ್‌ಗಳಿಗೆ ಚೀನಾ ಪ್ರವಾಸಿಗರ ಪ್ರವೇಶ ನಿಷೇಧ

ದೇಶದ ಪ್ರಮುಖ ನಗರಗಳಲ್ಲಿ ಸ್ವತಂತ್ರ ರೆಸ್ಟ್ರೋರೆಂಟ್‌ಗಳು ಮೆಟ್ರೋ ನಗರಗಳಲ್ಲಿ ಶಾಶ್ವತವಾಗಿ ಸ್ಥಗಿತಗೊಂಡಿವೆ. ಮುಂದಿನ ಕೆಲವು ವಾರಗಳಲ್ಲಿ ಕ್ರಮೇಣ ವಿಶೇಷವಾಗಿ ಮುಂಬೈ, ದೆಹಲಿಯಲ್ಲಿನ ಹೆಚ್ಚಿನ ರೆಸ್ಟೋರೆಂಟ್‌ಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ರೆಸ್ಟೋರೆಂಟ್‌ಗಳು ತಿಳಿಸಿವೆ.

ಮರು ಒಪ್ಪಂದ ಮಾಡಿಕೊಳ್ಳಲು ಎರಡು ಬಾರಿ ಯೋಚಿಸಬೇಕು

ಮರು ಒಪ್ಪಂದ ಮಾಡಿಕೊಳ್ಳಲು ಎರಡು ಬಾರಿ ಯೋಚಿಸಬೇಕು

ಹೌದು, ಮುಂಬೈ , ದೆಹಲಿಯಂತಹ ನಗರದಲ್ಲಿ ಮುಂದಿನ ವಾರಗಳಲ್ಲಿ ಎಷ್ಟೋ ರೆಸ್ಟೋರೆಂಟ್‌ಗಳು ಭೂಮಾಲೀಕರಿಗೆ ಗುತ್ತಿಗೆ ಮಾತುಕತೆ ಮುಕ್ತಾಯಗೊಳ್ಳುತ್ತಿರುವುದರಿಂದ ಮತ್ತೆ ಮರು ಮಾತುಕತೆ ನಡೆಸುವುದು ಬಹುತೇಕ ಅನುಮಾನವಾಗಿದೆ. ಒಂದು ವೇಳೆ ಮಾಡಿಕೊಂಡರು ಮೊದಲಿನಂತೆ ವ್ಯವಹಾರ ನಡೆಯುತ್ತದೆ ಎಂಬುದು ಅನುಮಾನ ಮೂಡಿದೆ. ಹೀಗಾಗಿ ಅನೇಕ ರೆಸ್ಟೋರೆಂಟ್‌ಗಳು ಮತ್ತೆ ಗುತ್ತಿಗೆ ಪಡೆಯುವುದನ್ನು ಸ್ಥಗಿತಗೊಳಿಸಬಹುದು.

ಯಾವೆಲ್ಲಾ ರೆಸ್ಟೋರೆಂಟ್‌ಗಳು ಸಂಕಷ್ಟಕ್ಕೆ ಸಿಲುಕಿವೆ

ಯಾವೆಲ್ಲಾ ರೆಸ್ಟೋರೆಂಟ್‌ಗಳು ಸಂಕಷ್ಟಕ್ಕೆ ಸಿಲುಕಿವೆ

ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಏರಿಳಿತದ ಪರಿಣಾಮವು ದೇಶದ ಅನೇಕ ನಗರಗಳಲ್ಲಿ ಅನೇಕ ಬ್ರ್ಯಾಂಚ್‌ಗಳನ್ನು ಹೊಂದಿರುವ ರೆಸ್ಟೋರೆಂಟ್‌ಗಳು ಭಾರೀ ಹೊಡೆತ ತಿಂದಿವೆ. ದಿ ಆಲಿವ್ ಗ್ರೂಪ್, ಇಂಡಿಗೊ ಡೆಲಿ ಮತ್ತು ಸ್ಮೋಕ್ ಹೌಸ್ ಡೆಲಿಯಂತಹ ಉತ್ತಮ ಡೈನಿಂಗ್ ಸರಪಳಿಗಳು ಅನೇಕ ಕಡೆ ಮುಚ್ಚುವ ಹಂತ ತಲುಪಿವೆ.

ಮಿರ್ಚಿ ಮತ್ತು ಮೈಮ್, ಕೆಫೆ ಟರ್ಟಲ್ ಮತ್ತು ಫೋರೇಜ್ ಸೇರಿದಂತೆ ಲೆ ಪೇನ್ ಕೋಟಿಡಿಯನ್‌ನಂತಹ ಅಂತರರಾಷ್ಟ್ರೀಯ ಬೇಕರಿ ಬ್ರಾಂಡ್‌ಗಳು ಭಾರೀ ನಷ್ಟ ಎದುರಿಸುತ್ತಿವೆ. ಅಲ್ಲದೆ ಸಣ್ಣ, ಅಸಂಘಟಿತ ಸ್ವತಂತ್ರ ಮಳಿಗೆಗಳ ಮೇಲೆ ಕೊರೊನಾ ಪರಿಣಾಮ ಹೆಚ್ಚು ಎಂದು ವಿಶ್ಲೇಷಕರು ತಿಳಿಸಿದ್ದಾರೆ.

"ಕೋವಿಡ್ -19 ಮತ್ತು ನಮ್ಮ ಜಮೀನುದಾರರೊಂದಿಗೆ ಸೌಹಾರ್ದಯುತ ಗುತ್ತಿಗೆ ನಿಯಮಗಳ ವಿಘಟನೆಯಿಂದಾಗಿ ನಮ್ಮ ಎರಡೂ ರೆಸ್ಟೋರೆಂಟ್‌ಗಳ ಶಾಶ್ವತ ಮುಚ್ಚುವಿಕೆಗಳನ್ನು ನಾವು ಬಹಳ ದುಃಖದಿಂದ ಘೋಷಿಸುತ್ತೇವೆ" ಎಂದು ಮಿರ್ಚಿ ಮತ್ತು ಮೈಮ್ ಮತ್ತು ಮಡೈರಾ ಮತ್ತು ಮೈಮ್ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಭವಿಷ್ಯದ ಬಗ್ಗೆ ಯಾವುದೇ ನಿರೀಕ್ಷೆಗಳು ಉಳಿದಿಲ್ಲ

ಭವಿಷ್ಯದ ಬಗ್ಗೆ ಯಾವುದೇ ನಿರೀಕ್ಷೆಗಳು ಉಳಿದಿಲ್ಲ

ಪ್ರಮುಖ ನಗರಗಳಲ್ಲಿ ತಮ್ಮ ಬ್ರ್ಯಾಂಚ್‌ಗಳನ್ನು ಹೊಂದಿರುವಂತಹ ರೆಸ್ಟೋರೆಂಟ್‌ಗಳು ಮುಂದಿನ ದಿನಗಳ ಅನಿರೀಕ್ಷಿತ ಗ್ರಾಹಕರ ಆಗಮನವನ್ನು ಎದುರಿಸುತ್ತಿವೆ. ಇದಲ್ಲದೆ ಭೂ ಮಾಲೀಕರ ಜೊತೆಗೆ ಮರು ಮಾತುಕತೆ ನಡೆಸಲು ಸಹ ನಿರಾಕರಿಸಿವೆ.


ಏಕೆಂದರೆ ಸಾಮಾಜಿಕ ದೂರ ಮತ್ತು ನೈರ್ಮಲ್ಯ ಕ್ರಮಗಳಿಗಾಗಿ ಖರ್ಚು ಮಾಡಿದ ಮಳಿಗೆಗಳು ಸೇರಿದಂತೆ ಮಳಿಗೆಗಳನ್ನು ಪುನಃ ತೆರೆಯುವ ವೆಚ್ಚವು 50 ಲಕ್ಷ ರೂ.ಗಳಷ್ಟಿದ್ದು, ಇದು ಕಾರ್ಯಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಕಳೆದ ಕೆಲವು ತಿಂಗಳುಗಳಿಂದ ವಿವಿಧ ಸಚಿವಾಲಯಗಳಿಗೆ ಹಲವಾರು ಪ್ರಾತಿನಿಧ್ಯಗಳ ಹೊರತಾಗಿಯೂ, ಸರ್ಕಾರವು ಇನ್ನೂ ರೆಸ್ಟೋರೆಂಟ್ ಉದ್ಯಮಕ್ಕೆ ಯಾವುದೇ ಪ್ಯಾಕೇಜ್ ಘೋಷಿಸಿಲ್ಲ.

ವಾರ್ಷಿಕ 4 ಲಕ್ಷ ಕೋಟಿ ರೂಪಾಯಿಗಳ ವಹಿವಾಟು

ವಾರ್ಷಿಕ 4 ಲಕ್ಷ ಕೋಟಿ ರೂಪಾಯಿಗಳ ವಹಿವಾಟು

ರೆಸ್ಟೋರೆಂಟ್ ವಲಯವು ವಾರ್ಷಿಕ 4 ಲಕ್ಷ ಕೋಟಿ ರೂ.ಗಳ ವಹಿವಾಟು ಹೊಂದಿದ್ದು, 2019 ರಲ್ಲಿ 7 ದಶಲಕ್ಷ ಜನರಿಗೆ ನೇರ ಉದ್ಯೋಗವನ್ನು ಒದಗಿಸಿದೆ ಎಂದು ಇಂಡಸ್ಟ್ರಿ ಲಾಬಿ ಗ್ರೂಪ್, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್‌ಆರ್‌ಐಐ) ತಿಳಿಸಿದೆ.

ಎರಡು ತಿಂಗಳ ಲಾಕ್‌ಡೌನ್ ನಂತರ ಮತ್ತೆ ರೆಸ್ಟೋರೆಂಟ್‌ಗಳನ್ನು ತೆರೆದ ಬಳಿಕ, ಲಾಕ್‌ಡೌನ್‌ಗೂ ಮುಂಚಿನ ಗ್ರಾಹಕರಿಗಿಂತ ಕೇವಲ ಶೇ. 5 ರಿಂದ 8ರಷ್ಟು ಗ್ರಾಹಕರನ್ನು ಮಾತ್ರ ವರದಿ ಮಾಡಿದೆ.

ಡಿಗಸ್ಟಿಬಸ್ ಹಾಸ್ಪಿಟಾಲಿಟಿ ನಡೆಸುತ್ತಿರುವ ಕಟ್ರಿಯಾರ್, ಮುಂಬಯಿಯಲ್ಲಿ ಡಿ: ಓಹ್ ಥಾಣೆ ಮತ್ತು ಅಂಧೇರಿ ವೆಸ್ಟ್, ನವೀ ಮುಂಬಯಿಯ ಶೋಶಾ, ಮತ್ತು ಕುರ್ಲಾದ ಇಂಡಿಗೊ ಡೆಲಿ ಸೇರಿದಂತೆ ನಾಲ್ಕು ರೆಸ್ಟೋರೆಂಟ್‌ಗಳನ್ನು ಮುಚ್ಚುತ್ತಿದ್ದಾರೆ.

"ನಮ್ಮ ವ್ಯವಹಾರ ಮಾದರಿಗಳು ಬದಲಾಗಿವೆ ಮತ್ತು ಅದು ಬದಲಾದರೆ ಭೂಮಾಲೀಕರು, ಆಹಾರ ಸಂಗ್ರಾಹಕರು, ಮಧ್ಯಸ್ಥಗಾರರ ವ್ಯವಹಾರ ಮಾದರಿಗಳು ಬದಲಾಗಬೇಕಾಗುತ್ತದೆ" ಎಂದು ವಾವ್! ಮೊಮೊ ಸಂಸ್ಥಾಪಕ ಸಾಗರ್ ದರಿಯಾನಿ ಹೇಳಿದರು

ವಾವ್! ಮೊಮೊ ಮುಂದಿನ ಮೂರು ತಿಂಗಳಲ್ಲಿ 40 ಹೊಸ ಮಳಿಗೆಗಳನ್ನು ಹೊಸ ಗುತ್ತಿಗೆ ನಿಯಮಗಳಲ್ಲಿ ತೆರೆಯುತ್ತದೆ ಮತ್ತು ಮಾರ್ಚ್‌ನಲ್ಲಿ ಪರಿಸ್ಥಿತಿಯನ್ನು ಮರು ಮೌಲ್ಯಮಾಪನ ಮಾಡುತ್ತದೆ ಎಂದು ಅವರು ಹೇಳಿದರು.

 ಕೊರೊನಾ ಎಫೆಕ್ಟ್‌: ಮುಚ್ಚುವ ಸ್ಥಿತಿಯಲ್ಲಿವೆ ದೇಶದ ಶೇ. 17ರಷ್ಟು ಸ್ಟಾರ್ಟ್‌ ಅಪ್ ಕಂಪನಿಗಳು ಕೊರೊನಾ ಎಫೆಕ್ಟ್‌: ಮುಚ್ಚುವ ಸ್ಥಿತಿಯಲ್ಲಿವೆ ದೇಶದ ಶೇ. 17ರಷ್ಟು ಸ್ಟಾರ್ಟ್‌ ಅಪ್ ಕಂಪನಿಗಳು

English summary
Over a dozen popular eateries—including high-end chains, standalone joints and casual dining restaurantshave permanently shut down across metros following the Covid-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X