ಗ್ರಾಹಕರಿಗೆ ಸೂಚನೆ: ಆಗಸ್ಟ್ 1 ರಿಂದ ಏನೆಲ್ಲ ಬದಲಾವಣೆಯಾಗಲಿದೆ?
ಕೊರೊನಾ
ಸಾಂಕ್ರಾಮಿಕ ಸಂಕಷ್ಟದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಕೊರತೆ, ಲಾಕ್‌ಡೌನ್ ದೆಸೆಯಿಂದ ಮಾರಾಟ, ಕೊಳ್ಳುವಿಕೆಗೆ ಇದ್ದ ತಡೆ ಈಗ ತೆರವಾಗಿದೆ. ಆನ್‌ಲೈನ್ ಮಾರುಕಟ್ಟೆ ಚಾಲನೆಯಲ್ಲಿದ್ದರೂ ದಿನದಿಂದ ದಿನಕ್ಕೆ ಅನೇಕ ವಸ್ತುಗಳ ದರ ಏರಿಕೆಯಾಗುತ್ತಿವೆ. ಆಗಸ್ಟ್ 1ರಿಂದ ಪ್ರಮುಖ 5 ಬದಲಾವಣೆಗಳಾಗಲಿದ್ದು, ಹೆಚ್ಚಿನ ಬದಲಾವಣೆಗಳು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ. ಕೋವಿಡ್ 19 ಹೊಡೆತದಿಂದ ತತ್ತರಿಸಿರುವ ವಿವಿಧ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. id="toptextpromo"> id='are-slot-1' class='oiad oi-axt oiadv'>ಪ್ರಮುಖವಾಗಿ
ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ದರ ತಿಂಗಳ ಮೊದಲ ದಿನ ಪರಿಷ್ಕರಣೆಯಾಗಲಿದೆ. ಆದಾಯ ತೆರಿಗೆ ಪಾವತಿ ಕುರಿತಂತೆ ಬದಲಾವಣೆ ಘೋಷಣೆಯಾಗಿದೆ. ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ದರವಂತೂ ಏರುತ್ತಿದೆ. ಇದರಿಂದ ಸರಕು ಸಾಗಣೆ ಅವಲಂಬಿತ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಒಟ್ಟಾರೆ, ತಿಂಗಳ ಆರಂಭದಲ್ಲಿ ಜೇಬಿಗೆ ಕತ್ತರಿ ಬೀಳಲಿದ್ದು, ಜನ ಸಾಮಾನ್ಯರು ಚಿಂತೆ ಸಹಜವಾಗಿದೆ. ಒಟ್ಟಾರೆ, ಆಗಸ್ಟ್ 1 ರಿಂದ ಏನೇನು ಬದಲಾವಣೆ ಮುಂದೆ ಓದಿ... id='are-slot-2' class='oiad oi-axt oiadv'>
ಪ್ರತಿ ತಿಂಗಳ ಮೊದಲ ದಿನ ನಿರೀಕ್ಷಿತ ಬೆಲೆ ಏರಿಕೆ
ಎಲ್ ಪಿ ಜಿ ಸಿಲಿಂಡರ್ ಬೆಲೆ ಪ್ರತಿ ತಿಂಗಳ ಮೊದಲ ದಿನದಂದು ಗೃಹ ಬಳಕೆ ಹಾಗೂ ವಾಣಿಜ್ಯ ಉದ್ದೇಶಿತ ಎಲ್ ಪಿ ಜಿ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗಲಿದೆ. ಸದ್ಯ ಬೆಂಗಳೂರಿನಲ್ಲಿ ಜೂನ್ ತಿಂಗಳಲ್ಲಿ 14.2 ಕೆ.ಜಿ ಸಿಲಿಂಡರ್ ಬೆಲೆ 812 ರು ನಷ್ಟಿದೆ. ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದಾಗಿದೆ.

ಎಟಿಎಂ ಸೇವಾ ಶುಲ್ಕ ಹೆಚ್ಚಳ
ಸರಿ ಸುಮಾರು 9 ವರ್ಷಗಳ ಬಳಿಕ ಎಟಿಎಂ ಸೇವಾ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ. ಈ ಬಗ್ಗೆ ಆರ್ ಬಿ ಐ ಪ್ರಕಟಣೆ ಹೊರಡಿಸಿದೆ. ಎಟಿಎಂ ಸೇವಾ ಶುಲ್ಕ 15 ರುಪಾಯಿಯಿಂದ 17ರು ಗೇರಲಿದೆ. ಇದರ ಜೊತೆಗೆ ಹಣಕಾಸೇತರ ಶುಲ್ಕ 5 ರುಪಾಯಿಯಿಂದ 6 ರುಗೇರಿದೆ. ಬೇರೆ ಬ್ಯಾಂಕಿನ ಕಾರ್ಡ್ ಎಟಿಎಂನಲ್ಲಿ ಬಳಸಿದರೆ ಇಂಟರ್ ಜೇಂಜ್ ಶುಲ್ಕ ವಿಧಿಸಲಾಗುತ್ತದೆ. ಪ್ರತಿ ವಹಿವಾಟಿಗೆ 20 ರುಪಾಯಿ ಇದ್ದ ಈ ಶುಲ್ಕ 1 ರುಪಾಯಿ ಹೆಚ್ಚಳವಾಗಲಿದೆ. ಆದರೆ, ಇದು ಜನವರಿ 1, 2022ರಿಂದ ಸಂಪೂರ್ಣವಾಗಿ ಚಾಲನೆಗೆ ಬರಲಿದೆ.

ಇ ಫೈಲಿಂಗ್ ಗಡುವು ವಿಸ್ತರಣೆ
15 ಸಿಎ, 15 ಸಿಬಿ ಫಾರ್ಮ್ ಸಲ್ಲಿಕೆ ಅವಧಿಯನ್ನು ಜುಲೈ 15ರ ಗಡುವಿನಿಂದ ಆಗಸ್ಟ್ 15ಕ್ಕೆ ವಿಸ್ತರಿಸಿ ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಸೂಚನೆ ನೀಡಿದೆ.
ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ನಮೂನೆ 15 ಸಿಎ/ 15 ಸಿಬಿಯನ್ನು ವಿದ್ಯುನ್ಮಾನವಾಗಿ ಫೈಲ್ ಮಾಡುವ ಅವಶ್ಯಕತೆಯಿದೆ. ಪ್ರಸ್ತುತ, ತೆರಿಗೆದಾರರು ಯಾವುದೇ ವಿದೇಶಿ ಹಣ ರವಾನೆಗಾಗಿ ಅಧಿಕೃತ ಮಾರಾಟಗಾರರಿಗೆ ನಕಲನ್ನು ಸಲ್ಲಿಸುವ ಮೊದಲು, ಇ-ಫೈಲಿಂಗ್ ಪೋರ್ಟಲ್‌ನಲ್ಲಿ, ಅನ್ವಯವಾಗುವಂತೆ ಫಾರ್ಮ್ 15 ಸಿಬಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಪ್ರಮಾಣಪತ್ರದೊಂದಿಗೆ ಫಾರ್ಮ್ 15 ಸಿಎ ಅನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

ಇಂಡಿಯಾ ಪೋಸ್ಟ್ ಪೇಮೆಂಟ್ ಹಾಗೂ NACH
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಶುಲ್ಕ ದರ ಬದಲಾಗಿದೆ. ಈ ಸೌಲಭ್ಯ ಬಳಸಿ ಮನೆ ಬಾಗಿಲಿಗೆ ಸೇವೆ ಪಡೆಯಲು 20 ರು ಪ್ಲಸ್ ಜಿ ಎಸ್ ಟಿ ಪಾವತಿಸಬೇಕಾಗುತ್ತದೆ. ಪ್ರತಿ ವಹಿವಾಟಿನ ಮೇಲೆ ಶೇ 20ರಷ್ಟು ಹೆಚ್ಚುವರಿ ಶುಲ್ಕ ಹಾಗೂ ಜಿಎಸ್ ಟಿ ವಿಧಿಸಲಾಗುತ್ತದೆ.
ಇದಲ್ಲದೆ, ನ್ಯಾಷನಲ್ ಆಟೋಮ್ಯಾಟೆಡ್ ಕ್ಲಿಯೆರಿಂಗ್ ಹೌಸ್(NACH) ಸೌಲಭ್ಯಗಳು ಆಗಸ್ಟ್ 1ರಿಂದ ವಾರದ ಎಲ್ಲಾ ದಿನಗಳು, ಎಲ್ಲಾ ಸಮಯದಲ್ಲಿ ಲಭ್ಯವಾಗಲಿವೆ. ವೇತನ, ಪಿಂಚಣಿ, ಸಗಟು ಪಾವತಿ, ವಿಮೆ ಪಾವತಿ, ಬಿಲ್ ಪಾವತಿ ಇತ್ಯಾದಿ ಪ್ರಕ್ರಿಯೆ ಸುಲಭವಾಗಲಿದೆ,

ಐಸಿಐಸಿಐ ಬ್ಯಾಂಕ್ ನಗದು ವಹಿವಾಟು
ಐಸಿಐಸಿಐ ಬ್ಯಾಂಕ್ ಉಳಿತಾಯ ಖಾತೆ/ವೇತನ ಖಾತೆ ಹಾಗೂ ಇನ್ನಿತರ ಖಾತೆಗಳ ನಗದು ವಹಿವಾಟು ಶುಲ್ಕಗಳನ್ನು ಪರಿಷ್ಕರಿಸಲಾಗಿದೆ. ಇದರ ಅನ್ವಯ ಒಂದು ತಿಂಗಳಿಗೆ ನಾಲ್ಕು ಬಾರಿ ಮಾತ್ರ ಉಚಿತವಾಗಿ ವಹಿವಾಟು ನಡೆಸಬಹುದು. ನಂತರ ಪ್ರತಿ ಐದನೇ ವಹಿವಾಟಿನ ಮೇಲೆ 150 ರು ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ, ಇನ್ಮುಂದೆ ಠೇವಣಿ, ನಗದೀಕರಣ ಮೊತ್ತಕ್ಕೂ ಮಿತಿ ನಿಗದಿಯಾಗಲಿದೆ. ದಿನಕ್ಕೆ 25,000 ರು ನಗದು ವಹಿವಾಟು ಮಿತಿ ಮೀರಿದರೆ ಪ್ರತಿ 1,000 ರುಗೆ 5 ರು ನಂತೆ ಅಥವಾ ಕನಿಷ್ಠ 150 ರು ಶುಲ್ಕ ತೆರಬೇಕಾಗುತ್ತದೆ. ಒಂದು ವೇಳೆ ನಿಮ್ಮ ಖಾತೆ ಹೋಂ ಬ್ರ್ಯಾಂಚ್ ನಲ್ಲಿಲ್ಲದಿದ್ದರೆ ಈ ಶುಲ್ಕದ ಮೊತ್ತದ ಹೆಚ್ಚಾಗಲಿದೆ. ಆದರೆ, ಕೆಲ ಖಾತೆಗಳಿಗೆ ವಿನಾಯಿತಿ ಕೂಡಾ ನೀಡಲಾಗಿದೆ.












Click it and Unblock the Notifications