ಜುಲೈ 1ರಂದು ಸರ್ಕಾರದಿಂದ ಜಿಎಸ್‌ಟಿ ದಿನಾಚರಣೆ

ನವದೆಹಲಿ, ಜೂನ್ 30: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿ ಜಾರಿಗೆ ತಂದು ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜುಲೈ 1ಅನ್ನು 'ಜಿಎಸ್‌ಟಿ ದಿನ'ವನ್ನಾಗಿ ಕೇಂದ್ರ ಸರ್ಕಾರ ಆಚರಿಸಲಿದೆ.

ಶನಿವಾರ (ಜೂನ್ 30) ಮಧ್ಯರಾತ್ರಿ ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ಸರ್ಕಾರವು ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಇದರಲ್ಲಿ ಕೇಂದ್ರ ರೈಲ್ವೆ, ಹಣಕಾಸು ಸಚಿವ ಪಿಯೂಷ್ ಗೋಯಲ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಕೇಂದ್ರ, ರಾಜ್ಯ ಮತ್ತು ಸ್ಥಳೀಯವಾಗಿ ವಿಧಿಸಲಾಗುತ್ತಿದ್ದ ವಿವಿಧ ಬಗೆಯ ತೆರಿಗೆಗಳನ್ನು ತೆಗೆದುಹಾಕುವ, ಏಕರೂಪದ ತೆರಿಗೆ ವ್ಯವಸ್ಥೆಯ ಮಸೂದೆಯನ್ನು 2014ರ ಡಿಸೆಂಬರ್ 19ರಂದು ಸಂಸತ್‌ನಲ್ಲಿ ಮಂಡಿಸಲಾಗಿತ್ತು.

centre to celebrate gst day on july 1

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತೆರಿಗೆ ಸಮಪ್ರಮಾಣದ ಪಾಲನ್ನು ಹಂಚುವುದು ಈ ಪದ್ಧತಿಯ ಉದ್ದೇಶವಾಗಿತ್ತು.

ದೇಶದೊಳಗೆ ಸರಕುಗಳ ಮುಕ್ತ ಹರಿವಿಗೆ ಅನುಕೂಲ ಕಲ್ಪಿಸಿಕೊಡಲು 2018ರ ಏಪ್ರಿಲ್ 1ರಂದು ಇ-ವೇಯನ್ನು ಪರಿಚಯಿಸಲಾಗಿತ್ತು.

ವಿರೋಧ, ಗೊಂದಲಗಳ ನಡುವೆಯೇ ಜಾರಿಗೆ ಬಂದ ಜಿಎಸ್‌ಟಿ ಒಂದು ವರ್ಷದ ಅವಧಿಯಲ್ಲಿ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಉಂಟುಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+