ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಹಿನ್ನೆಲೆಯಲ್ಲಿ ಮೋದಿಯಿಂದ ಮತದಾರರ ಓಲೈಕೆಯ ಬಜೆಟ್?

|
Google Oneindia Kannada News

Recommended Video

Union Budget ( Interim Budget ) 2019 : ನರೇಂದ್ರ ಮೋದಿಗೆ ಮತದಾರರನ್ನ ಓಲೈಸಲು ಈ ಕೇಂದ್ರ ಮಧ್ಯಂತರ ಬಜೆಟ್

ಲೋಕಸಭೆ ಚುನಾವಣೆಗೂ ಮುನ್ನ ಮಂಡಿಸಲಿರುವ ಕೇಂದ್ರ ಬಜೆಟ್ಟಿನಲ್ಲಿ ಮತದಾರರನ್ನು ಓಲೈಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಭರ್ಜರಿ ಅವಕಾಶ ದೊರೆತಿದೆ ಮತ್ತು ಅವರು ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಲಿದ್ದಾರೆ.

ಕಳೆದ ವರ್ಷದ ಡಿಸೆಂಬರ್ ನಲ್ಲಿ ಪ್ರಕಟವಾದ ಐದು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಮೂರು ರಾಜ್ಯಗಳನ್ನು ಭಾರತೀಯ ಜನತಾ ಪಕ್ಷ ಕಳೆದುಕೊಂಡ ನಂತರ ಜನರ ಒಲುಮೆಯನ್ನು ಮರುಗಳಿಸುವುದು ನರೇಂದ್ರ ಮೋದಿ ಸರಕಾರಕ್ಕೆ ಅಗತ್ಯವಾಗಿದೆ.

ಬಜೆಟ್‌ಗೂ ಮುನ್ನ ಮೋದಿ ಸಂಪುಟದಲ್ಲಿ ಮಹತ್ವದ ಬದಲಾವಣೆ ಬಜೆಟ್‌ಗೂ ಮುನ್ನ ಮೋದಿ ಸಂಪುಟದಲ್ಲಿ ಮಹತ್ವದ ಬದಲಾವಣೆ

ಒಂದು ಬದಿ ವಿರೋಧಿ ಪಕ್ಷಗಳು ಚುನಾವಣೆಯಲ್ಲಿ ಜಯ ಸಾಧಿಸುತ್ತಿದ್ದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ನಡೆಸಲಾಗುತ್ತಿರುವ ಚುನಾವಣಾಪೂರ್ವ ಸಮೀಕ್ಷೆಗಳು ಕೂಡ ನರೇಂದ್ರ ಮೋದಿ ಸರಕಾರದ ವಿರುದ್ಧವಾಗಿವೆ. ಈ ದೃಷ್ಟಿಯಿಂದ ಬಡವರನ್ನು, ನಿರುದ್ಯೋಗಿಗಳನ್ನು, ರೈತರನ್ನು, ಗ್ರಾಮಸ್ಥರನ್ನು, ಸಣ್ಣ ಉದ್ಯೋಗಿಗಳನ್ನು, ತೆರಿಗೆದಾರರನ್ನು ಓಲೈಸಿಕೊಳ್ಳಲು ಮೋದಿ ಬಜೆಟ್ ಮೂಲಕ ಪ್ರಯತ್ನಿಸಿದರೆ ಅಚ್ಚರಿಯಿಲ್ಲ.

Budget 2019 : Modi has a chance to impress voters

ದೇಶದ ಬೆನ್ನೆಲುಬಾಗಿರುವ ರೈತನಿಗಾಗಿ 7 ಸಾವಿರ ಕೋಟಿ ರುಪಾಯಿಯನ್ನು ವರ್ಗಾಯಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಅಲ್ಲದೆ ಸಣ್ಣ ವ್ಯಾಪಾರಿಗಳು, ತೆರಿಗೆದಾರರಿಗೂ ಬಳುವಳಿಗಳೂ ಬಂದರೂ ಅಚ್ಚರಿಯಿಲ್ಲ. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷ ಅಥವಾ ಮೂರನೇ ರಂಗದ ಮೈತ್ರಿಕೂಟವನ್ನು ಚುನಾವಣೆಯಲ್ಲಿ ಮಣಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿಯವರು ಆರ್ಥಿಕ ನೀತಿಯನ್ನು ಸಡಿಸಲದಿದ್ದಾರೆ ಮತ್ತು ಜಿಡಿಪಿಯ ಶೇ.3ಕ್ಕಿಂತ ಹೆಚ್ಚು ಕೊರತೆ ಕಂಡುಬರಲಿದೆ ಎಂದು ತಜ್ಞರು ಅಭಿಮತ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದಾಗಿ 2019-20ರ ಆರ್ಥಿಕ ವರ್ಷದಲ್ಲಿ ಸಾಲದ ಹೊರೆ ಕೂಡ ಏರಲಿದೆ.

ರೈತ ಪರ ಬಜೆಟ್ ಮಂಡಿಸದಿದ್ದರೆ ಚುನಾವಣೆ ಬಹಿಷ್ಕಾರ: ಎಚ್ಚರಿಕೆ ರೈತ ಪರ ಬಜೆಟ್ ಮಂಡಿಸದಿದ್ದರೆ ಚುನಾವಣೆ ಬಹಿಷ್ಕಾರ: ಎಚ್ಚರಿಕೆ

ಕೇಂದ್ರ ಸರಕಾರ ಜಾರಿ ಮಾಡಿದ ಹಲವಾರು ಯೋಜನೆಗಳಿಂದಾಗಿ ಖರ್ಚು ಹೆಚ್ಚಾಗಿದ್ದು ಮಾತ್ರವಲ್ಲ ಆರ್ಥಿಕ ಅಭಿವೃದ್ಧಿ ಕೂಡ ಕುಂಠಿತಗೊಂಡಿದ್ದರಿಂದ ಮೋದಿ ಸರಕಾರದ ಮೇಲೆ ಭಾರೀ ಒತ್ತಡವಿದೆ. ಸರಕು ಮತ್ತು ಸೇವಾ ತೆರಿಗೆಯಿಂದ ಒಂದು ಮಾಸಿಕದಲ್ಲಿ ಬರಬೇಕಾಗಿದ್ದ 1 ಟ್ರಿಲಿಯನ್ ರುಪಾಯಿ ಆದಾಯದ ಗುರಿ ಕೂಡ ತಪ್ಪುತ್ತಿದೆ. ಬಜೆಟ್ಟಿನಲ್ಲಿ ಜಿಎಸ್ಟಿ ಸ್ಲಾಬ್ ಗಳಲ್ಲಿ ಮತ್ತೆ ಹಲವಾರು ಬದಲಾವಣೆ ತರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಮಧ್ಯಂತರ ಬಜೆಟ್ ಮನವೊಲಿಕೆಯದ್ದಲ್ಲ, ಅನಾರೋಗ್ಯದ ಮಧ್ಯೆಯೂ ಜೇಟ್ಲಿ ಹೇಳಿದ್ದೇನು?ಮಧ್ಯಂತರ ಬಜೆಟ್ ಮನವೊಲಿಕೆಯದ್ದಲ್ಲ, ಅನಾರೋಗ್ಯದ ಮಧ್ಯೆಯೂ ಜೇಟ್ಲಿ ಹೇಳಿದ್ದೇನು?

ವೈದ್ಯಕೀಯ ರಜೆಯ ಮೇಲಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಪರವಾಗಿ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು ಫೆಬ್ರವರಿ 1ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ. ಚುನಾವಣೆ ಕೇವಲ ನಾಲ್ಕು ತಿಂಗಳು ಮಾತ್ರ ಇರುವುದರಿಂದ ಮಧ್ಯಂತರ ಬಜೆಟ್ ಅನ್ನು ಪಿಯೂಶ್ ಗೋಯಲ್ ಮಂಡಿಸಲಿದ್ದಾರೆ. ವೋಟ್ ಆನ್ ಅಕೌಂಟ್ ಮಾತ್ರ ಮಂಡಿಸಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ.

English summary
Budget 2019 : Narendra Modi has a golden chance to impress voters, especially farmers, rural people, small businessmen, tax payers by giving them goodies in the last budget before Lok Sabha Elections 2019. Will it make an impact on economic growth? What the experts say?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X