ಕಪ್ಪು ಹಣ ಖಾತೆ: ಒಟ್ಟು 2,428 ಕೋಟಿ ರು ಆದಾಯ ಸಂಗ್ರಹ

Posted By:
Subscribe to Oneindia Kannada

ನವದೆಹಲಿ, ಜ.07: ಕಪ್ಪುಹಣ ಹೊಂದಿದವರು ಒಂದು ಬಾರಿ ಘೋಷಣೆ ಹಾಗೂ ತೆರಿಗೆ ಪಾವತಿಗೆ ಸರ್ಕಾರ ನೀಡಿದ್ದ ಅವಕಾಶದಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 2,428 ಕೋಟಿ ರು ಆದಾಯ ಸಿಕ್ಕಿದೆ. ಒಟ್ಟು 644 ಘೋಷಣೆಗಳನ್ನು ಸರಕಾರವು ಸ್ವೀಕರಿಸಿದ್ದು, ತನ್ಮೂಲಕ 4,164 ಕೋಟಿ ರೂ. ಕಪ್ಪುಹಣದ ಘೋಷಣೆಯಾಗಿತ್ತು.

ಡಿ.31ರವರೆಗೆ ತೆರಿಗೆ ಮತ್ತು ದಂಡದ ರೂಪದಲ್ಲಿ 2,428 ಕೋಟಿ ರು ಸಂಗ್ರಹವಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಪ್ರಕಟಿಸಿದೆ.

ಕೆಲವು ಪ್ರಕರಣಗಳಲ್ಲಿ ಘೋಷಣೆಗಳನ್ನು ಸಲ್ಲಿಸಿದವರು ಕಪ್ಪುಹಣವನ್ನು ಹೊಂದಿದ್ದಾರೆಂಬ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ಮೊದಲೇ ಇತ್ತು. ಇಂಥ ಘೋಷಣೆಗಳನ್ನು ಸ್ವೀಕರಿಸಲಾಗಿಲ್ಲ, ಕೆಲವು ಹಣಪಾವತಿಗಳು ಕೊನೆಯ ದಿನಾಂಕ ಡಿಸೆಂಬರ್ 31ರ ಬಳಿಕ ಬಂದಿವೆ. ಹೀಗಾಗಿ ನಿರೀಕ್ಷಿತ ತೆರಿಗೆ ಸಂಗ್ರಹದಲ್ಲಿ ಕೊರತೆ ಕಂಡು ಬಂದಿದೆ ಎಂದು ಸಿಬಿಡಿಟಿ ಹೇಳಿದೆ.

Government collects Rs 2,428 crore tax

2015ರ ಜುಲೈ 1ರಂದು ಜಾರಿಗೊಳಿಸಿದ್ದ ಕಪ್ಪುಹಣ (ಬಹಿರಂಗಗೊಳಿಸದ ವಿದೇಶಿ ಆದಾಯ ಮತ್ತು ಆಸ್ತಿಗಳು) ಮತ್ತು ತೆರಿಗೆ ಹೇರಿಕೆ ಕಾಯ್ದೆ ಅನ್ವಯ ಈ ಕಪ್ಪುಹಣವನ್ನು ಚಾಲ್ತಿಯಲ್ಲಿರುವ ಹಣವನ್ನಾಗಿ ಪರಿವರ್ತಿಸಲು ಅವಕಾಶವನ್ನು ಕಲ್ಪಿಸಲಾಗಿತ್ತು.

ಕಪ್ಪುಹಣದ ಘೋಷಣೆಗೆ ಸರಕಾರವು ನೀಡಿದ್ದ ಒಂದು ಬಾರಿಯ ಗಡುವು 2015, ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡಿತ್ತು. ಕಪ್ಪುಹಣವನ್ನು ಹೊಂದಿದವರು ಶೇ.30 ತೆರಿಗೆ ಮತ್ತು ಶೇ.30 ದಂಡವನ್ನು 2015,ಡಿಸೆಂಬರ್ 31ರೊಳಗೆ ಪಾವತಿಸಬೇಕಾಗಿತ್ತು.

ಈ ಅವಕಾಶವನ್ನು ಬಳಸಿಕೊಳ್ಳದ ಕಾಳಧನ ಹೊಂದಿರುವವರು ಶೇ.120 ರಷ್ಟು ತೆರಿಗೆ ಮತ್ತು ದಂಡವನ್ನು ಪಾವತಿಸುವ ಜೊತೆಗೆ 10ವರ್ಷಗಳವರೆಗೂ ವಿಸ್ತರಣೆಯಾಗಬಹುದಾದ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Government has collected a total of Rs 2,428.4 crore in taxes after over 600 declarations were made by stash holders to the Income Tax department under the one-time black money compliance window that ended last year.
Please Wait while comments are loading...