ಫಾರ್ಮಾ ಜಗತ್ತಿನಲ್ಲಿ 66 ಬಿಲಿಯನ್ ಡಾಲರ್ ಮೊತ್ತದ ಡೀಲ್ !

Posted By:
Subscribe to Oneindia Kannada

ಬೆಂಗಳೂರು, ಸೆ.14: ಕೆಮಿಕಲ್ ಹಾಗೂ ಹೆಲ್ತ್ ಕೇರ್ ಸಮೂಹ ಸಂಸ್ಥೆ ಬಾಯರ್ ಬುಧವಾರದಂದು ಫಾರ್ಮಾ ಜಗತ್ತಿನ ಅತಿ ದೊಡ್ಡ ಡೀಲ್ ಕುದುರಿಸಿದೆ. ಯುಎಸ್ ಮೂಲದ ಬೀಜೋತ್ಪಾದನಾ ಸಂಸ್ಥೆ ಮೊನ್ಸಾಂಟೋ ಕೊ ಜತೆ ವಿಲೀನ ಒಪ್ಪಂದಕ್ಕೆ ಅಂಕಿತ ಹಾಕಿದೆ. ಮೊನ್ಸಾಟೋ ಸಂಸ್ಥೆಯನ್ನು ಸುಮಾರು 66 ಬಿಲಿಯನ್ ಡಾಲರ್ ಮೊತ್ತ ನೀಡಿ ಬಾಯರ್ ಖರೀದಿಸಿದೆ.

ಸುಮಾರು ನಾಲ್ಕು ತಿಂಗಳಿನಿಂದ ಈ ಬಗ್ಗೆ ಮಾತುಕತೆ, ಚರ್ಚೆ ನಡೆಯುತ್ತಲೇ ಇತ್ತು. ಬುಧವಾರ ಅಂತಿಮ ರೂಪ ಪಡೆದುಕೊಂಡಿದೆ. 127.50 ಯುಎಸ್ ಡಾಲರ್ ಪ್ರತಿ ಷೇರಿಗೆ ನಗದು ಮೊತ್ತ ನೀಡಲು ಸಂಸ್ಥೆಗಳು ಒಪ್ಪಿವೆ. [ಬಾಯರ್ ಕ್ರಾಪ್ ಸೈನ್ಸ್ ಗೆ ಮಲ್ಯ ರಾಜೀನಾಮೆ]

Bayer buys Monsanto

ಮಿಸ್ಸೋರಿ ಮೂಲದ ಮೊನ್ಸಾಟೋ ಕಂಪನಿಯನ್ನು ಲೆವರ್ಕುಸೆನ್ ಮೂಲದ ಬಾಯರ್ ಸಂಸ್ಥೆ ಖರೀದಿಸಿದ ಸುದ್ದಿ ನ್ಯೂಯಾರ್ಕ್ ಷೇರುಪೇಟೆಯಲ್ಲಿ ಯಾವ ಪರಿಣಾಮ ಬೀರುವುದೋ ಕಾದು ನೋಡಬೇಕಿದೆ.

ಯುಎಸ್ ಮೂಲದ ಡೌ ಕೆಮಿಕಲ್ಸ್ ಸಂಸ್ಥೆ ಹಾಗೂ ಡುಪಾಂಟ್ ಸಂಸ್ಥೆ ವಿಲೀನದ ಸುದ್ದಿ ನಂತರ ಕೃಷಿ ಹಾಗೂ ಕೆಮಿಕಲ್ ಸಂಬಂಧಿಸಿದ ಕ್ಷೇತ್ರದಲ್ಲಿ ಇದು ಬಹುದೊಡ್ಡ ವಿಲೀನ ಪ್ರಕ್ರಿಯೆಯಾಗಿದೆ.

ಬಿಟಿ ಹತ್ತಿ ವಿವಾದದ ನಂತರ ಕರ್ನಾಟಕದಲ್ಲಿ ಬರ ಪರಿಸ್ಥಿತಿಯನ್ನು ಸಹಿಸಿಕೊಳ್ಳಬಲ್ಲ ಜೀನ್‌ (ಡಿಎನ್‌ಎ) ಇರುವ ಗಿಡಗಳನ್ನು ಸೃಷ್ಟಿಸಲು ಕೃಷಿ ವಿಶ್ವ ವಿದ್ಯಾಲಯದ ಜತೆ ಇದೇ ಮೊನ್ಸಾಂಟೋ ಎಂಬ ಬಹುರಾಷ್ಟ್ರೀಯ ಕಂಪೆನಿ ಅಧ್ಯಯನಕ್ಕೆ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಆದರೆ, ಯಾವುದೂ ಸಫಲವಾಗಲಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
German chemical and pharmaceutical major Bayer has signed a $66 billion deal to acquire US biotechnology firm Monsanto, according to sources familiar with the matter. The deal will reportedly be the largest all-cash transaction on record reported Reuters
Please Wait while comments are loading...