ಸೆಬಿಟ್ ಇಂಡಿಯಾ ಕಾರ್ಯಕ್ರಮಗಳ ಪಕ್ಷಿನೋಟ

ಬೆಂಗಳೂರು, ಅ. 18 : ನವೆಂಬರ್ 12ರಿಂದ 14ರವರೆಗೆ ನಡೆಯಲಿರುವ ಐಟಿಇ.ಬಿಜ್ ಸೆಬಿಟ್ ಇಂಡಿಯಾದಲ್ಲಿ ಹಲವಾರು ಅತ್ಯುತ್ತಮ ಬ್ರಾಂಡ್‌ಗಳು ಕಾಣಿಸಿಕೊಳ್ಳಲಿದ್ದು ಈ ಪಾಲುದಾರಿಕೆ ಅಡಿ ಉದ್ಘಾಟನಾ ಕಾರ‍್ಯಕ್ರಮ, ವಿಚಾರ ಸಂಕಿರಣ, ಪ್ರದರ್ಶನ ಮತ್ತು ಇತರೆ ನೆಟ್‌ವರ್ಕಿಂಗ್ ಚಟುವಟಿಕೆಗಳು ನಡೆಯಲಿವೆ.

* ಪ್ರತಿಷ್ಠಿತ ಕರ್ನಾಟಕ ಐಟಿ ರಫ್ತು ಪ್ರಶಸ್ತಿಗಳ ಕಾರ‍್ಯಕ್ರಮ ಎಸ್‌ಟಿಪಿಐ ಮತ್ತು ಸಿಇಒ ಕಾನ್‌ಕ್ಲೇವ್‌ಗಳ ಸಹಯೋಗದಲ್ಲಿ ಇದೇ ಸಮಯದಲ್ಲಿ ನಡೆಯಲಿದೆ.

* ನವೆಂಬರ್ 11ರಂದು ಗ್ರಾಮೀಣ ಮಾಹಿತಿ ತಂತ್ರಜ್ಞಾನ ರಸಪ್ರಶ್ನೆ ಕಾರ‍್ಯಕ್ರಮ ನಡೆಯಲಿದೆ. ಕರ್ನಾಟಕದ ಎಲ್ಲಾ ಪ್ರದೇಶಗಳನ್ನು ಸೇರಿದಂತೆ ವಿದ್ಯಾರ್ಥಿ ಇಂಟರ್‌ನೆಟ್ ವಿಶ್ವ ಕಾರ‍್ಯಕ್ರಮವನ್ನು ಆಯೋಜಿಸಲಾಗುವುದು.

Bangalore ITE.BIZ 2014 - CeBIT India - Program details

* ಬೆಂಗಳೂರು ಐಟಿಇಡಾಟ್‌ಬಿಜ್ ಯಾವಾಗಲೂ ಆರಂಭ ಹಂತದ ಕಂಪನಿಗಳಾದ ಸ್ಟಾರ್ಟ್‌ಅಪ್‌ಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಪ್ರಸಕ್ತ ವರ್ಷ ಸೆಬಿಟ್ ಇಂಡಿಯಾದೊಂದಿಗೆ ಸಹಭಾಗಿತ್ವದಲ್ಲಿ +91 ಇನ್ಷಿಯೇಟಿವ್ ಎಂಬ ಕಾರ‍್ಯಕ್ರಮದಡಿ ಮಾಹಿತಿ ತಂತ್ರಜ್ಞಾನ, ಐಟಿಇಎಸ್ ಮತ್ತು ವಿದ್ಯುನ್ಮಾನ ಕ್ಷೇತ್ರದ ಭರವಸೆಯ ಸ್ಟಾರ್ಟ್‌ಅಪ್‌ಗಳನ್ನು ಪ್ರದರ್ಶಿಸಲಿದೆ.

* ಬೆಂಗಳೂರು ಐಟಿಇಡಾಟ್‌ಬಿಜ್‌ನ ಅಡಿಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಎಸ್‌ಟಿಪಿಐ ಪ್ರಮುಖ ಉಪಕ್ರಮವಾಗಿ ದೇಶದ ಎಲ್ಲೆಡೆಯ ಸ್ಟಾರ್ಟ್‌ಅಪ್‌ಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪ್ರದರ್ಶನವನ್ನು ಕೈಗೊಂಡಿದೆ. ಪ್ರಸಕ್ತ ವರ್ಷವೂ ಕೂಡ ಎಸ್‌ಟಿಪಿಐ ಭಾರತ ಮತ್ತು ಕರ್ನಾಟಕದ ಎಲ್ಲೆಡೆಯ ನೂರು ಸದಸ್ಯ ಕಂಪನಿಗಳನ್ನು ಪ್ರದರ್ಶಿಸಲಿದೆ.

* ಜಂಟಿ ಕಾರ‍್ಯಕ್ರಮ 600ಕ್ಕೂ ಹೆಚ್ಚಿನ ಪ್ರದರ್ಶಕರನ್ನು 35 ದೇಶಗಳಿಂದ ಆಕರ್ಷಿಸುವ ನಿರೀಕ್ಷೆ ಇದೆ. ಪ್ರದರ್ಶನ 30 ಸಾವಿರ ಉದ್ಯಮ ಸಂದರ್ಶಕರನ್ನು ಆಕರ್ಷಿಸಲಿದೆ. ಜೊತೆಗೆ 50 ಸಾವಿರ ಸಂಪರ್ಕಾವಕಾಶಗಳನ್ನು ಸೃಷ್ಟಿಸಲಿದೆ. ಭಾರತದ ಕೆಲವು ಪ್ರಮುಖ ರಾಜ್ಯಗಳು ಈ ಕಾರ‍್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

* ಕರ್ನಾಟಕ- ದಿ ಐಟಿ ಕ್ಯಾಪಿಟಲ್ ಆಫ್ ಇಂಡಿಯಾ(ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ-ಕರ್ನಾಟಕ) ಎಂಬ ಕಾರ‍್ಯಕ್ರಮದಲ್ಲಿ ರಾಜ್ಯದ ಕಾರ‍್ಯದರ್ಶಿಗಳು ಇ ಗೌರ‍್ನೆನ್ಸ್ ಮತ್ತು ಎಂ ಗೌರ‍್ನೆನ್ಸ್ ಕುರಿತು ಚರ್ಚಿಸಲಿರುವುದು ಪ್ರಮುಖ ಅಂಶವಾಗಲಿದೆ.

60 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೈಗಾರಿಕಾ ನಾಯಕರು ಹಲವಾರು ಕೈಗಾರಿಕೆಗಳಿಂದ ಕಾರ‍್ಯಕ್ರಮಕ್ಕೆ ಆಗಮಿಸಲಿದ್ದು ಆಧುನಿಕ ತಂತ್ರಜ್ಞಾನ ಮತ್ತು ಅದರ ಪರಿಣಾಮಗಳನ್ನು ಕುರಿತು ಮಾತನಾಡಲಿದ್ದಾರೆ. ಇಆರ್‌ಪಿ ಅಂಡ್ ಡಾಟಾ ಅನಾಲಿಸಿಸ್, ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಮತ್ತು ಡಾಟಾ ಸೇವೆಗಳು, ಮಾಹಿತಿ ತಂತ್ರಜ್ಞಾನ ಸೇವೆಗಳು, ಎಂಟರ್‌ಪ್ರೈಸ್ ಕಂಟೆಂಟ್ ಮ್ಯಾನೇಜ್‌ಮೆಂಟ್, ವೆಬ್ ಅಂಡ್ ಮೊಬೈಲ್ ಸಲ್ಯೂಷನ್ಸ್, ಮಾಹಿತಿ ತಂತ್ರಜ್ಞಾನ ಹಾರ್ಡ್‌ವೇರ್ ಅಂಡ್ ಪೆರಿಫೆರಲ್ಸ್, ಉದ್ಯಮ ಸಂವಹನ ಮತ್ತು ನೆಟ್‌ವರ್ಕ್ಸ್ ಹಾಗೂ ಭದ್ರತೆಗಳ ಮೇಲಿನ ಪರಿಣಾಮಗಳನ್ನು ಕುರಿತು ಅವರು ಚರ್ಚಿಸಲಿದ್ದಾರೆ.

ಭಾಗವಹಿಸಲಿರುವ ಪ್ರಮುಖ ವ್ಯಕ್ತಿಗಳು

* ಡಾ. ವಿಶಾಲ್ ಸಿಕ್ಕಾ, ಮುಖ್ಯ ಕಾರ‍್ಯನಿರ್ವಹಣಾಧಿಕಾರಿ, ಇನ್‌ಫೋಸಿಸ್
* ಮಾರ್ಕ್ ಮೆಕ್‌ಡೊನಾಲ್ಡ್, ವ್ಯವಸ್ಥಾಪಕ ನಿರ್ದೇಶಕ, ಆಕ್ಸೆಂಚರ್(ಅಂತಾರಾಷ್ಟ್ರೀಯ)
* ಕುಮುದ್ ಶ್ರೀನಿವಾಸನ್, ಅಧ್ಯಕ್ಷರು, ಇಂಟೆಲ್
* ಅರವಿಂದ್ ಗುಪ್ತಾ, ರಾಷ್ಟ್ರೀಯ ಮುಖ್ಯಸ್ಥರು, ಮಾಹಿತಿ ಮತ್ತು ತಂತ್ರಜ್ಞಾನ, ಬಿಜೆಪಿ.
* ನಾರ್ಬರ್ಟ್ ಶ್ರೋಡರ್, ಪ್ರಧಾನ ವ್ಯವಸ್ಥಾಪಕರು, ಫೋಕ್ಸ್‌ವ್ಯಾಗನ್ ಇಂಡಿಯಾ.
* ಹೆಲ್ಮಟ್ ಶುಟ್, ಸಿಐಒ, ಡೈಮ್ಲರ್‌ಟ್ರಕ್ಸ್, ಬಸ್‌ಗಳು ಮತ್ತು ವ್ಯಾನ್‌ಗಳು.
* ಮನೂಸ್ ಸಾಲೆ, ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ‍್ಯನಿರ್ವಾಹಕ ಅಧಿಕಾರಿ, ಮರ್ಸಿಡಿಸ್-ಬೆಂಜ್(ಆರ್&ಡಿ ಇಂಡಿಯಾ).
* ಡಾ. ಗಣೇಶ್ ನಟರಾಜನ್, ಉಪಚೇರ‍್ಮನ್ ಮತ್ತು ಮುಖ್ಯ ಕಾರ‍್ಯನಿರ್ವಾಹಕ ಅಧಿಕಾರಿ, ಜೆನ್‌ಸಾರ್ ಟೆಕ್ನಾಲಜೀಸ್.
* ರಂಗರಾಜನ್ ವಾಸುದೇವನ್, ಸ್ಥಾಪಕರು ಮತ್ತು ಪ್ರಾಂಶುಪಾಲರು, ದಿ ಡಾಟಾ ಟೀಮ್
* ಡಾ. ದೇವಿಪ್ರಸಾದ್ ಶೆಟ್ಟಿ, ಚೇರ‍್ಮನ್, ನಾರಾಯಣ ಹೆಲ್ತ್.
* ಭರತ್ ದೇವನಾಥನ್, ಮುಖ್ಯ ಕಾರ‍್ಯಾಚರಣೆ ಅಧಿಕಾರಿ, ಗ್ರೂಪ್‌ಆನ್
* ಪ್ರೊಫೆಸರ್ ನಿಲಯ್ ಯಾಗ್ನಿಕ್, ಪ್ರೊಫೆಸರ್ ಮತ್ತು ಚೇರ‍್ಮನ್-ಇನ್‌ಫರ್ಮೇಶನ್ ಸಿಸ್ಟಮ್ಸ್ ಏರಿಯಾ, ನಾರ್ಸಿಮಾಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್(ಎನ್‌ಎಂಐಎಂಎಸ್)
* ಕಾರ್ತಿಕ್ ಶ್ರೀನಿವಾಸನ್, ನ್ಯಾಷನಲ್ ಲೀಡ್, ಸೋಷಿಯಲ್ ಅಟ್ ಓಗಿಲ್ವಿ, ಓಗಿಲ್ವಿ ಅಂಡ್ ಮಾಥೆರ್.
* ಜೆಸ್ಸಿ ಪಾಲ್, ಮುಖ್ಯ ಕಾರ‍್ಯನಿರ್ವಾಹಕ ಅಧಿಕಾರಿ, ಪಾಲ್ ರೈಟರ್ ಕನ್ಸ್‌ಲ್ಟಿಂಗ್.
* ಡಾ. ರವಿ ವಡ್ಲಮನಿ, ಪ್ರೊಫೆಸರ್, ಇನ್‌ಸ್ಟಿಟ್ಯೂಟ್ ಫಾರ್ ಡೆವಲಪ್‌ಮೆಂಟ್ ಅಂಡ್ ರಿಸರ್ಚ್ ಇನ್ ಬ್ಯಾಂಕಿಂಗ್ ಟೆಕ್ನಾಲಜಿ.(ಐಡಿಆರ್‌ಬಿಟಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+