ಮೆಕ್ ಡೊನಾಲ್ಡ್ ಗೆ ಸೆಡ್ಡು ಹೊಡೆಯಲು ರಾಮದೇವ್ ರೆಸ್ಟೋರೆಂಟ್

ಪತಂಜಲಿ ಆಯುರ್ವೇದ ಕಂಪನಿ ಈಗ ಮೆಕ್ ಡೊನಾಲ್ಡ್​, ಕೆಂಟುಕಿ ಚಿಕನ್​ ಕಾರ್ಪೊ, ಸಬ್​ವೇ ರೆಸ್ಟೋರೆಂಟ್​ ಮುಂತಾದ ದೈತ್ಯ ಕಂಪನಿಗಳಿಗೆ ಸಡ್ಡು ಹೊಡೆಯಲು ಸಿದ್ಧವಾಗುತ್ತಿದೆ.

ನವದೆಹಲಿ, ಮೇ 05: ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಕಂಪನಿ ಈಗ ಮೆಕ್ ಡೊನಾಲ್ಡ್​, ಕೆಂಟುಕಿ ಚಿಕನ್​ ಕಾರ್ಪೊ, ಸಬ್​ವೇ ರೆಸ್ಟಾರಂಟ್​ ಮುಂತಾದ ದೈತ್ಯ ಕಂಪನಿಗಳಿಗೆ ಸಡ್ಡು ಹೊಡೆಯಲು ಸಿದ್ಧವಾಗುತ್ತಿದೆ. ಈಗಾಗಲೇ ಯೂನಿಲಿವರ್ ಸೇರಿದಂತೆ ಹಲವು ಕಂಪನಿಗಳಿಗೆ ಪೈಪೋಟಿ ನೀಡಿದೆ.

ಉತ್ತರಾಖಂಡದಲ್ಲಿ ನೆಲೆಯೂರಿರುವ ಪತಂಜಲಿ ಆಯುರ್ವೇದ ಕಂಪನಿಯು ಈ ನಿಟ್ಟಿನಲ್ಲಿ ಸಮಗ್ರ ಯೋಜನೆಯೊಂದನ್ನು ಸಿದ್ಧಪಡಿಸಿಕೊಂಡಿದೆ. ಯೋಗ ಗುರು "ಬಾಬಾ ರೆಸ್ಟೋರೆಂಟ್" ಹೆಸರಿನಲ್ಲಿ ರೆಸ್ಟಾರಂಟ್​ ಮಳಿಗೆಗಳನ್ನು ತೆರೆಯಲು ಸಜ್ಜಾಗಿದೆ.

Baba Ramdev's Patanjali Wants To Take On McDonald's In Food Retail

2016-17ರಲ್ಲಿ ಪತಂಜಲಿ ವಹಿವಾಟು 10,500 ಕೋಟಿ ರೂ. ಆಗಿತ್ತು. ಕಂಪನಿ 300 ಶತಕೋಟಿ ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಮುಂದಿನ ಸಾಲಿನಲ್ಲಿ ಇದು ದ್ವಿಗುಣಗೊಳ್ಳಲಿದೆ.

ಮುಂದಿನ ದಿನಗಳಲ್ಲಿ ಬಟ್ಟೆ ವ್ಯಾಪಾರಕ್ಕೂ ಇಳಿಯಲಿದ್ದೇವೆ. ಹುತಾತ್ಮ ಯೋಧರ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಒಂದು ಶಾಲೆಯನ್ನೂ ತೆರೆಯಲಿದ್ದೇವೆ ಎಂದು ಬಾಬಾ ಹೇಳಿದ್ದಾರೆ.

ನಾನು ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್. ಆದರೆ ಅದಕ್ಕಾಗಿ ನಾನು ಒಂದು ನಯಾ ಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ. ಆದರೆ ನನ್ನ ಬಾಲ್ಯದ ಸ್ನೇಹಿತ ಆಚಾರ್ಯ ಬಾಲಕೃಷ್ಣ ಕಂಪನಿಯ ಪಾಲುದಾರಿಕೆಯಲ್ಲಿ ಶೇ. 97ರಷ್ಟು ಷೇರುಗಳನ್ನು ಹೊಂದಿದ್ದಾರೆ ಎಂದೂ ಬಾಬಾ ವಿವರಣೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+