Adani Ports: ಅದಾನಿ ಪೋರ್ಟ್ಸ್‌ಗೆ ಭರ್ಜರಿ ಲಾಭ, 3,120 ಕೋಟಿ ರೂಪಾಯಿ ಪ್ರಾಫಿಟ್!
ಅದಾನಿ ಪೋರ್ಟ್ಸ್ & ಎಸ್‌ಇಝೆಡ್ ಲಿಮಿಟೆಡ್ ಭರ್ಜರಿ ಲಾಭ ಗಳಿಸುವ ಮೂಲಕ ಮತ್ತೊಂದು ಇತಿಹಾಸ ನಿರ್ಮಿಸಿದೆ. 2ನೇ ತ್ರೈಮಾಸಿಕದಲ್ಲಿ FY26 EBITDA 5,550 ಕೋಟಿ ರೂಪಾಯಿ ಹಾಗೂ ವರ್ಷದಿಂದ ವರ್ಷಕ್ಕೆ YoY ಶೇ. 27 ರಷ್ಟು ಹೆಚ್ಚಳವಾಗಿದೆ. ಇದರ ಜೊತೆಗೆ H1 FY26 EBITDA 11,046 ಕೋಟಿ ರೂಪಾಯಿ ಹೆಚ್ಚಳವಾಗುವ ಮೂಲಕ YoY ಶೇ. 20 ರಷ್ಟು ಏರಿಕೆ ಕಂಡಿದೆ. ಈ ಮೂಲಕ ಅದಾನಿ ಪೋರ್ಟ್ಸ್ & ಎಸ್‌ಇಝೆಡ್ ಲಿಮಿಟೆಡ್ ಲಾಭದಲ್ಲಿ ಹೊಸ ದಾಖಲೆ ಬರೆದಿದೆ.
ಹಾಗೇ ಅದಾನಿ ಪೋರ್ಟ್ಸ್ ದೇಶೀಯ ಬಂದರುಗಳು H1 FY26 ರಲ್ಲಿ 74.2% EBITDA ಮಾರ್ಜಿನ್ ಜೊತೆ ಇತಿಹಾಸದಲ್ಲೇ ಅತ್ಯುತ್ತಮ ಸಾಧನೆ ಮಾಡಿದೆ. ಅಂತಾರಾಷ್ಟ್ರೀಯ ಬಂದರುಗಳ H1 FY26 ಆದಾಯ & EBITDA ಕ್ರಮವಾಗಿ 2,050 ಕೋಟಿ & 466 ಕೋಟಿ ರೂಪಾಯಿಗೆ ತಲುಪಿದೆ. ಈ ಮೂಲಕ ಇದು ಇತಿಹಾಸದಲ್ಲಿಯೇ ಅತ್ಯಧಿಕ ಮಟ್ಟದ್ದಾಗಿದೆ.

ಇದರ ಜೊತೆಯಲ್ಲೇ ಲಾಜಿಸ್ಟಿಕ್ಸ್ H1 FY26 ಆದಾಯವು 2,224 ಕೋಟಿ ರೂಪಾಯಿ ಆಗಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ. 92 ರಷ್ಟು ಏರಿಕೆ ಕಂಡಿದೆ. ಟ್ರಕ್ಕಿಂಗ್ ಮತ್ತು ಅಂತಾರಾಷ್ಟ್ರೀಯ ಫ್ರೈಟ್ ನೆಟ್ವರ್ಕ್ ಸೇವೆಗಳ ವಿಸ್ತರಣೆ ಹಿನ್ನೆಲೆ RoCE ಶೇ. 6 ರಿಂದ (FY25) ಶೇ. 9ಕ್ಕೆ ಏರಿಕೆ ಕಂಡಿದೆ.
ಮರೈನ್ ವಿಭಾಗದಲ್ಲಿ H1 FY26 ಆದಾಯ 1,182 ಕೋಟಿ ರೂಪಾಯಿ ಆಗಿದ್ದು, ಈ ಮೂಲಕ YoY ಶೇ. 213 ರಷ್ಟು ಏರಿಕೆ ಕಂಡಿದ್ದು, ನೌಕೆಗಳ ಸ್ವಾಧೀನ ಪ್ರಕ್ರಿಯೆಯಿಂದ ಇದು ಸಾಧ್ಯವಾಗಿದೆ.
ಫಿಚ್ ರೇಟಿಂಗ್ಸ್ ಈಗ 'ನೆಗಟಿವ್'ನಿಂದ 'ಸ್ಟೇಬಲ್' ಎಂದು ಪರಿಷ್ಕರಿಸಲಾಗಿದ್ದು, ಹೀಗೆ 'ಬಿಬಿಬಿ-' ರೇಟಿಂಗ್ ನೀಡಿದೆ. ಇದು ಕೂಡ ಪ್ರಮುಖವಾದ ಬದಲಾವಣೆ ಆಗಿದೆ.
ಎಸ್ & ಪಿ ಗ್ಲೋಬಲ್ ಸಿಎಸ್‌ಎ ಈಗ ಅದಾನಿ ಪೋರ್ಟ್ಸ್ & ಎಸ್‌ಇಝೆಡ್ ಲಿಮಿಟೆಡ್ ಸಂಸ್ಥೆಯನ್ನು ಜಾಗತಿಕ ಸಾರಿಗೆ ಮತ್ತು ಸಾರಿಗೆ ಮೂಲಸೌಕರ್ಯ ಸಂಸ್ಥೆಗಳ ಟಾಪ್ ಶೇ. 5ರಲ್ಲಿ ಗುರುತಿಸಿದೆ. ಇದು ಕೂಡ ಪ್ರಮುಖವಾದ ಮೈಲಿಗಲ್ಲು ಆಗಿದೆ.
ಸಂಸ್ಥೆಯ ಪೂರ್ಣಾವಧಿ ನಿರ್ದೇಶಕಿ & ಸಿಇಒ ಅಶ್ವನಿ ಗುಪ್ತಾ ಅವರು, 'ನಮ್ಮ ಬಲವಾದ, ವ್ಯಾಪಕ ಲಾಭದಾಯಕ ಬೆಳವಣಿಗೆ ಆವೇಗವು ಇದೀಗ ಅಪ್ರತಿಮ ಸಮಗ್ರ ಸಾರಿಗೆ ಉಪಯುಕ್ತತೆಯ ಮೌಲ್ಯ ಪ್ರತಿಪಾದನೆಯ ಯಶಸ್ಸನ್ನು ಒತ್ತಿ ಹೇಳುತ್ತದೆ' ಎಂದು ಸಂಸ್ಥೆಯ ಸಾಧನೆಯನ್ನು ಬಣ್ಣಿಸಿದ್ದಾರೆ.
ಸೆಪ್ಟೆಂಬರ್ 30, 2025ಕ್ಕೆ ಕೊನೆಗೊಂಡ ತ್ರೈಮಾಸಿಕ & ಅರ್ಧ ವರ್ಷದ ಫಲಿತಾಂಶ ಪ್ರಕಟಿಸಿರುವ ಅದಾನಿ ಪೋರ್ಟ್ಸ್ & ಎಸ್‌ಇಝೆಡ್ ಲಿಮಿಟೆಡ್, ಲಾಭಾಂಶದಲ್ಲಿ ಮಹತ್ವದ ಸಾಧನೆ ಮಾಡಿದೆ.
'ನಮ್ಮ ಬಲವಾದ, ವ್ಯಾಪಕ ಲಾಭದಾಯಕ ಬೆಳವಣಿಗೆ ಆವೇಗವು ನಮ್ಮ ಅಸಮಾನವಾದ ಸಮಗ್ರ ಸಾರಿಗೆ ಉಪಯುಕ್ತತೆಯ ಮೌಲ್ಯ ಪ್ರತಿಪಾದನೆ ಯಶಸ್ಸನ್ನು ನಿಜವಾಗೂ ಒತ್ತಿಹೇಳುತ್ತದೆ. ಲಾಜಿಸ್ಟಿಕ್ಸ್ & ಸಾಗರ ವ್ಯವಹಾರಗಳು ತಮ್ಮ ಅದ್ವಿತೀಯ ಬೆಳವಣಿಗೆ ಪಥ ಮುಂದುವರೆಸಿವೆ, ನಮ್ಮ ಬಂದರು-ದ್ವಾರದಿಂದ ಗ್ರಾಹಕ- ದ್ವಾರದ ಕೊಡುಗೆಯನ್ನ ಮತ್ತಷ್ಟು ಬಲಪಡಿಸುತ್ತವೆ. ನಮ್ಮ ಕಾರ್ಯಕ್ಷಮತೆ ವಿವಿಧ ಕಾರ್ಯಾಚರಣೆ ದಕ್ಷತೆ ಬಂಡವಾಳ ಆಪ್ಟಿಮೈಸೇಶನ್ ಉಪಕ್ರಮದ ಯಶಸ್ಸಿಗೆ ಸಾಕ್ಷಿ ಆಗಿದೆ. ಇದು ಪ್ರಬಲವಾದ H1 ದೇಶೀಯ ಬಂದರುಗಳು EBITDA ಅಂಚು & ಲಾಜಿಸ್ಟಿಕ್ಸ್ RoCEನ ಗಮನಾರ್ಹ ಸುಧಾರಣೆಗೆ ಕಾರಣವಾಗುತ್ತದೆ.'












Click it and Unblock the Notifications