ಭಾರತದಲ್ಲಿನ ತನ್ನ ವ್ಯವಹಾರವನ್ನು ದ್ವಿಗುಣಗೊಳಿಸಿದ ಆ್ಯಪಲ್: ಟಿಮ್ ಕುಕ್

ನವದೆಹಲಿ, ಜನವರಿ 28: ಅಮೆರಿಕದ ಟೆಕ್ ದೈತ್ಯ ಆ್ಯಪಲ್ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ದ್ವಿಗುಣಗೊಳಿಸಿರುವುದಾಗಿ ಪ್ರಕಟಿಸಿದೆ. 2020ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ಭಾರತದಲ್ಲಿನ ತನ್ನ ವ್ಯವಹಾರವನ್ನು ದ್ವಿಗುಣಗೊಳಿಸಿರುವುದಾಗಿ ಆ್ಯಪಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಟಿಮ್ ಕುಕ್ ಹೇಳಿದ್ದಾರೆ.

''ಸೆಪ್ಟೆಂಬರ್ ತ್ರೈಮಾಸಿಕದ ನಂತರ ಆ್ಯಪಲ್‌ಗೆ ಹೆಚ್ಚು ಮುಖ್ಯವಾದ ಮತ್ತು ಕೇಂದ್ರೀಕೃತ ಮಾರುಕಟ್ಟೆಯಾದ ಭಾರತವು ಸಕಾರಾತ್ಮಕ ಬೆಳವಣಿಗೆಯನ್ನು ತೋರಿಸಲಾರಂಭಿಸಿದೆ. ಭಾರತದಲ್ಲಿ ಅಕ್ಟೋಬರ್ - ಡಿಸೆಂಬರ್ 2020 ತ್ರೈಮಾಸಿಕದಲ್ಲಿ ತನ್ನ ವ್ಯವಹಾರವನ್ನು ದ್ವಿಗುಣಗೊಳಿಸಿದೆ. " ಎಂದು ಟಿಮ್ ಕುಕ್ ಹೇಳಿದ್ದಾರೆ.

''ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ನಾವು ಕಳೆದ ತ್ರೈಮಾಸಿಕದಲ್ಲಿ ನಮ್ಮ ವ್ಯವಹಾರವನ್ನು ದ್ವಿಗುಣಗೊಳಿಸಿದ್ದೇವೆ, ಆದರೆ ನಮ್ಮ ಸಂಪೂರ್ಣ ಮಟ್ಟದ ವ್ಯವಹಾರ ಅವಕಾಶದ ಗಾತ್ರಕ್ಕೆ ಹೋಲಿಸಿದರೆ ಇನ್ನೂ ಕಡಿಮೆ ಇದೆ "ಎಂದು ಆ್ಯಪಲ್ ಸಿಇಒ ಟಿಮ್ ಕುಕ್ ಹೇಳಿದ್ದಾರೆ

 Apple Doubles Business In India: Tim Cook

ಕಳೆದ ಕೆಲವು ವರ್ಷಗಳಿಂದ, ಆ್ಯಪಲ್ ಭಾರತದಲ್ಲಿ ತುಂಬಾ ವೇಗದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ ಮತ್ತು ಅದರ ಹೆಚ್ಚಿನ ಜಾಗತಿಕ ಹೊಸ ವಸ್ತುಗಳ ಬಿಡುಗಡೆಯನ್ನು ಒಂದೇ ದಿನದಲ್ಲಿ ಅಥವಾ ಒಂದು ವಾರದೊಳಗೆ ತರುತ್ತಿದೆ. ಭಾರತದಲ್ಲಿ ಆ್ಯಪಲ್ ಐಫೋನ್‌ ಮಾರಾಟವು ದೊಡ್ಡ ಮಟ್ಟದಲ್ಲಿದೆ.

ಕಳೆದ ವರ್ಷ ಆ್ಯಪಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಟಿಮ್ ಕುಕ್ ಜಾಗತಿಕ ಬಿಲಿಯನೇರ್ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ. ಟೆಕ್ ಸಂಸ್ಥೆಯ ಷೇರುಗಳು ಗಗನಕ್ಕೇರಿದ ಬಳಿಕ ಟಿಮ್ ಕುಕ್ ನಿವ್ವಳ ಆಸ್ತಿ ಮೌಲ್ಯ ಹೆಚ್ಚಾಗಿ ಜಗತ್ತಿನ ಬಿಲಿಯನೇರ್ ಪಟ್ಟಿಗೆ ಸೇರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+