10 ರೂ. ಮುಖಬೆಲೆಯ 14 ರೀತಿಯ ನಾಣ್ಯಗಳಿಗಿದೆ ಮಾನ್ಯತೆ: ಆರ್.ಬಿ.ಐ

ಮುಂಬೈ, ಜನವರಿ 17: 10 ರೂಪಾಯಿ ಮುಖಬೆಲೆಯ ಎಲ್ಲಾ 14 ಬಗೆಯ ನಾಣ್ಯಗಳು ಮಾನ್ಯತೆ ಹೊಂದಿವೆ ಮತ್ತು ಕಾನೂನು ಬದ್ಧವಾಗಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಹಲವು ಅಂಗಡಿಗಳ ಮಾಲಿಕರು 10 ರೂಪಾಯಿ ನಾಣ್ಯವನ್ನು ಸ್ವೀಕರಿಸುತ್ತಿಲ್ಲ ಎಂಬ ದೂರಿನ ಹಿನ್ನಲೆಯಲ್ಲಿ ಆರ್.ಬಿ.ಐ ಈ ಸ್ಪಷ್ಟನೆ ನೀಡಿದೆ.

ಬೇರೆ ಬೇರೆ ವಿನ್ಯಾಸದ ನಾಣ್ಯಗಳ ಮಾನ್ಯತೆಯ ಬಗ್ಗೆ ಸ್ಪಷ್ಟನೆ ನೀಡಿರುವ ಆರ್.ಬಿ.ಐ "ಕೆಲವು ವ್ಯಾಪಾರಸ್ಥರು ಮತ್ತು ಜನರು ರೂ. 10ರ ನಾಣ್ಯಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಬಗ್ಗೆ ಮಾಹಿತಿಗಳು ರಿಸರ್ವ್ ಬ್ಯಾಂಕ್ ಗಮನಕ್ಕೆ ಬಂದಿದೆ," ಎಂದು ಹೇಳಿದೆ.

All 14 types of Rs 10 coin valid, legal tender: RBI

ಭಾರತದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ಕಾರಣಕ್ಕೆ ಭಿನ್ನ ವಿನ್ಯಾಸದ ನಾಣ್ಯಗಳನ್ನು ಟಂಕಿಸಲಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ.

ಈ ಎಲ್ಲಾ ನಾಣ್ಯಗಳನ್ನು ಸರಕಾರಣವೇ ಟಂಕಿಸಿದೆ ಎಂದು ಹೇಳಿರುವ ಬ್ಯಾಂಕ್, "ಇಲ್ಲಿಯವರೆಗೆ ರಿಸರ್ವ್ ಬ್ಯಾಂಕ್ ಒಟ್ಟಾರೆ ರೂ. 10ರ ಮೌಲ್ಯದ 14 ವಿನ್ಯಾಸದ ನಾಣ್ಯಗಳನ್ನು ಚಲಾವಣೆಗೆ ತಂದಿದೆ... ಇವೆಲ್ಲವೂ ಮಾನ್ಯತೆ ಹೊಂದಿವೆ ಮತ್ತು ವರ್ಗಾವಣೆಗೆ ಬಳಸಬಹುದು," ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ ಬ್ಯಾಂಕ್ ಗಳು ನಾಣ್ಯವನ್ನು ವರ್ಗಾವಣೆಗೆ ಪಡೆದುಕೊಳ್ಳಬೇಕು ಮತ್ತು ವಿನಿಮಯ ಮಾಡಿಕೊಡಬೇಕು ಎಂದು ಆರ್.ಬಿ.ಐ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+