ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಇ ಕಾಮರ್ಸ್ ದೈತ್ಯ ಆಲಿಬಾಬಾ ಭಾರತಕ್ಕೆ

|
Google Oneindia Kannada News

ನವದೆಹಲಿ, ನ. 27 : ಚೀನಾದ ಎರಡನೇ ಅತಿ ದೊಡ್ಡ ಶ್ರೀಮಂತ, ಆಲಿಬಾಬಾ ಇ ಕಾಮರ್ಸ್ ಸಂಸ್ಥೆಯ ಮಾಲೀಕ ಜಾಕ್ ಮಾ ಭಾರತದ ಮಾರುಕಟ್ಟೆ ಪ್ರವೇಶಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಭಾರತದ ಇ ಕಾಮರ್ಸ್ ವಿಭಾಗದಲ್ಲಿ ಗಟ್ಟಿಯಾಗಿ ನೆಲೆ ನಿಂತರುವ ಫ್ಲಿಫ್ ಕಾರ್ಟ್, ಅಮೆಜಾನ್ ಮತ್ತು ಸ್ನ್ಯಾಪ್ ಡೀಲ್ ಗೆ ತಕ್ಕ ಪೈಪೋಟಿ ನೀಡಲು 'ಆಲಿಬಾಬಾ' ಆಗಮಿಸಲಿದೆ.

ಭಾರತದ ಕಂಪನಿಯೊಂದಿಗೆ ಆಲಿಬಾಬಾ ಜಂಟಿಯಾಗಿ ವ್ಯವಹಾರ ಆರಂಭಿಸಲಿದೆ. ಅಲ್ಲದೇ ಈಗಾಗಲೇ ಘೋಷಣೆ ಮಾಡಿರುವಂತೆ ಜಪಾನ್ ನ ಸಾಫ್ಟ್ ಬ್ಯಾಂಕ್ ಹಣ ಹೂಡಿಕೆ ಮಾಡಲು ಸಿದ್ಧವಾಗಿದೆ.[ಇ ಕಾಮರ್ಸ್ ಕ್ಷೇತ್ರಕ್ಕೆ ಕಾಲಿಡಲಿರುವ ಅಂಚೆ ಇಲಾಖೆ]

jack ma

ಈ ಬಗ್ಗೆ ದೆಹಲಿಯಲ್ಲಿ ನಡೆದ ಎಫ್ ಐಸಿಸಿಐನ ಸಮಾವೇಶವೊಂದರಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಜಾಕ್ ಮಾ, ಭಾರತದಲ್ಲಿ ಬದಲಾವಣೆ ನಿರಂತರವಾಗಿದೆ. ಅಂತರ್ಜಾಲ ತಾಣಗಳ ಮೂಲಕ ಬಹುತೇಕ ವಾಣಿಜ್ಯ ವ್ಯವಹಾರಗಳು ನಡೆಯುತ್ತಿವೆ. ಯುವಕರು ಉದ್ಯಮಗಳಲ್ಲಿ ತೊಡಗುವ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇವೆಲ್ಲವೂ ನಮಗೆ ಹೂಡಿಕೆ ಮಾಡಲು ಪ್ರೇರೇಪಣೆ ನೀಡಿದೆ ಎಂದು ಹೇಳಿದ್ದಾರೆ.[ಭಾರತದ ಇ ಕಾಮರ್ಸ್ ಕ್ಷೇತ್ರಕ್ಕೆ ಬೃಹತ್ ಬಂಡವಾಳ]

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ವೇಳೆ ಹೂಡಿಕೆ ಸಂಬಂಧ ಮಾತುಕತೆ ನಡೆದಿತ್ತು. ಭಾರತದಲ್ಲಿ ಉದ್ಯಮಗಳ ಪರವಾದ ವಾತಾವರಣ ನಿರ್ಮಾಣವಾಗಿದ್ದು ನಿರಾತಂಕವಾಗಿ ವ್ಯವಹಾರ ಆರಂಭಿಸಬಹುದು. ಪ್ರಧಾನಿ ಮೋದಿ ಭಾಷಣದಿಂದ ಪ್ರೇರಣೆ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

English summary
Jack Ma, China's richest man and founder of e-giant Alibaba, has set his eyes on India. He has deployed a high-level team to increase engagement with India, promises to invest more here and is likely to hire Indian talent. "We've a team here, and we are getting in more people" told Jack Ma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X