ಕಡಿಮೆ ದರದಲ್ಲಿ ಹೆಚ್ಚು ಡೇಟಾ, ಏರ್ಟೆಲ್ ನಿಂದ ಜಿಯೋಗೆ ಗೂಟ

Recommended Video

      ಏರ್ ಟೆಲ್ ನಿಂದ ಹೊಸ ಆಫರ್ ಘೋಷಣೆ | Oneindia Kannada

      ಬೆಂಗಳೂರು, ಅಕ್ಟೋಬರ್ 16: ಜಿಯೋ ಹಾಗೂ ವೊಡಾಫೋನ್ ಗೆ ಪೈಪೋಟಿ ನೀಡಲು ಭಾರ್ತಿ ಏರ್ ಟೆಲ್ ಹೊಸ ಪ್ರೀಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಇತ್ತೀಚೆಗೆ 289 ರು ಯೋಜನೆ ಪ್ರಕಟಿಸಿದ್ದ ಏರ್ ಟೆಲ್ ಈಗ ಸುಧಾರಿತ ಮತ್ತೊಂದು ಯೋಜನೆಯನ್ನು ಪ್ರಕಟಿಸಿದ್ದು, ಜಿಯೋ ಜತೆಗೆ ನೇರ ಪೈಪೋಟಿಗಿಳಿದಿದೆ.

      ಮೈಸೂರು ದಸರಾ - ವಿಶೇಷ ಪುರವಣಿ

      ಏರ್ ಟೆಲ್ ಬಿಡುಗಡೆಗೊಳಿಸಿರುವ 398 ರೂ. ಪ್ರೀಪೇಯ್ಡ್ ಆಫರ್, ಜಿಯೋಗಿಂತ ಕಡಿಮೆ ದರಕ್ಕೆ ಹೆಚ್ಚು ಇಂಟರ್‌ನೆಟ್‌ ಸೇವೆ ಒದಗಿಸುತ್ತದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡರೆ ಪ್ರತಿನಿತ್ಯ 1.5 ಜಿಬಿ ಇಂಟರ್ ನೆಟ್ ನೊಂದಿಗೆ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಹಾಗೂ ಮೆಸೇಜ್ ಸಿಗಲಿದೆ.

      ಕಳೆದ ತಿಂಗಳು ಹೆಚ್ಚು ಕರೆ ಸೌಲಭ್ಯ ಪಡೆಯಲು ಬಯಸುವ ಗ್ರಾಹಕರಿಗಾಗಿ, 289 ರು ಗಳ ಪ್ರೀಪೇಯ್ಡ್ ಯೋಜನೆಯನ್ನು ಪ್ರಕಟಿಸಲಾಗಿತ್ತು. ಈ 289 ರೂಪಾಯಿಗಳ ರೀಚಾರ್ಚ್ ನೊಂದಿಗೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.ಈ ಪ್ಲಾನ್ ನಲ್ಲಿ ಏರ್ಟೆಲ್ ಗ್ರಾಹಕರಿಗೆ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆ ಸೌಲಭ್ಯ ಸಿಗಲಿದೆ. ಜತೆಗೆ ವಾಯ್ಸ್ ಕಾಲಿಂಗ್ ಗೆ ಯಾವುದೇ FUP ಮಿತಿ ಇರುವುದಿಲ್ಲ.ಕಾಲಿಂಗ್ ಜೊತೆ ಒಂದು ಜಿಬಿ ಡೇಟಾ ಸಿಗುತ್ತದೆ. ಪ್ರತಿ ದಿನ 100 ಎಸ್ಎಂಎಸ್ ಉಚಿತ. ಈ ಯೋಜನೆ 48 ದಿನಗಳ ವ್ಯಾಲಿಡಿಟಿ ಹೊಂದಿದೆ.

      398ರುಗಳ ಪ್ರೀಪೇಯ್ಡ್ ರೀಚಾರ್ಜ್

      398ರುಗಳ ಪ್ರೀಪೇಯ್ಡ್ ರೀಚಾರ್ಜ್

      ಪ್ರತಿ ನಿತ್ಯ 1.5 ಜಿಬಿ 4ಜಿ ಡೇಟಾನಂತೆ 70 ದಿನದ ಈ ಪ್ಯಾಕ್ ನಲ್ಲಿ ಗ್ರಾಹಕರಿಗೆ ಒಟ್ಟು 105 ಜಿಬಿ ಇಂಟರ್ ನೆಟ್ ಸಿಗಲಿದೆ. ಜಿಯೋ ನೀಡುವ 398, 349 ಆಫರ್ ಗಳನ್ನು ಸೆಡ್ಡು ಹೊಡೆಯಲು ಈ ಯೋಜನೆಯನ್ನು ಏರ್ ಟೆಲ್ ಪರಿಚಯಿಸಿದೆ. ಡೇಟಾ ಜತೆಗೆ ಅನಿಯಮಿತ ವಾಯ್ಸ್ ಕಾಲ್ (ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್), FUP ಮಿತಿ ಇಲ್ಲದೆ ಹಾಗೂ ದಿನಕ್ಕೆ 90 ಎಸ್ಎಂಎಸ್ ಸಿಗಲಿದೆ. ಎಲ್ಲಾ 22 ಟೆಲಿಕಾಂ ಸರ್ಕಲ್ ಗಳಲ್ಲಿ ಲಭ್ಯವಿದೆ.

      ವೊಡಾ ಫೋನ್ ಕರೆ ಮಾಡಲು ಬಳಕೆ ಹೆಚ್ಚು

      ವೊಡಾ ಫೋನ್ ಕರೆ ಮಾಡಲು ಬಳಕೆ ಹೆಚ್ಚು

      ವೊಡಾ ಫೋನ್ ತನ್ನ ಗ್ರಾಹಕರಿಗೆ ದಿನಕ್ಕೆ 250 ನಿಮಿಷ ಉಚಿತ ಕರೆ ಸೌಲಭ್ಯವನ್ನು ನೀಡುತ್ತಿದೆ.1000 ನಿಮಿಷ ಪ್ರತಿ ವಾರ ಅನಿಯಮಿತ ವಾಯ್ಸ್ ಕರೆ ಸೌಲಭ್ಯ ನೀಡುತ್ತಿದೆ. ಆದರೆ, ಆದರೆ, ಏರ್ ಟೆಲ್ ಈ ಎಲ್ಲ ನಿಯಮಗಳಣ್ನು ಮೀರಿ ಗ್ರಾಹಕರನ್ನು ಸೆಳೆಯಲು ಸಂಪೂರ್ಣ ಅನ್ ಲಿಮಿಟೆಡ್ ಆಫರ್ ನೀಡುತ್ತಿದೆ.

      ಜಿಯೋ 398 ಯೋಜನೆ

      ಜಿಯೋ 398 ಯೋಜನೆ

      ರಿಲಯನ್ಸ್ ಜಿಯೋ 398 ರು ರೀಚಾರ್ಜ್ ಪ್ರೀಪೇಯ್ಡ್ ನಲ್ಲಿ ಪ್ರತಿದಿನ2 ಜಿಬಿ 4ಜಿ ಡೇಟಾ ಸಿಗಲಿದೆ. ಡೇಟಾ ಜತೆಗೆ ಅನಿಯಮಿತ ವಾಯ್ಸ್ ಕಾಲ್ (ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್), FUP ಮಿತಿ ಇಲ್ಲದೆ ಹಾಗೂ ದಿನಕ್ಕೆ 100 ಎಸ್ಎಂಎಸ್ ಸಿಗಲಿದೆ. ವ್ಯಾಲಿಡಿಟಿ 70 ದಿನಗಳು. ಇದೇ ರೀತಿ 349 ರು ಪ್ರೀಪೇಯ್ಡ್ ಯೋಜನೆ ಹಾಗೂ ಏರ್ ಟೆಲ್ ನ 398 ರು ಯೋಜನೆ ಎರಡರಲ್ಲಿ ಅಂಥಾ ವ್ಯತ್ಯಾಸವಿಲ್ಲ. ಎರಡರ ವ್ಯಾಲಿಡಿಟಿ ಕೂಡಾ 70 ದಿನಗಳಾಗಿವೆ.

      ಏರ್ ಟೆಲ್ ನ ಇನ್ನಿತರ ದೀರ್ಘಾವಧಿ ಯೋಜನೆಗಳು

      ಏರ್ ಟೆಲ್ ನ ಇನ್ನಿತರ ದೀರ್ಘಾವಧಿ ಯೋಜನೆಗಳು

      ಮೂರು ತಿಂಗಳ ಅವಧಿಯ ಯೋಜನೆ ಬೇಕಾದರೆ 495 ರು ಹಾಗೂ 559 ರು ಯೋಜನೆ ತೆಗೆದುಕೊಳ್ಳಬಹುದು. 495 ರುಪಾಯಿ ಯೋಜನೆ 84 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆ, 100 ಎಸ್ಎಂಎಸ್ ಪ್ರತಿದಿನ, 1.4 ಜಿಬಿ ಪ್ರತಿದಿನ ಸಿಗಲಿದೆ. 559 ಯೋಜನೆ 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಇನ್ನು ಏರ್ಟೆಲ್ 1, 199 ರೂಪಾಯಿ ಪ್ಲಾನ್ ನಲ್ಲಿಯೂ ಬದಲಾವಣೆ ಮಾಡಿದೆ. 90 ಜಿಬಿ ಡೇಟಾ ಬದಲಿಗೆ 120 ಜಿಬಿ ಡೇಟಾ ಸಿಗಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+