ಅದಾನಿಗೆ ಹಣಕಾಸಿನ ಕೊರತೆ, ಆಸ್ಟ್ರೇಲಿಯಾದ ಗಣಿಗಾರಿಕೆ ಒಪ್ಪಂದ ರದ್ದು
ಆಸ್ಟ್ರೇಲಿಯಾದಲ್ಲಿ ಆರಂಭಿಸಬೇಕಿದ್ದ ವಿವಾದಾತ್ಮಕ ಗಣಿಗಾರಿಕೆ ಯೋಜನೆಯನ್ನು ಅದಾನಿ ಗ್ರೂಪ್ ರದ್ದುಗೊಳಿಸಿದೆ. 2 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ (1.5 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯ) ಒಪ್ಪಂದವನ್ನು ರದ್ದುಗೊಳಿಸಿದೆ. ಈ ಯೋಜನೆಗೆ ಹಣ ಹೊಂದಿಸಲಾಗದೆ ಕಾರ್ ಮೈಕೇಲ್ ಗಣಿಗಾರಿಕೆ ಪ್ರಸ್ತಾವಿತ ಯೋಜನೆ ರದ್ದುಗೊಂಡಿದೆ.
ಆಸ್ಟ್ರೇಲಿಯಾ ಕಂಪೆನಿ ಡೌನರ್ ಜತೆಗಿನ ಒಪ್ಪಂದ ಸೋಮವಾರ ರದ್ದಾಗಿದೆ. ಈ ಯೋಜನೆಗೆ ಆಸ್ಟ್ರೇಲಿಯಾದ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿತ್ತು. "ಅದಾನಿ ಮತ್ತು ಡೌನರ್ ಪರಸ್ಪರ ಒಪ್ಪಿಗೆಯೊಂದಿಗೆ ಯೋಜನೆ ರದ್ದುಗೊಳಿಸಲಾಗಿದೆ. 2018ರ ಮಾರ್ಚ್ ವರೆಗೆ ಡೌನರ್ ಕಂಪೆನಿ ಬದಲಾವಣೆಯ ಪರ್ವದ ನೆರವು ನೀಡಲಿದೆ" ಎಂದು ಅದಾನಿ ಕಂಪೆನಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈಗಲೂ 16.5 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಕಾರ್ ಮೈಕೇಲ್ ಯೋಜನೆಗೆ ಅದಾನಿ ಬದ್ಧವಾಗಿದೆ. ಆದರೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಮಾಲೀಕರೇ ಗಣಿಗಾರಿಕೆ ನಡೆಸುವ ಹಾಗೂ ಅಭಿವೃದ್ಧಿ ಪಡಿಸುವ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಲಾಗಿದೆ.

ಈ ಯೋಜನೆಗೆ ಪರಿಸರಪ್ರೇಮಿಗಳಿಂದ ವಿರೋಧ ಬಂದು, ಜಾಗತಿಕ ಮಟ್ಟದ ಚಳವಳಿಯಾಗಿ ರೂಪುಗೊಂಡಿದ್ದರಿಂದ ಯೋಜನೆ ಅನುಷ್ಠಾನ ತಡವಾಗುತ್ತಾ ಸಾಗಿತು. ಸಾಲುಸಾಲು ಕಾನೂನು ತೊಡಕು ಎದುರಾಯಿತು. ಅದಾನಿ ಕಂಪೆನಿ ಮಾಲೀಕರಾದ ಗೌತಮ್ ಅದಾನಿ ಗಣಿಗಾರಿಕೆ ಸ್ಥಳದಿಂದ ಕಲ್ಲಿದ್ದಲು ಸಾಗಿಸುವ ಕಾರಣಕ್ಕೆ ರೈಲು ಹಳಿ ನಿರ್ಮಾಣದ ಆಲೋಚನೆ ಮಾಡಿದ್ದರು.
ಅಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿರುವ ಗ್ರೇಟ್ ಬ್ಯಾರಿಯರ್ ರೀಫ್ ಮರೀನ್ ಪಾರ್ಕ್ ಗೆ ಕಲ್ಲಿದ್ದಲು ಸಾಗಿಸಲು ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿತ್ತು. ಅಲ್ಲಿಂದ ಭಾರತಕ್ಕೆ ರವಾನಿಸಿ, ವಿದ್ಯುತ್ ಉತ್ಪಾದನೆಗೆ ಬಳಸುವ ಇರಾದೆ ಹೊಂದಿತ್ತು.
ಕಳೆದ ಜೂನ್ ನಲ್ಲಿಯೇ ಅದಾನಿ ಬೋರ್ಡ್ ನಿಂದ ಗಣಿಗಾರಿಕೆಗೆ ಅಂತಿಮ ಒಪ್ಪಿಗೆ ಸಿಕ್ಕಿತ್ತು. ಆದರೆ ಜಾಗತಿಕ ಮಟ್ಟದಲ್ಲಿ ಕುಸಿದ ಕಲ್ಲಿದ್ದಲು ಮಾರುಕಟ್ಟೆ, ಅಂತರರಾಷ್ಟ್ರೀಯ ಮಟ್ಟದ ಪರಿಸರ ತಜ್ಞರ ಪ್ರತಿಭಟನೆ, ಹೆಚ್ಚುತ್ತಿದ್ದ ಯೋಜನಾ ವೆಚ್ಚ ಸವಾಲಾಗಿ ಪರಿಣಮಿಸಿತ್ತು.
ಕಾರ್ ಮೈಕೇಲ್ ಗಣಿಗಾರಿಕೆಗಾಗಿ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಲು ಕಳೆದ ವರ್ಷ ಅದಾನಿ ಕಂಪೆನಿ ಚೀನಾ ಕಡೆಗೆ ಮುಖ ಮಾಡಿತ್ತು. ಅದಾನಿ ಹಾಗೂ ಡೌನರ್ ಕಂಪೆನಿ ಅಧಿಕಾರಿಗಳು ಚೀನಾ ಮಷಿನರಿ ಎಂಜಿನಿಯರಿಂದ ಕಾರ್ಪೋರೇಷನ್ ಜತೆಗೆ ಮಾತುಕತೆ ಕೂಡ ನಡೆಸಿದ್ದರು. ಆದರೆ ಒಪ್ಪಂದದ ಹಂತಕ್ಕೆ ಅದು ಮುಂದುವರಿಯಲೇ ಇಲ್ಲ.
"ಎರಡು (ಚೀನೀ) ಸರಕಾರ ಹಾಗೂ ಫೈನಾನ್ಷಿಯನಲ್ ಸಂಸ್ಥೆಗಳ ಜತೆಗೆ ಮಾತನಾಡುತ್ತಿದ್ದೇನೆ. ಈ ಯೋಜನೆಗೆ ಯಾವುದೇ ಆರ್ಥಿಕ ಬೆಂಬಲ ಸಿಗುವುದಿಲ್ಲ ಎಂಬ ವಿಶ್ವಾಸ ಇದೆ" ಎಂದು ಆಸ್ಟ್ರೇಲಿಯಾದ ಸರಕಾರಿ ಮಾಧ್ಯಮವೊಂದಕ್ಕೆ ಕಾರ್ ಎಂಬುವವರು ತಿಳಿಸಿದ್ದಾರೆ.












Click it and Unblock the Notifications