ಬೀದರ್ : ವಾಕಿಂಗ್ ಹೋಗಿದ್ದ ಮಹಿಳೆಯರಿಬ್ಬರ ಭೀಕರ ಹತ್ಯೆ

ಬೀದರ್, ಡಿಸೆಂಬರ್ 02 : ಬೀದರ್‌ನಲ್ಲಿ ಬೆಳಗ್ಗೆ ವಾಯು ವಿಹಾರಕ್ಕೆ ಹೋಗಿದ್ದ ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕೊಲೆ ಮಾಡಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಶಂಕಿಸಲಾಗಿದೆ.

ಹತ್ಯೆಯಾದ ಮಹಿಳೆಯರನ್ನು ಲಲಿತಮ್ಮ (45) ಮತ್ತು ದುರ್ಗಮ್ಮ (60) ಎಂದು ಗುರುತಿಸಲಾಗಿದೆ. ಬೀದರ್‌ನ ಶಾಹಗಂಜ್ ಪ್ರದೇಶದಲ್ಲಿ ಹನುಮಾನ್ ಮಂದಿರದ ಬಳಿ ಭಾನುವಾರ ಮುಂಜಾನೆ ಈ ಹತ್ಯೆ ಮಾಡಲಾಗಿದೆ.

ಮಹಿಳೆಯರು ಬೆಳಗ್ಗೆ ವಾಯು ವಿವಾಹರಕ್ಕೆ ಹೋಗಿದ್ದಾಗ ದೊಣ್ಣೆಯಿಂದ ಹೊಡೆದು ವ್ಯಕ್ತಿ ಇಬ್ಬರನ್ನು ಹತ್ಯೆ ಮಾಡಿದ್ದಾನೆ. ಹತ್ಯೆ ಮಾಡಿರುವ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದ್ದು, ಮಾರ್ಕೆಟ್ ಠಾಣೆ ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.

Man held for murder two women in Bidar

ಹಳೆಯ ದ್ವೇಷದಿಂದಲೋ ಅಥವ ಚಿನ್ನಾಭರಣಕ್ಕಾಗಿ ಹತ್ಯೆ ಮಾಡಲಾಗಿದೆಯೋ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

'ಹತ್ಯೆ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ತನಿಖೆಯ ಬಳಿಕ ಹತ್ಯೆಗೆ ಕಾರಣ ಏನೆಂದು ತಿಳಿಯಲಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+