ಬಸವಕಲ್ಯಾಣ ಉಪ ಚುನಾವಣೆ; ಮತದಾರರ ಪಟ್ಟಿಗೆ ಹೆಸರು ಸೇರಿಸಿ

ಬೀದರ್, ಮಾರ್ಚ್ 18; ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾಗಿದೆ. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸುವವರು ಮಾರ್ಚ್ 30ರ ತನಕ ಸೇರಿಸಲು ಅವಕಾಶವಿದೆ.

ಜಿಲ್ಲಾಧಿಕಾರಿ, ಚುನಾವಣಾಧಿಕಾರಿಗಳಾದ ರಾಮಚಂದ್ರನ್. ಆರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮಾರ್ಚ 16 ರಿಂದ ಮೇ 4ರ ತನಕ ಮಾದರಿ ಚುನಾವಣಾ ನೀತಿ ಸಂಹಿತೆಯು ಜಿಲ್ಲಾದ್ಯಂತ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.

ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ 30 ಕೊನೆ ದಿನ. ನಾಮಪತ್ರಗಳ ಪರಿಶೀಲನೆಯು ಮಾರ್ಚ್ 31ರಂದು ನಡೆಯಲಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಏಪ್ರಿಲ್ 3ಕೊನೆ ದಿನ. ಏಪ್ರಿಲ್ 17ರಂದು ಮತದಾನ ನಡೆಯಲಿದ್ದು, ಮೇ 2ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

Basavakalyana By Poll Add Name For Voter List Till March 30

ಬಸವಕಲ್ಯಾಣ ಕ್ಷೇತ್ರದಲ್ಲಿ 1,24,530 ಪುರುಷ ಮತ್ತು 1,14,325 ಮಹಿಳೆಯರು ಸೇರಿ ಒಟ್ಟು 2,38,855 ಮತದಾರರಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ನಿರಂತರ ನೋಂದಣಿ ಪ್ರಕ್ರಿಯೆ ನಡೆಯಲಿದೆ.

ಹೊಸದಾಗಿ ಹೆಸರು ನೋಂದಾಯಿಸಬೇಕಾದ ಮತದಾರರ ನೋಂದಣಿಗಾಗಿ ಅರ್ಜಿಯನ್ನು ಸ್ವೀಕರಿಸುವ ಪ್ರಕ್ರಿಯೆ ನಿರಂತರವಾಗಿ ಇರಲಿದೆ. ಅರ್ಹ ಮತದಾರರು ನಾಮ ಪತ್ರ ಸ್ವೀಕರಿಸುವ ಕೊನೆಯ ದಿನಾಂಕ 30/3/2021ರ ತನಕ ಆನ್‌ಲೈನ್ ಮೂಲಕ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿ ಹೆಸರು ಸೇರಿಸಬಹುದು.

ಮತಗಟ್ಟೆ ವಿವರ; ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪ-ಚುನಾವಣೆಗಾಗಿ 345 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಉಪ ಚುನಾವಣೆಗಾಗಿ ಮತದಾರರ ಮಾಹಿತಿ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ದೂರವಾಣಿ ಸಂಖ್ಯೆ 9480347656.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+