ಜುಲೈ 18ರಿಂದ ಪ್ಲಾಟ್‌ಫಾರ್ಮ್ 1ರ ಮೂಲಕ ಯಶವಂತಪುರ ರೈಲು ನಿಲ್ದಾಣದ ಪ್ರವೇಶ ಮುಚ್ಚಲಿದೆ
ಯಶವಂತಪುರ ರೈಲ್ವೆ ನಿಲ್ದಾಣದ ಮೂಲಕ ಪ್ರಯಾಣಿಕರ ಗಮನಕ್ಕೆ, ಜುಲೈ 18ರಿಂದ ಫ್ಲಾಟ್ ಫಾರ್ಮ್ 1ರ (ಯಶವಂತಪುರ ಮಾರುಕಟ್ಟೆ ಕಡೆಯಿಂದ) ಮೂಲಕ ರೈಲು ನಿಲ್ದಾಣದ ಪ್ರವೇಶವನ್ನು ಮುಚ್ಚಲಾಗುತ್ತಿದೆ. ಅಧಿಕಾರಿಗಳು ಪುನರಾಭಿವೃದ್ಧಿ ಕಾರ್ಯವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದು ಪ್ರಯಾಣಿಕರಿಗೆ ಓಡಾಡಲು ಪ್ರವೇಶ ನಿರ್ಬಂಧಿಸಲಾಗಿದೆ.
ತುಮಕೂರು ರಸ್ತೆಯ ಯಶವಂತಪುರ ಮೆಟ್ರೊ ನಿಲ್ದಾಣದ ಬಳಿ ಇರುವ ಪ್ಲಾಟ್‌ಫಾರ್ಮ್ 6 ಸೈಡ್ ಎಂಟ್ರಿಯಿಂದ ನಿಲ್ದಾಣಕ್ಕೆ ಪ್ರವೇಶಿಸಲು ಮತ್ತು ನಿಲ್ದಾಣದಲ್ಲಿನ ಕಾಲು ಮೇಲ್ಸೇತುವೆಗಳ ಮೂಲಕ ಇತರ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಪಡೆಯುವಂತೆ ನೈಋತ್ಯ ರೈಲ್ವೆ (ಎಸ್‌ಡಬ್ಲ್ಯೂಆರ್) ಅಧಿಕಾರಿಗಳು ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ.

ಪ್ಲಾಟ್‌ಫಾರ್ಮ್ 6 ರಲ್ಲಿ ಮಾತ್ರ ಪಾರ್ಕಿಂಗ್ ಲಭ್ಯವಿದ್ದು, ಶುಲ್ಕವನ್ನು ಪಾವತಿಸಿ ಬ್ಯಾಟರಿ ಚಾಲಿತ ಕಾರುಗಳನ್ನು ಪಡೆಯಬಹುದಾಗಿದೆ. ಡಿಜಿಟಲ್ ಮಾಹಿತಿ ಫಲಕಗಳು ಕೂಡ ಕೆಲವು ದಿನಗಳ ಕಾಲ ಕಾರ್ಯ ನಿರ್ವಹಿಸುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದ್ದರಿಂದ ಈ ಸಂದರ್ಭದಲ್ಲಿ ಎಲ್ಲಾ ರೈಲ್ವೇ ಸಂಬಂಧಿತ ಮಾಹಿತಿಯನ್ನು ಪ್ರಕಟಣೆಗಳ ಮೂಲಕ ಪ್ರಸಾರ ಮಾಡಲಾಗುತ್ತದೆ ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಹೆಚ್ಚಿನ ಸಹಾಯ ಬೇಕಾದರೆ ಸ್ಟೇಷನ್ ಮಾಸ್ಟರ್, ಡೆಪ್ಯುಟಿ ಸ್ಟೇಷನ್ ಮಾಸ್ಟರ್, ಮುಖ್ಯ ಟಿಕೆಟ್ ಇನ್‌ಸ್ಪೆಕ್ಟರ್ ಮತ್ತು ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ನೈಋತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ನಿಲ್ದಾಣಕ್ಕೆ ಹೊಸ ರೂಪ
ಯಶವಂತಪುರ ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಹೊಸ ಲುಕ್ ನೀಡಲಾಗುತ್ತಿದೆ. 377 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣದ ಟಚ್ ನೀಡಲಾಗುತ್ತಿದೆ. ಕರ್ನಾಟಕದ ಎರಡನೇ ಜನನಿಬಿಡ ರೈಲು ನಿಲ್ದಾಣದಲ್ಲಿ ರೈಲು-ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ದೀರ್ಘಾವಧಿಯ ಪ್ರಸ್ತಾಪವನ್ನು ಒಳಗೊಂಡಿಲ್ಲ.
ಕಳೆದ ತಿಂಗಳು, ನೈಋತ್ಯ ರೈಲ್ವೆ (SWR) ಕರಾವಳಿ ಕರ್ನಾಟಕದ ಮುರ್ಡೇಶ್ವರದಿಂದ ಯಶವಂತಪುರವನ್ನು ಸಂಪರ್ಕಿಸುವ ವಿಶೇಷ ಸಾಪ್ತಾಹಿಕ ರೈಲನ್ನು ಸ್ಥಗಿತಗೊಳಿಸುವುದಾಗಿ ಹೇಳಿತ್ತು. ರೈಲ್ವೇ ನಿಲ್ದಾಣದಲ್ಲಿ ಯಾವುದೇ ಪ್ಲಾಟ್‌ಫಾರ್ಮ್ ಖಾಲಿಯಿಲ್ಲದ ಕಾರಣ ಯಶವಂತಪುರದ ಮೊದಲು ಹಲವಾರು ಒಳಬರುವ ರೈಲುಗಳು ಹೇಗೆ ನಿಲ್ಲುತ್ತವೆ ಎಂದು ಪ್ರಯಾಣಿಕರು ಮೊದಲಿನಿಂದಲೂ ದೂರುತ್ತಿದ್ದಾರೆ.
ಯಶವಂತಪುರದಲ್ಲಿ ರೈಲ್ವೆ ಮತ್ತು ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುವ ಸ್ಕೈವಾಕ್ ನಿರ್ಮಿಸುವ ಪ್ರಸ್ತಾಪ ಒಂಬತ್ತು ವರ್ಷಗಳಿಂದ ಧೂಳು ಹಿಡಿಯುತ್ತಿದೆ. ರೈಲ್ವೇ ನಿಲ್ದಾಣದ ಒಳಗೆ ಮತ್ತು ಹೊರಗೆ ಬರಲು ತೊಂದರೆಯಾಗಿದೆ. ಮುಖ್ಯ ಪ್ರವೇಶವನ್ನು ಬಳಸುವ ಪ್ರಯಾಣಿಕರು (ಮಾರುಕಟ್ಟೆ ಬದಿಯಲ್ಲಿ) ವ್ಯಾಪಾರಿಗಳು ಮತ್ತು ಕ್ಯಾಬ್/ಆಟೋ ಡ್ರೈವರ್‌ಗಳೊಂದಿಗೆ ಜಗಳವಾಡುತ್ತಾರೆ. ತುಮಕೂರು ರಸ್ತೆ ಪ್ರವೇಶವನ್ನು ಬಳಸುವವರು ಅನೇಕ ಅಡೆತಡೆಗಳನ್ನು ನಿವಾರಿಸಬೇಕು. ಅವರು ಬಸ್ ಅಥವಾ ಮೆಟ್ರೋ ನಿಲ್ದಾಣಕ್ಕೆ ತೆರಳಲು ಭಾರಿ ತೊಂದರೆ ಅನುಭವಿಸುತ್ತಿದ್ದಾರೆ.
ಮಣ್ಣು ಪರೀಕ್ಷೆ, ಸಮೀಕ್ಷೆ ಮತ್ತು ಬಹು ಹಂತದ ಕಾರ್ ಪಾರ್ಕ್‌ಗಾಗಿ ಉತ್ಖನನ ಪೂರ್ಣಗೊಂಡಿರುವ ಮೂಲಕ ಯೋಜನೆಯು ವೇಗವನ್ನು ಪಡೆದುಕೊಂಡಿದೆ. ಹೆಚ್ಚಿನ ಪ್ಲಾಟ್‌ಫಾರ್ಮ್‌ಗಳು ಮತ್ತು ಪಿಟ್‌ಲೈನ್‌ಗಳ ಸೇರ್ಪಡೆ ಸೇರಿದಂತೆ ಯಾರ್ಡ್‌ನ ಮರುನಿರ್ಮಾಣ ಕಾರ್ಯಗಳು ಯೋಜನೆಯಲ್ಲಿಲ್ಲ.
ರೈಲ್ವೆ ಮತ್ತು ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸಲು ಸ್ಕೈವಾಕ್ ನಿರ್ಮಿಸುವ ಯೋಜನೆ ಅಂತಿಮ ಹಂತದಲ್ಲಿದೆ ಎಂದು ಅವರು ಹೇಳಿದರು. ಆದರೆ, ಕಾಮಗಾರಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ನಿರ್ವಹಿಸಬೇಕು.












Click it and Unblock the Notifications