Bengaluru: ಯಶವಂತಪುರ ರೈಲು ನಿಲ್ದಾಣದ ಪ್ರವೇಶ ದ್ವಾರ 1 ವರ್ಷ ಬಂದ್, ಪರ್ಯಾಯ ವ್ಯವಸ್ಥೆ ಏನು? ತಿಳಿಯಿರಿ
ಬೆಂಗಳೂರು, ಏಪ್ರಿಲ್ 12: ಸದಾ ಜನದಟ್ಟಣೆಯಿಂದ ತುಂಬಿರುವ ಉದ್ಯಾನ ನಗರಿ ಬೆಂಗಳೂರಿನಲ್ಲಿ ಅಭಿವೃದ್ಧಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ರೈಲು ನಿಲ್ದಾಣವೊಂದರ ಪ್ರವೇಶ ದ್ವಾರವನ್ನೇ ಬಂದ್ ಮಾಡಲಾಗಿದೆ. ಈ ಸಂಬಂಧ ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಹಾಗೂ ಮಲ್ಲೇಶ್ವರಂ, ಕೆಂಗೇರಿ ಹಾಗೂ ಯಶವಂತಪುರ ರೈಲು ನಿಲ್ದಾಣಗಳಿಂದ ನಿತ್ಯ ಲಕ್ಷಾಂತರ ಮಂದಿ ತಮ್ಮ ಊರುಗಳಿಗೆ ರೈಲುಗಳ ಮೂಲಕ ಪ್ರಯಾಣಿಸುತ್ತಾರೆ. ಈ ಪೈಕಿ ಯಶವಂತಪುರ ರೈಲು ನಿಲ್ದಾಣದ ಮೂರನೇ ಪ್ರವೇಶ ದ್ವಾರವನ್ನು ಒಟ್ಟು ಒಂದು ವರ್ಷ ಕಾಲ ಬಂದ್ ಆಗಿದೆ.

ಯಶವಂತಪುರ ರೈಲು ನಿಲ್ದಾಣದಲ್ಲಿ ಮಂಗಳವಾರ ಏಪ್ರಿಲ್ 11 ರಂದೇ ಈ ಮೂರನೇ ಪ್ರವೇಶ ದ್ವಾರವನ್ನು ಮುಚ್ಚಲಾಗಿದೆ. ಇದು ತೆರೆಯುವ ಮುಂದಿನ ವರ್ಷ 2024ರಂದು ಮಾರ್ಚ್ ಅಂತ್ಯಕ್ಕೆ ತೆರೆಯಲಾಗುವುದು ಎಂದು ಸೌಥ್ ವೆಸ್ಟರ್ನ್ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಏನು?
ನಿಲ್ದಾಣದ ಮರು ಅಭಿವೃದ್ಧಿ ಯೋಜನೆಯಿಂದಾಗಿ ಪ್ರಮುಖ ದ್ವಾರವು ಬಂದ್ ಆಗಿದೆ ಪ್ರಯಾಣಿಕರು ಪರ್ಯಾಯ ಪ್ರವೇಶ ದ್ವಾರದ (ಎರಡನೇ ಪ್ರವೇಶ) ಮೂಲಕ ಹಾದು ಹೋಗಬಹದು ಮತ್ತು ನಿಲ್ದಾಣದ ಒಳಗೆ ಬರಬಹುದು ಎಂದು ನೈರುತ್ಯ ಬೆಂಗಳೂರು ವಿಭಾಗೀಯ ಕಚೇರಿಯ ಅಧಿಕಾರಿಗಳು ಸಾರ್ವಜನಿರಲ್ಲಿ ಮನವಿ ಮಾಡಿದ್ದಾರೆ.
ಮಂಗಳವಾರದಿಂಧ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. ಹೀಗಾಗಿ ಯಶವಂತಪುರ ರೈಲು ನಿಲ್ದಾಣದಲ್ಲಿ ಮೂರನೇ ಪ್ರವೇಶವನ್ನು ಆಯ್ಕೆ ಮಾಡಲಾಗಿದೆ. ಮೂರನೇ ಪ್ರವೇಶದಲ್ಲಿರುವ ಎಸ್ಕಲೇಟರ್‌ಗಳು, ಫುಟ್ ಬ್ರಾಂಡ್ ಲಿಫ್ಟ್‌ಗಳು ಮತ್ತು ಇತರ ಪ್ರಯಾಣಿಕರ ಸೌಲಭ್ಯಗಳ ವ್ಯವಸ್ಥೆ ಇದ್ದು, ಪ್ರಯಾಣಿಕರ ಬಳಕೆಗೆ ಅವೆಲ್ಲುವ ಸದಾ ಲಭ್ಯವಾಗಿರಲಿವೆ ಎಂದು ಬೆಂಗಳೂರು ವಿಭಾಗದ ವ್ಯವಸ್ಥಾಪಕ ನಿರ್ದೇಶಕರು ಹೇಳಿದರು.

ಪ್ರಯಾಣಿಕರು ಸಂಚಾರಕ್ಕಾಗಿ ಫ್ಲಾಟ್‌ಫಾರಂ ನಂಬರ್ 1 ಇದು ಯಶವಂತಪುರ ಮಾರುಕಟ್ಟೆ ಕಡೆಗೆ ಹೋಗುವ ಮತ್ತು ಫ್ಲಾಟ್‌ಫಾರಂ ನಂಬರ್ 6 ಇದು ತುಮಕೂರು ರಸ್ತೆ ಕಡೆಗೆ ಕರೆದೊಯ್ಯು ಪ್ರವೇಶ ದ್ವಾರಗಳು ಇವೆ. ಇವೆರಡು ದ್ವಾರಗಳನ್ನು ಜನರು ಬಳಸಬಹುದಾಗಿದೆ.
ಯಶವಂತಪುರ ಸೇರಿದಂತೆ ಬೆಂಗಳೂರಿನ ಮುಖ್ಯ ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಹೈಟೆಕ್ ಆಗಲಿವೆ. ಕಂಟೋನ್ಮೆಂಟ್, ಯಶವಂತಪುರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಗಳ ನವೀರಕರಣ/ ಅಭಿವೃದ್ಧಿ ಇಲಾಖೆ ಯೋಜನೆ ರೂಪಿಸಿದೆ. ಮುಂದಿನ 3-4 ವರ್ಷಗಳಲ್ಲಿ ಇವು ರೈಲ್ವೆ ನಿಲ್ದಾಣವೇ? ಎಂಬಷ್ಟರ ಮಟ್ಟಿಗೆ ಬದಲಾಗಲಿವೆ ಎನ್ನಲಾಗಿದೆ.
ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೂನ್ 20ರಂದು ಯಶವಂತಪುರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅದರ ಟೆಂಡರ್ ಪ್ರಕ್ರಿಯೆ ಸಹ ಪ್ರಾರಂಭವಾದರೆ, ಮುಂದಿನ ಕೆಲವೇ ತಿಂಗಳುಗಳಲ್ಲಿ ನಿಲ್ದಾಣಗಳು ಹೈಟೆಕ್ ಆಗಿ ಪ್ರಯಾಣಿಕರನ್ನು ಸೆಳೆಯಲಿವೆ.
ಯಶವಂತಪುರ ಮರು ಅಭಿವೃದ್ಧಿ/ವಿನ್ಯಾಸ ಹೇಗಿರಲಿದೆ?
ಮಜೆಸ್ಟಿಕ್ ನಂತರ ಅತ್ಯಧಿಕ ಜನರ ಸಾಮರ್ಥ್ಯ ಹೊಂದಿರುವ ಯಶವಂತಪುರ ರೈಲು ನಿಲ್ದಾಣ ರಾಜಧಾನಿಯಲ್ಲಿ ಎರಡನೇ ದೊಡ್ಡ ಜನದಟ್ಟಣೆಯ ಟರ್ಮಿನಲ್ ಆಗಿ ಗುರುತಿಸಿಕೊಂಡಿದೆ. 130 ವರ್ಷದ ಹಿಂದೆ ನಿರ್ಮಾಣವಾಗಿದೆ. ಇದೀದ ಈ ನಿಲ್ದಾಣವು ಒಟ್ಟು ಅಂದಾಜು 375 ಕೋಟಿ ರೂ. ಮೊತ್ತದಲ್ಲಿ ನವೀಕರಣಗೊಳ್ಳಲಿದೆ.
ಆದಷ್ಟು ಶೀಘ್ರವೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಅತ್ಯಾಧುನಿಕ ಸೌಲಭ್ಯ, ಗುಣಮಟ್ಟದ ಮೂಲಭೂತ ಸೌಕರ್ಯಗಳು, ಹವಾನಿಯಂತ್ರಣ ವ್ಯವಸ್ಥೆ, ಪ್ರಯಾಣಿಕರಿಗೆ ವಿಶ್ರಾಂತಿ ಕೊಠಡಿ ಒಳಗೊಂಡಂತೆ ನಿಲ್ದಾಣವು ಹೈಟೆಕ್ ಆಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications