ಆರೋಗ್ಯ ಸಮಸ್ಯೆ: ಯಡಿಯೂರಪ್ಪ ಎಲ್ಲ ಕಾರ್ಯಕ್ರಮ ರದ್ದು
ಬೆಂಗಳೂರು, ಜನವರಿ 08: ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಸಿಎಂ ಯಡಿಯೂರಪ್ಪ ಅವರ ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.
ಕೆಲವು ಸರ್ಕಾರಿ ಸಭೆಗಳನ್ನು ಯಡಿಯೂರಪ್ಪ ಬದಲಿಗೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ನಡೆಸಿಕೊಡಲಿದ್ದಾರೆ. ಆದರೆ ಇನ್ನುಳಿದ ಕಾರ್ಯಕ್ರಮಗಳು ರದ್ದಾಗಿವೆ.
ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಇಂದು ಧವಳಗಿರಿ ನಿವಾಸದಲ್ಲಿಯೇ ಯಡಿಯೂರಪ್ಪ ವಿಶ್ರಾಂತಿ ಪಡೆಯಲಿದ್ದಾರೆ.

ನಿನ್ನೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ಅವರು ದಣಿದಿದ್ದರು. ಹಾಗಾಗಿ ಆರೋಗ್ಯದಲ್ಲಿ ಅಲ್ಪ ವ್ಯತ್ಯಯ ಆಗಿದೆ. ವೈದ್ಯರು ಚಿಕಿತ್ಸೆ ನೀಡಿದ್ದು ವಿಶ್ರಾಂತಿಗೆ ಸಲಹೆ ಮಾಡಿದ್ದಾರೆ. ಹಾಗಾಗಿ ಇಂದು ಧವಳಗಿರಿಯಲ್ಲೇ ಉಳಿದು ವಿಶ್ರಾಂತಿ ಪಡೆಯುತ್ತಿದ್ದಾರೆ.
ಕೃಷ್ಣಾದಲ್ಲಿ ಸಭೆಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಇಂದು ಯಡಿಯೂರಪ್ಪ ಭಾಗವಹಿಸಬೇಕಾಗಿತ್ತು, ಆದರೆ ಅವೆಲ್ಲವೂ ರದ್ದಾಗಿವೆ.












Click it and Unblock the Notifications