ಲೇಖಕ- ಪತ್ರಕರ್ತ ರವಿ ಬೆಳಗೆರೆ 'ಫ್ರಮ್ ಪುಲ್ವಾಮಾ' ಪುಸ್ತಕ ಜೂನ್ 9ಕ್ಕೆ ಬಿಡುಗಡೆ
ಬೆಂಗಳೂರು, ಜೂನ್ 5: ಲೇಖಕ- ಪತ್ರಕರ್ತ ರವಿ ಬೆಳಗೆರೆ ಅವರ ಮತ್ತೊಂದು ಹೊಸ ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ. ಆ ಪುಸ್ತಕದ ಪ್ರತಿ ಒನ್ ಇಂಡಿಯಾ ಕನ್ನಡಕ್ಕೆ ಲಭ್ಯವಾಗಿದ್ದು, ರವಿ ಬೆಳಗೆರೆ ಅವರು ಒಪ್ಪಿಗೆ ನೀಡುವುದಾದರೆ ಪುಸ್ತಕದ ಒಂದು ಅಧ್ಯಾಯವನ್ನು ಒನ್ ಇಂಡಿಯಾ ಕನ್ನಡ ಓದುಗರಿಗಾಗಿ ಬಿಡುಗಡೆಗೆ ಮುನ್ನ ಪ್ರಕಟಿಸುವ ಉದ್ದೇಶ ಇದೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸ್ವತಃ ರವಿ ಬೆಳಗೆರೆ ಅವರು ಆಹ್ವಾನ ನೀಡಿದ್ದಾರೆ. ಅದು ಹೀಗಿದೆ:
ನಾಳೆ ಒಂಭತ್ತು, ಜೂನ್ 2019ರ ಭಾನುವಾರ ಸಂಜೆ ಪದ್ಮನಾಭ ನಗರದಲ್ಲಿರುವ ಪ್ರಾರ್ಥನಾ ಶಾಲೆಯ ಹಿಂದೆ ಹಾಯ್ ಬೆಂಗಳೂರ್ ಕಚೇರಿಯ ಕೆಳಗೆ ನನ್ನ ಅಪರೂಪದ ಕೃತಿ ಫ್ರಮ್ ಪುಲ್ವಾಮಾ ಬಿಡುಗಡೆಯಾಗುತ್ತಿದೆ. ಬೆಲೆ 110 ರೂಪಾಯಿ. ಬೇಗ ಐದು ಗಂಟೆಗೆ ಬಂದರೆ ಪ್ರತಿ ಸಿಗುತ್ತದೆ.

ಪುಲ್ವಾಮಾ ಸೇರಿದಂತೆ ನನ್ನ ಅನೇಕ ಪುಸ್ತಕಗಳು ರಿಯಾಯಿತಿಯಲ್ಲಿ ಸಿಗುತ್ತವೆ. ಮನೆಯಲ್ಲಿ ಪುಸ್ತಕವಿದ್ದರೆ ಅದು ತಲೆತಲಾಂತರದ ಆಸ್ತಿ. ನಿಮಗೆ, ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೂ ಆಸ್ತಿಯೇ. ದಯವಿಟ್ಟು ಕೊಂಡುಕೊಳ್ಳಿ.
ಅವತ್ತು ನನ್ನ ಅಪರೂಪದ ಗೆಳೆಯರಾದ ಅಡ್ವೊಕೇಟ್ ರೇವಣಸಿದ್ದಯ್ಯನವರು, ರಮೇಶ್ ಸೊನ್ನ, ಹಿರಿಯರಾದ ನಲ್ಲಮುತ್ತು, ಜೋಗಿ, ವಿಕಾಸ್ ನೇಗಿಲೋಣಿ, ಗೆಳತಿ ನಾಗ ಚಂದ್ರಿಕ ಎಲ್ಲ ಬರುತ್ತಾರೆ. ಅತಿ ಮುಖ್ಯವಾಗಿ ಅವತ್ತಿನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದು ಚಂದ್ರಶೇಖರ ಆಲೂರು ಅವರು ಕೃತಿ ಬಗ್ಗೆ ಮಾತನಾಡುತ್ತಾರೆ. ಮತ್ತು ಅವತ್ತು ನೀವಿರುತ್ತೀರಿ, ನಾನಿರುತ್ತೇನೆ. ಸಾಕಲ್ಲವೆ?!












Click it and Unblock the Notifications