Bengaluru : ಕಚಡಾ ಗಾಡಿ ತಗೊಬೇಡಿ! ಬೆಂಗಳೂರಿನಲ್ಲಿ ಆಟೋ ಹಿಂದಿನ ಬರಹ ವೈರಲ್
ಸಾಮಾನ್ಯವಾಗಿ ನಾವು ಆಟೋ ರಿಕ್ಷಾಗಳ ಹಿಂದೆ ಕವಿತೆಗಳು, ಕವನಗಳು, ತಾತ್ಪರ್ಯಗಳು, ಅಪ್ಪ ಅಮ್ಮನ ಆಶೀರ್ವಾದ ಈ ರೀತಿಯ ಬರಹಗಳನ್ನು ನೋಡುತ್ತೇವೆ. ಇನ್ನೂ ಕೆಲವು ಆಟೋ ಡ್ರೈವರ್ ಗಳು ಕನ್ನಡ ಅಭಿಮಾನ, ನೆಚ್ಚಿನ ನಟರ ಚಿತ್ರಗಳ ಹೆಸರು, ಫೋಟೊಗಳನ್ನು ಹಾಕಿಕೊಂಡಿರುತ್ತಾರೆ. ಆದರೆ ಇಲ್ಲೊಬ್ಬ ಆಟೋ ಚಾಲಕ ಮಾತ್ರ ತಾನು ತೆಗೆದುಕೊಂಡ ಅಟೋ ಮೇಲೆ ಅದನ್ನು ಖರೀದಿ ಮಾಡದಂತೆ ಬರೆದಿದ್ದು ವ್ಯಾಪಕ ವೈರಲ್ ಆಗಿದೆ.
ಆಟೋರಿಕ್ಷಾಗಳ ಹಿಂದೆ ಜಾಹೀರಾತು ಕೂಡ ನೀಡುವುದು ಸಾಮಾನ್ಯವಾಗಿದೆ. ಬೆಂಗಳೂರಿನ ಆಟೋರಿಕ್ಷಾವೊಂದು "ಈ ವಾಹನವನ್ನು ಖರೀದಿಸದಂತೆ ಇತರರನ್ನು ಎಚ್ಚರಿಸಲು" ಆಯ್ಕೆ ಮಾಡಿದೆ.

ಬೆಂಗಳೂರಿನ ವಕೀಲರಾದ ಆಶಿಶ್ ಕೃಪಾಕರ್ (@followdcounsel) ಅವರು ಈ ಫೋಟೋವನ್ನು ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಟೋರಿಕ್ಷಾ ಚಾಲಕನು ತನ್ನ ವಾಹನದ ಹಿಂಭಾಗದಲ್ಲಿ "ಕಚಡಾ ವಾಹನ ಖರೀದಿಸಬೇಡಿ" ಎಂದು ಬರೆದಿದ್ದು, ಈ ಚಿತ್ರ ವ್ಯಾಪಕವಾಗಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್!
"ಕೆಟ್ಟ ಉತ್ಪನ್ನವನ್ನು ಖರೀದಿಸಬೇಡಿ ಎಂದು ಇತರರಿಗೆ ಹೇಳಲು ಹೊಸ ವಿಧಾನವಾಗಿದೆ! ಕೇವಲ ನಮ್ಮ ಬೆಂಗಳೂರಿನ ವಿಷಯಗಳು" ಎಂದು ಆಶಿಶ್ ಕೃಪಾಕರ್ ಬರೆದಿದ್ದಾರೆ. ಇದು ಭಾರತದಲ್ಲಿ ವಾಹನಗಳ ಸಮಸ್ಯೆಗಳನ್ನು ಪರಿಹರಿಸಲು ಕಂಪನಿಗಳು ಹೆಚ್ಚಿನ ಕಾಳಜಿ ತೋರಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಆಟೊರಿಕ್ಷಾವನ್ನು ತಯಾರಿಸುವ ಕಂಪನಿಯಾದ ಪಿಯಾಜಿಯೊವನ್ನು ಟ್ಯಾಗ್ ಮಾಡಿದ ಮತ್ತೊಬ್ಬ ನೆಟ್ಟಿಗರು "ಪ್ಲೀಸ್ ಆತನ ಸಮಸ್ಯೆಯನ್ನು ಬಗೆಹರಿಸಿ, ಎಷ್ಟು ಸಮಯದವರೆಗೆ ಅವನನ್ನು ನೋವಿನಿಂದ ಅಳಿಸುತ್ತೀರಿ" ಎಂದು ಬರೆದಿದ್ದಾರೆ.
ವಿದೇಶದಲ್ಲಿ ಬೆಳೆಯದ ಪ್ರತಿಯೊಂದು ಬ್ರ್ಯಾಂಡ್ ಭಾರತ್‌ನಲ್ಲಿ ವಿಫಲಗೊಳ್ಳುತ್ತದೆ. ಆಟೋ ಇಂಡಸ್ಟ್ರಿಯಲ್ಲಿರುವುದರಿಂದ, ಫೋರ್ಡ್‌ನ ನಿರ್ಗಮನದ ಕಥೆಗಳು, ಹ್ಯುಂಡೈನ ಮಾರುಕಟ್ಟೆ ಷೇರಿನ ಕುಸಿತ, ಮಾರುತಿಯ ಸಂಪೂರ್ಣ ಜನಪ್ರಿಯತೆ, ನಂತರ ನಾವು ಬಜಾಜ್, ಹೀರೋ ಮತ್ತು ಆರ್ ಇ ಎಂದು ನಾನು ಖಂಡಿತವಾಗಿ ಹೇಳಬಲ್ಲೆ. ನೀವು ಹೊಂದಿರುವ ಉತ್ಪನ್ನವನ್ನು ಭಾರತಕ್ಕೆ ಹೊಂದಿಸಲು ನಿಮಗೆ ಸಾಧ್ಯವಿಲ್ಲ, ಭಾರತಕ್ಕಾಗಿ ನಿರ್ಧಿಷ್ಟವಾಗಿ ವಾಹನ ಅಭಿವೃದ್ಧಿ ಪಡಿಸಿ ಎಂದು ಒತ್ತಾಯಿಸಿದ್ದಾರೆ.
ಈ ಪೋಸ್ಟ್ ಅನ್ನು ಸುಮಾರು 45 ಸಾವಿರ ಜನ ಈವರೆಗೂ ವೀಕ್ಷಣೆ ಮಾಡಿದ್ದಾರೆ. ಆಟೋ ಕಂಪನಿ ಆತನಿಗೆ ಸರಿಯಾಗಿ ಸ್ಪಂದಿಸದ ಸಿಟ್ಟಿನಿಂದ ಈ ರೀತಿ ಸಿಟ್ಟಿನಲ್ಲಿ ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್‌ಸ್ಟಾಗ್ರಾಂ ಖಾತೆ ಪ್ರಚಾರ
ಸೆಪ್ಟೆಂಬರ್‌ನಲ್ಲಿ, ಬೆಂಗಳೂರಿನ ಆಟೋರಿಕ್ಷಾ ಚಾಲಕನೊಬ್ಬ ತನ್ನ ಇನ್‌ಸ್ಟಾಗ್ರಾಂ ಖಾತೆಯ ಹೆಸರನ್ನು ವಾಹನದ ಮೇಲೆ ಮುದ್ರಿಸುವ ಮೂಲಕ ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಮಾರ್ಕೆಟಿಂಗ್ ಮಾಡುತ್ತಿದ್ದ ರೀತಿಯಲ್ಲಿ ವ್ಯಕ್ತಿಯೊಬ್ಬರು ಪ್ರಭಾವಿತರಾಗಿದ್ದರು.
ಅವರು ಆಟೋರಿಕ್ಷಾದ ಒಳಗಿನಿಂದ ಚಾಲಕನ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಅನ್ನು ಮುಂಭಾಗದಲ್ಲಿ ಮುದ್ರಿಸಿದ ಫೋಟೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ರಿಕ್ಷಾ ಚಾಲಕನು ತನ್ನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಮತ್ತು ಅವನನ್ನು ಟ್ಯಾಗ್ ಮಾಡಲು ಬಯಸುತ್ತಾನೆ ಎಂದು ಅವರು ಹೇಳಿದರು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Dr BR Ambedkar: ಚುನಾವಣೆಯಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಸೋಲಿಸಿದ್ದು ಕಾಂಗ್ರೆಸ್ ಪಕ್ಷವಲ್ಲ: ಸಿದ್ದರಾಮಯ್ಯ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
Viral: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪಾದಚಾರಿಗಳೇ ಕಾರಣವೆಂದ ಸಂಸ್ಥಾಪಕ: ಕಿಡಿಕಾರಿದ ನೆಟ್ಟಿಗರು -
Amruthadhare Serial: ಜೈದೇವ್ ಅಟ್ಟಹಾಸಕ್ಕೆ ಬ್ರೇಕ್ ಬೇಕು: ಗೌತಮ್ ದಿವಾನ್ಗೆ ಆಕ್ಷನ್ ಕೊಡಿ ಎಂದ ವೀಕ್ಷಕರು -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ












Click it and Unblock the Notifications