ಅಭಿನಂದನ್‌ಗೂ ಬೆಂಗಳೂರಿಗೂ ಅಳಿಯದ ನಂಟು ಇದೆ

ಬೆಂಗಳೂರು, ಫೆಬ್ರವರಿ 01: ಪಾಕ್ ಸೇನೆ ವಶದಲ್ಲಿ ಎರಡು ದಿನ ಇದ್ದು ಇದೀಗ ವಾಪಸ್ಸಾಗುತ್ತಿರುವ ಭಾರತೀಯ ಸೇನೆಯ ವೀರ ಯೋಧ ಅಭಿನಂದನ್‌ಗೂ ಬೆಂಗಳೂರಿಗೆ ಆತ್ಮೀಯವಾದ ನಂಟಿದೆ.

ಹೌದು, ಅಭಿನಂದನ್ ಹುಟ್ಟಿದ್ದು ತಮಿಳುನಾಡಿನಲ್ಲಾದರೂ ಅವರು ಬಾಲ್ಯ ಕಳೆದಿದ್ದು ಬೆಂಗಳೂರಿನಲ್ಲಿ. ಅಭಿನಂದನ್ ಅವರ ಬಾಲ್ಯದ ನೆನಪುಗಳೆಲ್ಲವೂ ಬೆಂಗಳೂರಿನವೇ. ಅವರ ಪ್ರೌಢಶಿಕ್ಷಣ ಮತ್ತು ಕಾಲೇಜು ಶಿಕ್ಷಣಗಳು ಬೆಂಗಳೂರಿನಲ್ಲೇ ಆಗಿದ್ದು.

ಹೌದು, ಸಿವಿ ರಾಮನ್‌ ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯ (ಡಿಆರ್‌ಡಿಓ) ಶಾಲೆಯಲ್ಲಿ ಅಭಿನಂದನ್ ಅವರು ಪ್ರೌಢಶಾಲೆ ಶಿಕ್ಷಣ ಮುಗಿಸಿದರು. ಆ ನಂತರ ಎಚ್‌ಎಎಲ್‌ ಸಮೀಪದ ಕೇಂದ್ರೀಯ ವಿದ್ಯಾಲಯ (ಎನ್‌ಎಎಲ್‌) ದಲ್ಲಿ ಅವರು ಪಿಯು ಶಿಕ್ಷಣ ಮುಗಿಸಿದ್ದಾರೆ.

Wing commander Abhinandan was lived in Bengaluru

1998 ರಲ್ಲಿ ಅಭಿನಂದನ್ ಅವರು 10ನೇ ತರಗತಿ ಮುಗಿಸಿದ್ದಾಗಿ ಶಾಲೆಯ ದಾಖಲೆಗಳಿಂದ ಗೊತ್ತಾಗುತ್ತದೆ. ಅವರು ಪಿಯುಸಿ ಶಿಕ್ಷಣವನ್ನು 2001-02 ರಲ್ಲಿ ಮುಗಿಸಿದ್ದಾರೆ. ಈ ಅವಧಿಯಲ್ಲಿ ಅವರು ಬೆಂಗಳೂರಿನಲ್ಲೇ ವಾಸವಿದ್ದರು.

ಬೆಂಗಳೂರು ಮಿರರ್ ಪತ್ರಿಕೆಯು ಅಭಿನಂದನ್ ಅವರ ಹಳೆಯ ಶಿಕ್ಷಕರನ್ನು ಮಾತನಾಡಿಸಿದ್ದು, ಎಲ್ಲರೂ 'ಅಭಿನಂದನ್ ಅತ್ಯುತ್ತಮ ಕ್ರೀಡಾಪಟುವಾಗಿದ್ದ ಮತ್ತು ಒಳ್ಳೆಯ ವಿದ್ಯಾರ್ಥಿ ಆಗಿದ್ದ' ಎಂದು ನೆನಪಿಸಿಕೊಂಡಿದ್ದಾರೆ.

ಅಭಿನಂದನ್ ಅವರ ತಂದೆ ಬಹು ಕಾಲ ಬೆಂಗಳೂರಿನಲ್ಲಿ ಇದ್ದರು. ಅಭಿನಂದನ್ ಅವರ ತಂದೆ ನಿವೃತ್ತರಾಗುವ ಮುನ್ನಾ ಯಲಹಂಕದ ವಾಯುನೆಲೆಯಲ್ಲಿ ಕೆಲಸ ಮಾಡುವಾಗ ಅಭಿನಂದನ್ ಅವರು ಅವರ ಭೇಟಿಗೆ ಬಂದಿದ್ದರು. ಆಗ ಅವರು ಕೇಂದ್ರೀಯ ವಿದ್ಯಾಲಯ ಶಾಲೆಗೂ ಭೇಟಿ ನೀಡಿದ್ದರು ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+