ಎಚ್ಡಿಕೆಗೆ ಮೈತ್ರಿ ಧರ್ಮ ಕಲಿಸುತ್ತೇನೆ ಎಂದು ಗುಡುಗಿದ ಸಿದ್ದರಾಮಯ್ಯ

ಬೆಂಗಳೂರು, ಜು.19: ವಿವಿ ಸಿಂಡಿಕೇಟ್‌ ನಾಮನಿರ್ದೇಶಿತ ಸದಸ್ಯರ ವಾಪಸ್‌ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ಈ ಕುರಿತು ಕೆಲವು ಸಿಂಡಿಕೇಟ್‌ ಸದಸ್ಯರಿಗೆ ಕರೆ ಮಾಡಿ ಮಾತನಾಡಿದ್ದು, ಸಮ್ಮಿಶ್ರ ಸರ್ಕಾರ ಧರ್ಮ ಪಾಲಿಸುತ್ತಿಲ್ಲ, ಎಚ್‌ಡಿಕೆಗೆ ಸಮ್ಮಿಶ್ರ ಸರ್ಕಾರದ ಧರ್ಮವನ್ನು ಹೇಳಿಕೊಡುತ್ತೇನೆ ಎಂದು ಹೇಳಿದ್ದಾರೆ, ಜತೆಗೆ ಇದರಲ್ಲಿ ನಮ್ಮ ಪಕ್ಷದ ಬೆಂಬಲವಿದೆ, ನನಗೆ ಗೊತ್ತಿದೆ ಈ ವಿಚಾರವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ ಪಕ್ಷದ ಇಬ್ಬರು ನಾಯಕರೇ ಇದಕ್ಕೆ ಹೊಣೆ ಎಂದು ಡಿಸಿಎಂ ಜಿ ಪರಮೇಶ್ವರ್‌ ಹಾಗೂ ಸಚಿವ ಡಿಕೆ ಶಿವಕುಮಾರ್‌ ವಿರುದ್ಧ ಹರಿಹಾಯ್ದಿದ್ದಾರೆ. ಎಲ್ಲರಿಗೂ ಅಧಿಕಾರ ಮುಖ್ಯವಾಗಿದೆ ಆದರೆ ಅಧಿಕಾರ ಒಂದೇ ಅಲ್ಲ ಪಕ್ಷವೂ ಕೂಡ ಮುಖ್ಯವಾದದ್ದು, ಅಧಿಕಾರದಾಸೆಗೆ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಕುಮಾರಸ್ವಾಮಿ ಹೇಳಿದಂತೆ ಕುಣಿಯುತ್ತಿದ್ದಾರೆ, ಸಮನ್ವಯ ಸಮಿತಿ ಸಭೆಯಲ್ಲಿ ಮೈತ್ರಿ ಪಾಲನೆ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ.

Will teach coalition Dharma: Siddaramaiah warns HDK

ಸಿಂಡಿಕೇಟ್‌ ಸದಸ್ಯರನ್ನು ಹಿಂಪಡೆಯದಂತೆ ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್‌ಡಿ ಕುಮಾರಸ್ವಾಮಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರಿಗೆ ಪತ್ರ ಬರೆದಿದ್ದರು ಆದರೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ, ಸದಸ್ಯರನ್ನು ಹಿಂಪಡೆಯಲಾಗಿದ್ದು ಈ ಕುರಿತು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+