ಬೆಂಗಳೂರಿನ 100 ಕಡೆ ನಿರ್ಮಾಣವಾಗಲಿದೆ ತ್ಯಾಜ್ಯ ಟ್ರಾನ್ಸ್‌ಫರ್‌ ಸ್ಟೇಷನ್‌

ಬೆಂಗಳೂರು, ಜೂನ್‌ 28: ಬಿಬಿಎಂಪಿಯು ಕೆಲವು ವಾರ್ಡ್‌ಗಳಲ್ಲಿ ದ್ವಿತೀಯ ಹಂತದ ಕಸಸಂಗ್ರಹಣೆಗಾಗಿ ಸಣ್ಣ ಪ್ರಮಾಣದ ತ್ಯಾಜ್ಯ ವರ್ಗಾವಣೆ ಘಟಕಗಳನ್ನು ನಿರ್ಮಿಸಲು ಮುಂದಾಗಿದೆ.

ಎರಡು ದಿನಕ್ಕೊಮ್ಮೆ ಮನೆಮನೆಗೂ ತೆರಳಿ ಪೌರಕಾರ್ಮಿಕರು ಕಸ ಸಂಗ್ರಹಿಸುತ್ತಾರೆ, ಈ ಕಾಂಪ್ಯಾಕ್ಟರ್‌ಗಳಿಗೆ ಕಸ ತುಂಬುವ ಜಾಗಗಳಲ್ಲಿ ದುರ್ವಾಸನೆ ಬೀರುತ್ತಿರುತ್ತದೆ ಜತೆಗೆ ಟ್ರಾಫಿಜ್‌ ಜಾಮ್‌ ಕೂಡ ಉಂಟಾಗುತ್ತದೆ ಹೀಗಾಗಿ ದ್ವಿಯೀಯ ಹಂತದ ಕಸ ಸಂಗ್ರಹಣೆಗಾಗಿ ಘಟಕವನ್ನು ತೆರೆಯಲು ಚಿಂತನೆ ನಡೆದಿದೆ.

ಮನೆಮನೆಯಿಂದ ಸಂಗ್ರಹಿಸಿದ ಕಸವನ್ನು ವಾರ್ಡ್‌ವಾರು 4-5 ಸ್ಥಳಗಳಲ್ಲಿ ಕಾಂಪ್ಯಾಕ್ಟರ್‌ಗಳಿಗೆ ತುಂಬಿ ಸಂಸ್ಕರಣಾ ಘಟಕಗಳಿಗೆ ಕಳುಹಿಸುವ ವ್ಯವಸ್ಥೆ ಇದೆ. ಆದರೆ, ಇದರಿಂದ ತ್ಯಾಜ್ಯವು ಎಲ್ಲೆಂದರಲ್ಲಿ ಹರಡಿ ಕಪ್ಪು ಚುಕ್ಕೆ ಪ್ರದೇಶಗಳು ಹೆಚ್ಚಾಗುತ್ತಿದೆ. ಅಲ್ಲದೆ ರಸ್ತೆ ಬದಿ, ಮನೆಗಳ ಮುಂಭಾಗ ತ್ಯಾಜ್ಯ ವರ್ಗಾವಣೆ ಮಾಡಲು ಸ್ಥಳೀಯ ನಿವಾಸಿಗಳಿಂದ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ.

Waste transfer stations at 100 places in Bengaluru

ಈ ಕಾರಣದಿಂದ ಬಿಬಿಎಂಪಿ ಬ್ಲಾಕ್‌ ಸ್ಪಾಟ್‌ಗಳನ್ನು ನಿರ್ಮೂಲನೆ ಮಾಡಲು ಕೋಲ್ಕತ್ತಾ ಮಾದರಿಯಲ್ಲಿ ಟ್ರಾನ್ಸ್‌ಫರ್‌ ಸ್ಟೇಷನ್‌ಗಳನ್ನು ನಿರ್ಮಿಸಲು ಜಾಗಗಳನ್ನು ಗುರುತಿಸಿದೆ. ಕೆಲವೊಂದು ವಾರ್ಡ್‌ಗಳು ಸೇರಿದಂತೆ 100 ಕಡೆ ಟ್ರಾನ್ಸ್‌ಫರ್‌ ಸ್ಟೇಷನ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 246.01 ಕೋಟಿ ರೂ.. ವೆಚ್ಚಮಾಡಲಾಗುತ್ತಿದೆ. ಇದೀಗ 50 ಸ್ಥಳಗಳನ್ನು ಗುರುತಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+